ಕರ್ನಲ್ ತಾಜುದ್ದೀನ್ ಮನೆ ಮೇಲೆ ದಾಳಿ ನಡೆದಿದೆ ಎಂದು ಪೋಸ್ಟ್​ ಹಾಕಿದ ವ್ಯಕ್ತಿ ಬೇರೆ ದೇಶದವನು ಎನ್ನಲಾಗುತ್ತಿದೆ

Updated on: May 14, 2025 | 3:16 PM

ಕರ್ನಲ್ ತಾಜುದ್ದೀನ್ ಅವರ ಮನೆ ಮೇಲೆ ದಾಳಿ ನಡೆದಿದೆ ಎಂದು ಹರಿದಾಡಿದ ಸುದ್ದಿ ಒಂದು ಹಸೀಸುಳ್ಳು ಅದನ್ನು ಯಾರೂ ನಂಬಬಾರದು ಎಂದು ಬೆಳಗಾವಿಯ ಪೊಲೀಸ್ ವರಿಷ್ಠಾಧಿಕಾರಿ ಡಾ ಭೀಮಾಶಂಕರ್ ಗುಳೇದ್ ಜನರಿಗೆ ಮನವಿ ಮಾಡಿದ್ದಾರೆ. ಪೋಸ್ಟ್ ಹಾಕಿದ ವ್ಯಕ್ತಿ ಬೇರೆ ದೇಶದವನು ಎಂದು ಹೇಳಲಾಗುತ್ತಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಕರ್ನಲ್ ತಾಜುದ್ಧಿನ್ ಮನೆಗೆ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ಬೆಂಗಳೂರು, ಮೇ 14: ಅನೀಸುದ್ದೀನ್ ನಂಥ ದ್ರೋಹಿಗಳಿಗೆ ಯಾವ ಶಿಕ್ಷೆಗೆ ಗುರಿಪಡಿಸಿದರೂ ಕಮ್ಮಿಯೇ. ಇವನಿಗೆ ಮಾಡಲು ಬೇರೆ ಕೆಲಸವಿಲ್ಲ. ಜಡತ್ವ ಆವರಿಸಿದ ಮನಸ್ಸು ಪಿಶಾಚಿಯೊಬ್ಬನ ಕಾರ್ಯಾಗಾರ ಅಂತೇನೋ ಇಂಗ್ಲಿಷ್​ನಲ್ಲ್ಲಿ ಹೇಳುತ್ತಾರೆ, ಅನೀಸುದ್ದೀನ್ ತಲೇಲಿ ಅದ್ಯಾವ ಹುಳಗಳು ಹೊಕ್ಕಿವಿಯೋ? ಎಲ್ಲೋ ಕೂತು ಇವನು ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಅವರ ಪತಿ ಕರ್ನಲ್ ತಾಜುದ್ದೀನ್ ಅವರ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿರುವ ಮನೆ ಮೇಲೆ ದಾಳಿ ನಡೆದಿದೆ ಅಂತ ತನ್ನ ಎಕ್ಸ್ ಹ್ಯಾಂಡಲ್​ನಲ್ಲಿ ಸುಳ್ಳುಸುದ್ದಿಯನ್ನು ಪೋಸ್ಟ್ ಮಾಡಿದ್ದಾನೆ. ಅದನ್ನು ನೋಡಿದ ಪೊಲೀಸರು ಕೊಣ್ಣೂರಿಗೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ:  ಟರ್ಕಿ ಡ್ರೋನ್‌ ಬಳಸಿ ಭಾರತದ 36 ಸ್ಥಳಗಳ ಮೇಲೆ ಪಾಕಿಸ್ತಾನ ದಾಳಿಗೆ ಯತ್ನ; ಸೋಫಿಯಾ ಖುರೇಷಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ