ಕೊಲೆ ಆರೋಪದಲ್ಲಿ ಅಮಿತ್ ಶಾ ಗಡೀಪಾರು ಆಗಿರಲಿಲ್ಲವೇ? ಅರೋಪಿಗಳೆಲ್ಲ ಅಪರಾಧಿಗಳಲ್ಲ: ಸಿದ್ದರಾಮಯ್ಯ
ಅಮಿತ್ ಶಾ ವಿರುದ್ಧವೂ ಕೊಲೆ ಅರೋಪವಿತ್ತು ಮತ್ತು ಅವರನ್ನು ಗಡೀಪಾರು ಮಾಡಲಾಗಿತ್ತು. ಆದರೆ ಅಂಥವರು ಭಾರತದ ಹೋಮ್ ಮಿನಿಸ್ಟರ್ ಅಂತ ವ್ಯಂಗ್ಯವಾಡಿದ ಸಿದ್ದರಾಮಯ್ಯ ಕಾನೂನಿನ ಪಾಠ ಹೇಳಿದರು.
ಬೆಳಗಾವಿ: ಕಾನೂನು ಪದವಿ ಪಡೆದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಸೋಮವಾರದಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಕ್ರಿಮಿನಲ್ ಲಾ ವಿವರಿಸಿದರು. ಕೊಲೆ ಆರೋಪದಲ್ಲಿ ಜೈಲು ಸೇರಿ ಜಾಮೀನು ಪಡೆದು ಹೊರಬಂದಿರುವ ಮಾಜಿ ಸಚಿವ ವಿನಯ್ ಕುಲಕುರ್ಣಿ (Vinay Kulkarni) ಅವರ ಹುಟ್ಟುಹಬ್ಬ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಿದ್ದರಾಮಯ್ಯ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಬೆಳಗಾವಿಯ ಕಿತ್ತೂರಿಗೆ ಬಂದಿದ್ದಾರೆ. ಕ್ರಿಮಿನಲ್ ಒಬ್ಬರ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದಾರೆ ಅಂತ ಬಿಜೆಪಿಯವರು ಆರೋಪಿಸುತ್ತಿದ್ದಾರೆ ಎಂದು ಮಾಧ್ಯಮದವರು ಹೇಳಿದ್ದಕ್ಕೆ ಸಿದ್ದರಾಮಯ್ಯನವರು, ಅಮಿತ್ ಶಾ (Amit Shah) ವಿರುದ್ಧವೂ ಕೊಲೆ ಅರೋಪವಿತ್ತು ಮತ್ತು ಅವರನ್ನು ಗಡೀಪಾರು ಮಾಡಲಾಗಿತ್ತು. ಆದರೆ ಅಂಥವರು ಭಾರತದ ಹೋಮ್ ಮಿನಿಸ್ಟರ್ ಅಂತ ವ್ಯಂಗ್ಯವಾಡಿ ಕಾನೂನಿನ ಪಾಠ ಹೇಳಿದರು.
Latest Videos