ಆಂಧ್ರಪ್ರದೇಶದಲ್ಲಿ 16ನೇ ಶತಮಾನದ ಆಂಜನೇಯ ದೇವಾಲಯಕ್ಕೆ ಹಾನಿ; ತನಿಖೆಗೆ ಸಿಎಂ ಆದೇಶ
ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿರುವ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಸಮಾಜ ವಿರೋಧಿಗಳು ಕೆಡವಿದ್ದಾರೆ. ಅನ್ನಮಯ್ಯ ಜಿಲ್ಲೆಯಲ್ಲಿ 16ನೇ ಶತಮಾನದಷ್ಟು ಹಿಂದಿನ ಪುರಾತನ ದೇವಾಲಯವನ್ನು ಕೆಲವು ಅಪರಿಚಿತ ಆಕ್ರಮಣಕಾರರು ಧ್ವಂಸಗೊಳಿಸಿದ್ದಾರೆ.
ಹೈದರಾಬಾದ್: ಅನ್ನಮಯ್ಯ ಜಿಲ್ಲೆಯ ಚೆರುವು ಮಂಡಲದಲ್ಲಿರುವ ಶ್ರೀ ಅಭಯಾಂಜನೇಯ ಸ್ವಾಮಿ ದೇವಸ್ಥಾನದ ಮೇಲೆ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಕದಿರಿ ನಾಣಿಕೋಟ ಪಂಚಾಯತ್ ವ್ಯಾಪ್ತಿಯ ಕಾನುಗೊಂಡ ಅರಣ್ಯ ಪ್ರದೇಶದಲ್ಲಿರುವ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಧ್ವಂಸಗೊಳಿಸಲಾಗಿದೆ. 2 ದಿನಗಳ ಹಿಂದೆ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಅಪರಿಚಿತ ದುಷ್ಕರ್ಮಿಗಳು ಧ್ವಂಸ ಮಾಡುವ ಯತ್ನ ನಡೆದಿತ್ತು ಎಂದು ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಕಾನುಗೊಂಡ ಅರಣ್ಯ ಪ್ರದೇಶದಲ್ಲಿ 16ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಸ್ಥಾನದ ಮೇಲೆ ಸೋಮವಾರ ರಾತ್ರಿ ದಾಳಿ ನಡೆದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos