AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಕ್ಷಿತಾ ಶೆಟ್ಟಿ ಮೇಲಾದ ದಬ್ಬಾಳಿಕೆ ನೆನದು ಲೈವ್​ನಲ್ಲೇ ಮಂಜು ಭಾಷಿಣಿ ಕಣ್ಣೀರು

ರಕ್ಷಿತಾ ಶೆಟ್ಟಿ ಮೇಲಾದ ದಬ್ಬಾಳಿಕೆ ನೆನದು ಲೈವ್​ನಲ್ಲೇ ಮಂಜು ಭಾಷಿಣಿ ಕಣ್ಣೀರು

 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Oct 20, 2025 | 1:02 PM

Share

ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಗಮನ ಸೆಳೆಯುತ್ತಿರುವುದನ್ನು ನೊಡಿರಬಹುದು. ಆದರೆ, ಅವರ ಮೇಲೆ ಸಾಕಷ್ಟು ದಬ್ಬಾಳಿಕೆ ಹಾಗೂ ಕಿರುಕುಳ ಆಯಿತು. ಇದನ್ನು ನೆನೆದು ಮಂಜು ಭಾಷಿಣಿ ಅವರು ಕಣ್ಣೀರು ಹಾಕಿದ್ದಾರೆ. ಆ ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿ ಇದೆ.

ಬಿಗ್ ಬಾಸ್ (Bigg Boss) ಮನೆಯಿಂದ ಮಂಜು ಭಾಷಿಣಿ ಎಲಿಮಿನೇಟ್ ಆಗಿದ್ದಾರೆ. ಅವರು ಮೂರು ವಾರ ಬಿಗ್ ಬಾಸ್ ಮನೆಯಲ್ಲಿ ಇದ್ದರು ಮತ್ತು ಆ ಬಳಿಕ ಬಿಗ್ ಬಾಸ್ ಮನೆಯಿಂದ ಹೊರ ಬಂದರು. ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಹಾಗೂ ಜಾನ್ವಿ ಅವರು ಸೇರಿಕೊಂಡು ರಕ್ಷಿತಾ ಶೆಟ್ಟಿಗೆ ಕಿರುಕುಳ ನೀಡಿದ್ದರು. ಇದನ್ನು ಸಹಿಸೋಕೆ ಮಂಜುಗೆ ಆಗಲೇ ಇಲ್ಲ. ಈ ವಿಚಾರ ಹೇಳುತ್ತಲೇ ಲೈವ್​​ನಲ್ಲೇ ಅವರು ಕಣ್ಣೀರು ಹಾಕಿದರು. ‘ಎಷ್ಟು ಅಟ್ಯಾಕ್ ಮಾಡಿದ್ರು ಎಂದರೆ’ ಎನ್ನುತ್ತಿದ್ದಲೇ ಮಂಜುಗೆ ಕಣ್ಣೀರು ಬಂತು. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.