AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ: ಗಂಗಾವತಿಯ ಬಸ್ ನಿಲ್ದಾಣದಲ್ಲಿ ಪಿಕ್​ಪಾಕೆಟ್ ಕೃತ್ಯದ ದೃಶ್ಯವೊಂದು ಮೊಬೈಲ್ ಕೆಮೆರಾದಲ್ಲಿ ಸೆರೆ!

ಕೊಪ್ಪಳ: ಗಂಗಾವತಿಯ ಬಸ್ ನಿಲ್ದಾಣದಲ್ಲಿ ಪಿಕ್​ಪಾಕೆಟ್ ಕೃತ್ಯದ ದೃಶ್ಯವೊಂದು ಮೊಬೈಲ್ ಕೆಮೆರಾದಲ್ಲಿ ಸೆರೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 18, 2023 | 1:07 PM

ಬಸ್ ಹಿಂಬದಿ ಕಾರೊಂದರಲ್ಲಿದ್ದ ವ್ಯಕ್ತಿ ಕಳ್ಳನ ಕರಾಮತ್ತನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಸಾಮಾನ್ಯವಾಗಿ, ಇಂಥ ಕೃತ್ಯಗಳು ಅಂದರೆ ಪಿಕ್ ಪಾಕೆಟ್ ನಂಥ ಕೆಲಸಗಳು ಎಲ್ಲ ಬಸ್ ನಿಲ್ದಾಣಗಳಲ್ಲಿ ನಡೆಯುತ್ತವೆ. ಪಿಕ್ ಪಾಕೆಟ್ ಗಳು ಹೀಗೆ ರಷ್ ಇರುವಂಥ ಬಸ್ ಗಳನ್ನು ಆರಿಸಿಕೊಳ್ಳುತ್ತಾರೆ. ನೂಕು ನುಗ್ಗುಲಿನಲ್ಲಿ ಜನಕ್ಕೆ ಪರ್ಸ್ ಮೇಲೆ ಅರಿವಿರುವುದಿಲ್ಲ ಅಂತ ಅವರಿಗೆ ಗೊತ್ತಿರುತ್ತದೆ.

ಕೊಪ್ಪಳ: ಇಲ್ಲಿದ್ದಾನಲ್ಲ ಖದೀಮ ಹಸಿರು ಬಣ್ಣದ ಚೆಕ್ಸ್ ಶರ್ಟ್ (green checks shirt) ತೊಟ್ಟಿರೋನು; ಅವನು ಯಾವ ಊರಿಗೂ ಹೋಗುತ್ತಿಲ್ಲ. ಒಬ್ಬ ಪ್ರಯಾಣಿಕ (passenger) ಬಸ್ ಹತ್ತುತ್ತಿರುವಂತೆ ನಟಿಸುತ್ತಿದ್ದಾನೆ ಅಷ್ಟೆ. ಅವನ ಉದ್ದೇಶವೇ ಬೇರೆ ಮಾರಾಯ್ರೆ! ಅದನ್ನು ನಾವು ಹೇಳುವ ಅವಶ್ಯಕತೆಯಿಲ್ಲ, ಅವನ ಕೃತ್ಯ ಸ್ಪಷ್ಟವಾಗಿ ಕಾಣುತ್ತಿದೆ, ನೀವು ನೋಡಬಹುದು. ತನ್ನ ಮುಂದಿರುವ ಜೀನ್ಸ್ ಧಾರಿ ವ್ಯಕ್ತಿಯ (Jeans clad person) ಹಿಂದಿನ ಜೇಬಿನಿಂದ ಅವನು ಚಾಣಾಕ್ಷತೆಯಿಂದ ಪರ್ಸ್ ಹಾರಿಸುತ್ತಾನೆ. ಪಾಪ, ಆ ವ್ಕಕ್ತಿಗೆ ಏನಾಗುತ್ತಿದೆ ಅಂತ ಗೊತ್ತು ಕೂಡ ಆಗಿಲ್ಲ. ಕಳ್ಳನ ಚಾಣಾಕ್ಷತೆಯನ್ನು ಮೆಚ್ಚಲೇಬೇಕು. ಬಸ್ ಹತ್ತಿದಂತೆ ಮಾಡುವ ಅವನು ಪರ್ಸ್ ಜೇಬಿಂದ ಎತ್ತಲು ಸೂಕ್ತವಾವ ಕ್ಷಣಕ್ಕಾಗಿ ಕಾಯುತ್ತಾನೆ. ವ್ಯಕ್ತಿ ತನ್ನ ಬಲಗಾಲನ್ನು ಬಸ್ ಮೆಟ್ಟಿಲ ಮೇಲಿಟ್ಟು ಹತ್ತುವಾಗ ಪಿಕ್ ಪಾಕೆಟ್ ತನ್ನ ಕೈಚಳಕ ಮೆರೆಯುತ್ತಾನೆ. ಇದು ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ನಡೆದಿರುವ ಘಟನೆ. ಬಸ್ ಹಿಂಬದಿ ಕಾರೊಂದರಲ್ಲಿದ್ದ ವ್ಯಕ್ತಿ ಕಳ್ಳನ ಕರಾಮತ್ತನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಸಾಮಾನ್ಯವಾಗಿ, ಇಂಥ ಕೃತ್ಯಗಳು ಅಂದರೆ ಪಿಕ್ ಪಾಕೆಟ್ ನಂಥ ಕೆಲಸಗಳು ಎಲ್ಲ ಬಸ್ ನಿಲ್ದಾಣಗಳಲ್ಲಿ ನಡೆಯುತ್ತವೆ. ಪಿಕ್ ಪಾಕೆಟ್ ಗಳು ಹೀಗೆ ರಷ್ ಇರುವಂಥ ಬಸ್ ಗಳನ್ನು ಆರಿಸಿಕೊಳ್ಳುತ್ತಾರೆ. ನೂಕು ನುಗ್ಗುಲಿನಲ್ಲಿ ಜನಕ್ಕೆ ಪರ್ಸ್ ಮೇಲೆ ಅರಿವಿರುವುದಿಲ್ಲ ಅಂತ ಅವರಿಗೆ ಗೊತ್ತಿರುತ್ತದೆ. ಈ ವಿಡಿಯೋ ವೈರಲ್ ಆಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ