ಜಾಮೀನು ಸಿಕ್ಕರೂ ನಟ ಚೇತನ್​ಗೆ ಇಲ್ಲ ಬಿಡುಗಡೆ ಭಾಗ್ಯ! ಕಾರಣವಿಷ್ಟೆ

| Updated By: sandhya thejappa

Updated on: Feb 26, 2022 | 9:32 AM

ಫೆಬ್ರವರಿ 23ಕ್ಕೆ 8ನೇ ಎಸಿಎಂಎಂ ಕೋರ್ಟ್ ಮುಂದೆ ಚೇತತ್​ನ ಹಾಜರುಪಡಿಸಲಾಗಿತ್ತು. ಈ ವೇಳೆ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ (Court) ಆದೇಶ ಹೊರಡಿಸಿತ್ತು.

ಸದಾ ವಿವಾದದ ಮೂಲಕ ಸುದ್ದಿಯಾಗುವ ನಟ ಚೇತನ್ (Actor Chetan) ಅವರು ಆಕ್ಷೇಪಾರ್ಹ ಟ್ವೀಟ್ ಮಾಡಿ ಫೆಬ್ರವರಿ 22ಕ್ಕೆ ಬಂಧನಕ್ಕೊಳಗಾಗಿದ್ದರು. ಫೆಬ್ರವರಿ 23ಕ್ಕೆ 8ನೇ ಎಸಿಎಂಎಂ ಕೋರ್ಟ್ ಮುಂದೆ ಚೇತತ್​ನ ಹಾಜರುಪಡಿಸಲಾಗಿತ್ತು. ಈ ವೇಳೆ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ (Court) ಆದೇಶ ಹೊರಡಿಸಿತ್ತು. ಈಗ 32 ನೇ ಎಸಿಎಂಎಂ ನ್ಯಾಯಾಲಯದಿಂದ ಚೇತನ್​ಗೆ ಜಾಮೀನು ಸಿಕ್ಕಿದೆ. ಕೆಲ ಷರತ್ತುಗಳನ್ನು ಹಾಕಿ ಜಾಮೀನು ನೀಡಲಾಗಿದೆ. ಇದರಿಂದ ನಟನಿಗೆ ರಿಲೀಫ್ ಸಿಲ್ಲಿದೆ. ಆದರೆ ಚೇತನ್​ಗೆ ಜಾಮೀನು ಸಿಕ್ಕರೂ ಇಂದು (ಫೆ.26) ಬಿಡುಗಡೆ ಭಾಗ್ಯ ಇಲ್ಲ. ಚೇತನ್​ಗೆ ಸಂಬಂಧಿಸಿದ ಶ್ಯೂರಿಟಿ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆ ಇನ್ನೂ ಇರಡು ದಿನ ಜೈಲಿನಲ್ಲಿ ಉಳಿಯುತ್ತಾರೆ. ಇಂದು ನಾಲ್ಕನೇ ಶನಿವಾರ ಮತ್ತು ನಾಳೆ ಭಾನುವಾರ ಆಗಿರುವ ಕಾರಣ ಸರ್ಕಾರ ರಜೆ ಇದೆ. ಹೀಗಾಗಿ ಚೇತನ್ಗೆ ಜಾಮೀನು ಸಿಕ್ಕರೂ ಇಂದು ಬಿಡುಗಡೆ ಆಗುತ್ತಿಲ್ಲ. ಸೋಮವಾರ ಬಾಂಡ್ ಪ್ರಕ್ರಿಯೆ ಪೂರೈಸಿದ ಬಳಿಕ ಜೈಲು ವಾಸದಿಂದ ಮುಕ್ತರಾಗುತ್ತಾರೆ.

ಇದನ್ನೂ ಓದಿ

Russia Ukraine War: ಉಕ್ರೇನ್​ ಯುದ್ಧದ ಎಫೆಕ್ಟ್​ಗೆ ರಷ್ಯಾದ 22 ಶ್ರೀಮಂತರ 2.93 ಲಕ್ಷ ಕೋಟಿ ರೂಪಾಯಿ ಒಂದೇ ದಿನ ಉಡೀಸ್

ಶಾಲೆಯಿಂದ ವಾಪಸಾಗುತ್ತಿದ್ದಾಗ ಹುಡುಗಿಯ ಅಡ್ಡಗಟ್ಟಿ, ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು

Published on: Feb 26, 2022 09:30 AM