ತಾಯಿ, ಅಕ್ಕನ ಕೊಂದು ಆತ್ಮಹತ್ಯೆಗೆ ಯುವಕ ಯತ್ನ: ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದೇನು?
ಆನೇಕಲ್‌ನ ಮಲ್ಲೇನಹಳ್ಳಿಯಲ್ಲಿ ಸಾಲದ ಕಾಟಕ್ಕೆ ಬೇಸತ್ತ 27 ವರ್ಷದ ಮೋಹನ್ ಗೌಡ ತಾಯಿ ಆಶಾ ಮತ್ತು ಅಕ್ಕ ವರ್ಷಿತಾರನ್ನು ಕೊಲೆಗೈದು, ಅಕ್ಕನ ಮಗ ಮಯಂಕ್ ಗೌಡನಿಗೆ ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪ್ರಾಥಮಿಕ ತನಿಖೆಯಲ್ಲಿ ಚಿಟ್ ಫಂಡ್ ವ್ಯವಹಾರದಲ್ಲಿ ನಷ್ಟವೇ ದುರಂತಕ್ಕೆ ಕಾರಣವೆಂದು ತಿಳಿದುಬಂದಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಆನೇಕಲ್, ಮಾರ್ಚ್ 29: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಳೆ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದಲ್ಲಿ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಾಲದ ಹೊರೆ ತಾಳಲಾರದೆ ಯುವಕನೊಬ್ಬ ತಾಯಿ ಮತ್ತು ಅಕ್ಕನ ಹತ್ಯೆಗೈದು, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಮೋಹನ್ ಗೌಡ ದೊಡ್ಡ ಮಟ್ಟದಲ್ಲಿ ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದ. 10 ಲಕ್ಷ, 50 ಲಕ್ಷ, ಒಂದು ಕೋಟಿ ರೂಪಾಯಿಗಳವರೆಗಿನ ಚಿಟ್ ಫಂಡ್‌ಗಳನ್ನು ನಡೆಸಿದ್ದಲ್ಲದೆ, ಹಬ್ಬಗಳಿಗಾಗಿ ಮಟನ್, ಪಟಾಕಿ, ಯುಗಾದಿ ಹಬ್ಬ ಸೇರಿದಂತೆ ಸಾಕಷ್ಟು ಚಿಟ್‌ಗಳನ್ನು ನಡೆಸಿದ್ದಾನೆ. ಈ ವ್ಯವಹಾರಗಳಲ್ಲಿ ಭಾರಿ ನಷ್ಟ ಅನುಭವಿಸಿದ್ದರಿಂದ, ಸಾಲಗಾರರ ಕಾಟ ವಿಪರೀತವಾಗಿತ್ತು. ಈ ದುರಂತಕ್ಕೆ ಇದೇ ಮೂಲ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
