ಸರ್ಕಾರಿ ಸೇವೆಯಲ್ಲಿದ್ದಾಗಲೇ ಅಪ್ಪ ಸತ್ತಿದ್ದರಿಂದ ನೌಕರಿ ತನ್ನಣ್ಣನಿಗೆ ಸಿಗಬಾರದೆನ್ನುವ ಕಾರಣಕ್ಕೆ ಹಟ್ಟಿಯ ಯುವಕ ಅಮ್ಮನ ಜೊತೆ ಸೇರಿ ಅಣ್ಣನನ್ನು ಕೊಂದೇಬಿಟ್ಟನೇ?

ಸರ್ಕಾರಿ ಸೇವೆಯಲ್ಲಿದ್ದಾಗಲೇ ಅಪ್ಪ ಸತ್ತಿದ್ದರಿಂದ ನೌಕರಿ ತನ್ನಣ್ಣನಿಗೆ ಸಿಗಬಾರದೆನ್ನುವ ಕಾರಣಕ್ಕೆ ಹಟ್ಟಿಯ ಯುವಕ ಅಮ್ಮನ ಜೊತೆ ಸೇರಿ ಅಣ್ಣನನ್ನು ಕೊಂದೇಬಿಟ್ಟನೇ?

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 07, 2022 | 2:29 PM

ಸಿದ್ದಣ್ಣನ ಪತ್ನಿ ನೀಡಿದ ದೂರಿನ ಮೇರೆಗೆ ಗುಡದಪ್ಪ ಮುದಿಯಪ್ಪ ಮತ್ತು ಹತ್ಯೆಗೆ ನೆರವಾದ ಆರೋಪದಲ್ಲಿ ಅವನ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಾಯಚೂರು: ತಂದೆ ಅಥವಾ ತಾಯಿ ಸರ್ಕಾರಿ ನೌಕರಿಯಲ್ಲಿದ್ದು ಸೇವೆಯಲ್ಲಿರುವಾಗಲೇ ನಿಧನ ಹೊಂದಿದರೆ ಅವರ ಮಕ್ಕಳಲ್ಲಿ ಒಬ್ಬರಿಗೆ ಅನುಕಂಪ ಆಧಾರದಲ್ಲಿ (compassionate grounds) ಅವರ ವಿದ್ಯಾಭ್ಯಾಸಕ್ಕೆ ತಕ್ಕ ಸರ್ಕಾರಿ ಹುದ್ದೆ ನೀಡುವ ವಾಡಿಕೆ ಈಗಲೂ ಜಾರಿಯಲ್ಲಿದೆ. ರಾಯಚೂರು ಜಿಲ್ಲೆಯ ಹಟ್ಟಿ ಪಟ್ಟಣದಲ್ಲಿ (Hutti Town) ಸರ್ಕಾರಿ ನೌಕರಿಯಲ್ಲಿದ್ದ ಅಪ್ಪ ಸತ್ತಾಗ ಆತನ ನೌಕರಿ ತನ್ನಣ್ಣ ಸಿದ್ದಣ್ಣನಿಗೆ ಸಿಗಬಾರದು ತನಗೆ ಸಿಕ್ಕಬೇಕು ಎನ್ನುವ ಕಾರಣಕ್ಕೆ ಗುಡದಪ್ಪ ಮುದಿಯಪ್ಪ (Gudadappa Mudiyappa) ಹೆಸರಿನ ವ್ಯಕ್ತಿ ಅವನನ್ನು ಬರ್ಬರವಾಗಿ ಕೊಂದುಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಸಿದ್ದಣ್ಣನ ಪತ್ನಿ ನೀಡಿದ ದೂರಿನ ಮೇರೆಗೆ ಗುಡದಪ್ಪ ಮುದಿಯಪ್ಪ ಮತ್ತು ಹತ್ಯೆಗೆ ನೆರವಾದ ಆರೋಪದಲ್ಲಿ ಅವನ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.