ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಕಾಂಗ್ರೆಸ್ ಪರ ನಿಲ್ಲಲ್ಲ: ಹೈಕಮಾಂಡ್‌ಗೆ ಅಹಿಂದ ವರ್ಗ ಎಚ್ಚರಿಕೆ
ಸಿಎಂ ಸಿದ್ದರಾಮಯ್ಯ ಅವರನ್ನು ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಸುವಂತೆ ಅಹಿಂದ ಒಕ್ಕೂಟದಿಂದ ಮೈಸೂರಿನಲ್ಲಿ ಪತ್ರ ಚಳವಳಿ ನಡೆಸಲಾಗಿದೆ. ಸಿದ್ದರಾಮಯ್ಯ ಅವರನ್ನು ಬದಲಾಯಿಸಿದರೆ ಅಹಿಂದ ಮತಗಳು ಕಾಂಗ್ರೆಸ್‌ನಿಂದ ವಿಮುಖವಾಗಲಿವೆ ಎಂದು ಎಚ್ಚರಿಕೆ ನೀಡಲಾಗಿದೆ. 2028ರಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ. ಅಹಿಂದ ನಾಯಕರ ಎಚ್ಚರಿಕೆಯ ಮಾತುಗಳ ವಿಡಿಯೋ ಇಲ್ಲಿದೆ.
ಮೈಸೂರು, ಅಕ್ಟೋಬರ್ 29: ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಸುವಂತೆ ಅಹಿಂದ ಒಕ್ಕೂಟ ಮೈಸೂರಿನಲ್ಲಿ ಪತ್ರ ಚಳವಳಿ ನಡೆಸಿದೆ. ಈ ಮೂಲಕ ಕಾಂಗ್ರೆಸ್ ಹೈಕಮಾಂಡ್‌ಗೆ ಆಗ್ರಹ ಮತ್ತು ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ. ಪ್ರಸ್ತುತ ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಮುಂದುವರಿದು, 2028ರಲ್ಲಿ ಮುಖ್ಯಮಂತ್ರಿಯಾಗುವ ಅವಕಾಶವಿದೆ ಎಂದು ಅಹಿಂದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾಯಿಸಿದರೆ ಅಹಿಂದ ಮತಗಳು ಚಿದ್ರವಾಗುವ ಖಚಿತ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಅಹಿಂದ ವರ್ಗದ ಬೆಂಬಲ ಕಾಂಗ್ರೆಸ್‌ಗೆ ಶ್ರೀಮತಿ ಇಂದಿರಾ ಗಾಂಧಿಯವರ ಕಾಲದಿಂದಲೂ ಇದೆ. ಸಿದ್ದರಾಮಯ್ಯ ಅವರು ಸಮರ್ಥ ಆಡಳಿತ ನೀಡಿದ್ದು, ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅಹಿಂದ ಶಕ್ತಿಯ ಶೇ 90 ರಷ್ಟು ಬೆಂಬಲ ಸಿದ್ದರಾಮಯ್ಯನವರಿಗಿದೆ. ಒಂದು ವೇಳೆ ಹೈಕಮಾಂಡ್ ವ್ಯತಿರಿಕ್ತ ನಿರ್ಧಾರ ತೆಗೆದುಕೊಂಡರೆ, ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಗಳಿಂದಲೇ ತಮ್ಮ ನಿಲುವನ್ನು ಸ್ಪಷ್ಟಪಡಿಸುವುದಾಗಿ ರಾಹುಲ್ ಗಾಂಧಿಯವರಿಗೆ ನೇರವಾಗಿ ಎಚ್ಚರಿಕೆ ಸಂದೇಶ ನೀಡಲಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯರನ್ನೇ 5 ವರ್ಷ ಸಿಎಂ ಎಂದು ಘೋಷಿಸಿ: ಅಹಿಂದ ಸಂಘಟನೆಗಳಿಂದ ರಾಹುಲ್ ಗಾಂಧಿಗೆ ಪತ್ರ ಅಭಿಯಾನ
ದೆಹಲಿ ಸ್ಫೋಟ ನಡೆದಾಗ ಕಂಗಾಲಾಗಿ ಓಡಿದ ಜನರು; ಸಿಸಿಟಿವಿ ವಿಡಿಯೋ ವೈರಲ್
ಉತ್ತರ ಪ್ರದೇಶದ ಕಲ್ಲು ಗಣಿಗಾರಿಕೆ ವೇಳೆ ಭೂಕುಸಿತವಾಗಿ ಓರ್ವ ಸಾವು
ನಾಯಕತ್ವ ಬದಲಾವಣೆ ಬಗ್ಗೆ ನಂಗೇನೂ ಗೊತ್ತಿಲ್ಲ, ಸಿಎಂ ಹತ್ರನೇ ಕೇಳಿ; ಡಿಕೆಶಿ
ರಾಹುಲ್ ಗಾಂಧಿಗೆ ಧೈರ್ಯ ತುಂಬಿದ್ದೇನೆ; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
