Loading video

ಅಮುಲ್ ಡೈರಿ ಉತ್ಪನ್ನಗಳ ಮಾರಾಟಕ್ಕೆ ಕೇವಲ ಎರಡು ಮೆಟ್ರೋ ನಿಲ್ದಾಣಗಳನ್ನು ಮಾತ್ರ ನೀಡಲಾಗಿದೆ: ಶಿವಕುಮಾರ್

Updated on: Jun 18, 2025 | 7:17 PM

ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಯುಎಸ್ ತೆರಳಲು ಕೇಂದ್ರ ಗೃಹ ಸಚಿವಾಲಯ ಅನುಮತಿ ನಿರಾಕರಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ತಾನು ಇಂಧನ ಸಚಿವನಾಗಿದ್ದಾಗಲೂ ವಿದೇಶದಲ್ಲಿ ನಡೆಯುತ್ತಿದ್ದ ಸಮ್ಮೇಳನವೊಂದರಲ್ಲಿ ಭಾಗಿಯಾಗದಂತೆ ತಡೆಯಲಾಗಿತ್ತು, ಆದರೆ ಅದೇ ಸಮ್ಮೇಳನದಲ್ಲಿ ಬಿಜೆಪಿ ನಿಯೋಗವೊಂದು ಭಾಗಿಯಾಗಲು ಅನುಮತಿ ನೀಡಲಾಗಿತ್ತು, ಕೇಂದ್ರದ ಧೋರಣೆಯೇ ಹಾಗೆ, ಕಾಮೆಂಟ್ ಮಾಡೋದು ಇಷ್ಟವಿಲ್ಲ ಎಂದರು.

ಬೆಂಗಳೂರು, ಜೂನ್ 18: ಅಮುಲ್ ಡೈರಿ ಉತ್ಪನ್ನಗಳ ಸಂಸ್ಥೆಗೆ ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಮಳಿಗೆಗಳನ್ನು ನಡೆಸಲು ಅವಕಾಶ ಕಲ್ಪಿಸಿರುವುದು ಬೇಗ ಕೊನೆಗೊಳ್ಳುವ ವಿಚಾರವಲ್ಲ. ಇಂದು ಮಾಧ್ಯಮಗಳಿಗೆ ಎರಡನೇ ಬಾರಿ ಸ್ಪಷ್ಟನೆ ನೀಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜಾಗತಿಕ ಟೆಂಡರ್ ಪ್ರಕ್ರಿಯೆಯಲ್ಲಿ ಕೆಎಂಎಫ್ (Karnataka Milk Federation) (ನಂದಿನಿ)  ಭಾಗಿಯಾಗಿರಲಿಲ್ಲ, ಹಾಗಾಗಿ ಅಮುಲ್ ಗೆ ಮಳಿಗೆ ಓಪನ್ ಮಾಡುವ ಅವಕಾಶ ಸಿಕ್ಕಿದೆ, ಟೆಂಡರ್​​ನಲ್ಲಿ ಭಾಗಿಯಾಗುವಂತೆ ಕೆಎಂಎಫ್​ಗ ಸೂಚಿಸಲಾಗಿದೆ ಎಂದರು. ಅಷ್ಟಾಗಿಯೂ ಕೆಎಂಎಫ್ ಗೆ ಮೆಟ್ರೋ ನಿಲ್ದಾಣಗಳಲ್ಲಿ ಕಿಯಾಸ್ಕ್​ಗಳನ್ನು ಅರಂಭಿಸಲು ತಿಳಿಸಲಾಗಿದೆ, ಅಮುಲ್ ಈಗಾಗಲೇ 2-3 ಸ್ಥಳಗಳಲ್ಲಿ ಮಳಿಗೆ ಶುರು ಮಾಡಿದೆ, ಮೆಟ್ರೋ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವ ಇರೋದ್ರಿಂದ ಅಮುಲ್ ಮಳಿಗೆಗಳನ್ನು ತೆಗೆಸುವ ಗೋಜಿಗೇನೂ ತಮ್ಮ ಸರ್ಕಾರ ಹೋಗಿಲ್ಲ ಎಂದು ಶಿವಕುಮಾರ್ ಹೇಳಿದರು.

ಇದನ್ನೂ ಓದಿ:  ಕೆಪಿಟಿಸಿಎಲ್ ನೌಕರ ಸಂಘದ ವಜ್ರಮಹೋತ್ಸವ: ಸಮಾಜಕ್ಕೆ ನೀವು ಬೆಳಕಾಗಿದ್ದೀರಿ ಎಂದ ಶಿವಕುಮಾರ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ