ನಟಿ ಪ್ರೇಮಾ ಲಾಯರ್ ಪಾತ್ರ ಪ್ರೇಮಾ ಒಪ್ಕೊಂಡಿದ್ಯಾಕೆ? ಇಲ್ಲಿದೆ ಅವರ ಉತ್ತರ
ಒಂದು ಕಾಲದಲ್ಲಿ ಪ್ರೇಮಾ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಚಿತ್ರಗಳ ಆಯ್ಕೆಯಲ್ಲಿ ಹೆಚ್ಚು ಚ್ಯೂಸಿ ಆಗಿದ್ದಾರೆ. ಪ್ರೇಮಾ ಒಪ್ಪಿಕೊಂಡಿರುವ ಕೆಲವೇ ಸಿನಿಮಾಗಳ ಪೈಕಿ ‘ವೆಡ್ಡಿಂಗ್ ಗಿಫ್ಟ್’ ಚಿತ್ರ ಒಂದಷ್ಟು ನಿರೀಕ್ಷೆ ಹುಟ್ಟುಹಾಕಿದೆ.
‘ವೆಡ್ಡಿಂಗ್ ಗಿಫ್ಟ್’ (Wedding Gift Movie) ಸಿನಿಮಾದ ಶೂಟಿಂಗ್ ಮುಕ್ತಾಯ ಆಗಿದೆ. ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲಾಗಿದೆ. ಕೋರ್ಟ್ ರೂಮ್ ಡ್ರಾಮ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಪ್ರೇಮಾ (Actress Prema) ಈ ಸಿನಿಮಾ ಒಪ್ಪಿಕೊಂಡಿದ್ದು ಯಾಕೆ? ಅದಕ್ಕೆ ಅವರು ಉತ್ತರಿಸಿದ್ದಾರೆ. ‘ಈ ಸಿನಿಮಾದ ಕಥೆ ಕೇಳಿದಾಗ ವಿಭಿನ್ನ ಎನಿಸಿತು. ಒಂದು ಒಳ್ಳೆಯ ಮೆಸೇಜ್ ಇದೆ. ಅದನ್ನು ತಿಳಿದು ನಾನು ಖುಷಿಯಾದೆ. ಈ ತಂಡದ ಜೊತೆ ಕೆಲಸ ಮಾಡುವುದು ಕೂಡ ಒತ್ತಡ ಎನಿಸಲಿಲ್ಲ. ಅಚ್ಚುಕಟ್ಟಾಗಿ ಸಿನಿಮಾ ಮಾಡಿದ್ದೇವೆ. ನಿರ್ದೇಶಕ ವಿಕ್ರಮ್ ಪ್ರಭು ಜತೆ ಕೆಲಸ ಮಾಡಿದ್ದು ಖುಷಿ ನೀಡಿತು. ಇದೇ ಮೊದಲ ಬಾರಿಗೆ ಇಂಥದ್ದೊಂದು ಪಾತ್ರ ಮಾಡಿದ್ದೇನೆ. ತುಂಬ ಡಿಫರೆಂಟ್ ಆಗಿದೆ. ಆ ಪಾತ್ರ ಕೊಟ್ಟಿದ್ದಕ್ಕೆ ನಿರ್ದೇಶಕರಿಗೆ ಧನ್ಯವಾದ ತಿಳಿಸುತ್ತೇನೆ’ ಎಂದು ಪ್ರೇಮಾ ಹೇಳಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಟಿ ಪ್ರೇಮಾ ಅವರು ಮಾಡಿದ ಮೋಡಿ ಅಂತಿಂಥದ್ದಲ್ಲ. ಒಂದು ಕಾಲದಲ್ಲಿ ಅವರು ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಚಿತ್ರಗಳ ಆಯ್ಕೆಯಲ್ಲಿ ಹೆಚ್ಚು ಚ್ಯೂಸಿ ಆಗಿದ್ದಾರೆ. ಪ್ರೇಮಾ ಒಪ್ಪಿಕೊಂಡಿರುವ ಕೆಲವೇ ಸಿನಿಮಾಗಳ ಪೈಕಿ ‘ವೆಡ್ಡಿಂಗ್ ಗಿಫ್ಟ್’ ಚಿತ್ರ ಒಂದಷ್ಟು ನಿರೀಕ್ಷೆ ಹುಟ್ಟುಹಾಕಿದೆ.
ಇದನ್ನೂ ಓದಿ: ರಶ್ಮಿಕಾ ಅಭಿಮಾನಿಗಳಿಗೆ ಗುಡ್ ನ್ಯೂಸ್; ಕೊವಿಡ್ ಮಧ್ಯೆಯೂ ರಿಲೀಸ್ ಆಗುತ್ತಿದೆ ಹೊಸ ಸಿನಿಮಾ
‘ಓಂ ಸಿನಿಮಾ ಟೈಮ್ನಲ್ಲಿ ನನಗೆ ಬೈಯ್ಯುತ್ತಿದ್ರು’; ಆ ದಿನಗಳನ್ನು ಮೆಲುಕು ಹಾಕಿದ ನಟಿ ಪ್ರೇಮಾ