ಲಾಕ್​ಡೌನ್​ ನಂತರ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಏರಿಕೆ; ಆರೋಗ್ಯದ ಬಗ್ಗೆ ಇರಲಿ ಎಚ್ಚರ

| Updated By: preethi shettigar

Updated on: Dec 20, 2021 | 8:28 AM

2019-2020 ಹಾಗೂ 2020-2021ರ ಅಂಕಿ ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಮಟ್ಟ ಶೇಕಡಾ 50 ರಷ್ಟಿತ್ತು. ಆದರೆ 2021-2022 ರ ಪ್ರಕಾರ ವಾಯುಮಾಲಿನ್ಯ ಮಟ್ಟ ಶೇಕಡಾ 70 ರಿಂದ 75ಕ್ಕೆ ಏರಿಕೆಯಾಗಿದೆ.

ಬೆಂಗಳೂರು: ಲಾಕ್​ಡೌನ್​ ಆಗಿದ್ದೇ ತಡ ಇಡೀ ಬೆಂಗಳೂರು ಸ್ತಬ್ಧ ಆಗಿತ್ತು. ವಾಹನಗಳ ಓಡಾಟವೂ ಸ್ವಲ್ಪಮಟ್ಟಿಗೆ ಕಡಿಮೆಯಾಗಿತ್ತು. ಬೆಂಗಳೂರಿನ ಏರಿಯಾಗಳಲ್ಲಿ ನಡೆಯುತ್ತಿದ್ದ ಕಾಮಗಾರಿಗಳು ನಿಂತಿದ್ದವು. ಆದರೀಗ ಅನ್​ಲಾಕ್​ ಬಳಿಕ ರಸ್ತೆ, ಕಟ್ಟಡ ಮತ್ತು ಮೆಟ್ರೋ ಕಾಮಗಾರಿ ಶುರುವಾಗಿದೆ. ಇದರಿಂದ ಧೂಳಿನ ಪ್ರಮಾಣ ಶೇಕಡಾ 30ರಷ್ಟು ಏರಿಕೆಯಾಗಿದ್ದು, ಧೂಳು ಜನರ ಶ್ವಾಸಕೋಶ ಸೇರಿ ಜನರ ಆರೋಗ್ಯ ಹಾಳಾಗುತ್ತಿದೆ. ಧೂಳಿನಿಂದ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಮಟ್ಟವೂ ಹೆಚ್ಚಾಗಿದೆ. 2019-2020 ಹಾಗೂ 2020-2021ರ ಅಂಕಿ ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಮಟ್ಟ ಶೇಕಡಾ 50 ರಷ್ಟಿತ್ತು. ಆದರೆ 2021-2022 ರ ಪ್ರಕಾರ ವಾಯುಮಾಲಿನ್ಯ ಮಟ್ಟ ಶೇಕಡಾ 70 ರಿಂದ 75ಕ್ಕೆ ಏರಿಕೆಯಾಗಿದೆ. ಆತಂಕಕಾರಿ ವಿಷಯ ಅಂದರೆ ವಾಯುಮಾಲೀನ್ಯದಿಂದ 2020ರಲ್ಲಿ ಬೆಂಗಳೂರುವೊಂದರಲ್ಲೇ 12 ಸಾವಿರ ಮಂದಿ ಮೃತಪಟ್ಟಿದ್ದಾರೆ. ದೆಹಲಿಯಲ್ಲಿ ಕಳೆದ ವರ್ಷ 54 ಸಾವಿರ ಜನರು ಮೃತಪಟ್ಟಿದ್ದಾರೆ. ಆಗ್ನೇಯ ಏಷ್ಯಾ ಗ್ರೀನ್ಪೀಸ್​ನ ವಾಯುಗುಣಮಟ್ಟ ವಿಶ್ಲೇಷಣೆಯಲ್ಲಿ ಈ ಮಾಹಿತಿ ಪ್ರಕಟವಾಗಿದೆ.

ಬೆಂಗಳೂರಿನಲ್ಲಿ ವಾಯುಮಾಲಿನ್ಯ ನಿಯಂತ್ರಿಸಲು ಪರಿಸರ ಸಚಿವಾಲಯ ಬಿಬಿಎಂಪಿಗೆ 279 ಕೋಟಿ ಕೊಟ್ಟಿದೆ. ಜೊತೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡಾ 2.2 ಕೋಟಿ ನೀಡಿದೆ. ಆದರೆ, ಕೋಟಿ ಕೋಟಿ  ಹಣ ಬಿಡುಗಡೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಇದರಿಂದ ಧೂಳು ನೇರವಾಗಿ ಶ್ವಾಸಕೋಶ ಪ್ರವೇಶಿಸುತ್ತಿದ್ದು, ಜನರಿಗೆ ಉಸಿರಾಡಲು ಕಷ್ಟವಾಗುತ್ತಿದೆ. ಒಂದು ವೇಳೆ ಗಾಳಿಯೊಂದಿಗೆ ವಿಷಕಾರಿ ಅಂಶಗಳು ಸೇರಿದರೆ ಅದರಿಂದ ರಕ್ತ ಸಂಚಾರಕ್ಕೂ ತೊಂದರೆ ಉಂಟಾಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ವಾಯುಮಾಲಿನ್ಯ ತಡೆಗಟ್ಟಲು ಬಿಬಿಎಂಪಿ ಅಲ್ಲಲ್ಲಿ ವಾಟರ್ ಸ್ಪಿಂಕ್ಲರ್, ಏರ್ ಪೊಲ್ಯೂಷನ್ ಮಶಿನ್​ಗಳನ್ನು ಅಳವಡಿಕೆ ಮಾಡಬೇಕು ಆದರೆ ಇದ್ಯಾವುದನ್ನು ಬಿಬಿಎಂಪಿ ಮಾಡಿಲ್ಲ. ಈ ಅನುದಾನದ ಬಗ್ಗೆಯೂ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ.

ಇದನ್ನೂ ಓದಿ:
ದೆಹಲಿ ವಾಯುಮಾಲಿನ್ಯ; ಶಾಲಾ-ಕಾಲೇಜು ಮುಚ್ಚಲು, ಕಚೇರಿಗಳಿಗೆ ಶೇ.50ರಷ್ಟು ಉದ್ಯೋಗಿಗಳು ಬರಲು ಸೂಚನೆ

ವಿಶ್ವದ ಅತಿಹೆಚ್ಚು ವಾಯುಮಾಲಿನ್ಯ ಹೊಂದಿದ ನಗರಗಳ ಪಟ್ಟಿಯಲ್ಲಿ ದೆಹಲಿಯೇ ಟಾಪ್​ 1; ಭಾರತದ ಇನ್ನೆರಡು ಸಿಟಿಗಳು ಯಾವವು ಗೊತ್ತಾ?