Ashika Ranganath: ರೇಮೋ ಚಿತ್ರ ‘ಗೂಗ್ಲಿ 2’ನಾ?; ಆಶಿಕಾ ರಂಗನಾಥ್, ಪವನ್ ಒಡೆಯರ್ ಹೇಳಿದ್ದೇನು?

Raymo: ರೇಮೋ ಚಿತ್ರ ಚಿತ್ರೀಕರಣವನ್ನು ಪೂರೈಸಿದೆ. ಇತ್ತೀಚೆಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತ್ತು. ಅದರಲ್ಲಿ ನಟಿ ಆಶಿಕಾ ರಂಗನಾಥ್ ಕುತೂಹಲಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Ashika Ranganath: ರೇಮೋ ಚಿತ್ರ ‘ಗೂಗ್ಲಿ 2’ನಾ?; ಆಶಿಕಾ ರಂಗನಾಥ್, ಪವನ್ ಒಡೆಯರ್ ಹೇಳಿದ್ದೇನು?
ಆಶಿಕಾ ರಂಗನಾಥ್
Edited By:

Updated on: Nov 14, 2021 | 4:38 PM

ಗೂಗ್ಲಿ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಂಡ ನಿರ್ದೇಶಕ ಪವನ್ ಒಡೆಯರ್, ಇದೀಗ ರೇಮೋ ಚಿತ್ರ ತೆರೆಗೆ ತರಲು ಸಿದ್ಧರಾಗಿದ್ದಾರೆ. ಚಿತ್ರತಂಡ ಚಿತ್ರೀಕರಣ ಮುಗಿಸಿಕೊಂಡಿದ್ದು, ಡಿಸೆಂಬರ್​ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ನಾಯಕನಾಗಿ ಇಶಾನ್ ನಟಿಸಿದ್ದರೆ, ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಚಿತ್ರದ ಕುರಿತು ಮಾಹಿತಿಗಳನ್ನು ಹಂಚಿಕೊಂಡಿತ್ತು. ಆಗ ಮಾತನಾಡಿದ ನಟಿ ಆಶಿಕಾ ರಂಗನಾಥ್ ಅವರಿಗೆ ಚಿತ್ರ ಏಕೆ ಪ್ರಿಯವಾಯಿತು ಎಂಬುದನ್ನು ವಿವರಿಸಿದ್ದಾರೆ. ಚಿತ್ರದ ರೊಮ್ಯಾಂಟಿಕ್ ಕತೆ ಹಾಗೂ ಸ್ಕ್ರೀನ್ ಸ್ಪೇಸ್ ಅವರಿಗೆ ಬಹಳ ಹಿಡಿಸಿದೆಯಂತೆ. ಅಲ್ಲದೇ ಚಿತ್ರ ಅವರಿಗೆ ಗೂಗ್ಲಿ ಚಿತ್ರವನ್ನು ನೆನಪಿಸಿದೆಯಂತೆ. ಒಂದರ್ಥದಲ್ಲಿ ಗೂಗ್ಲಿ 2 ನಂತೆ ರೇಮೋ ತನಗನ್ನಿಸಿತು ಎಂದು ಹೇಳಿಕೊಂಡಿದ್ದಾರೆ.

ಆಶಿಕಾರ ಈ ಮಾತನ್ನು ಕೇಳಿದ ನಿರ್ದೇಶಕ ಪವನ್ ಒಡೆಯರ್ ‘ರೇಮೋ ಗೂಗ್ಲಿ 2ನಂತೆ ಹೇಳ್ಬೇಡಮ್ಮಾ. ಮೊದಲೇ ಎಲ್ಲಾ ಹಾಗೆ ಮಾತನಾಡಿಕೊಳ್ಳುತ್ತಿದ್ದಾರೆ’ ಎಂದು ತಮಾಷೆ ಮಾಡಿದ್ದಾರೆ. ಆಗ ಆಶಿಕಾ ಅವರೂ ನಕ್ಕು, ‘ಇಲ್ಲ. ಮೊದಲಿಗೆ ಕತೆ ಕೇಳಿದಾಗ ತನಗೆ ಹಾಗನ್ನಿಸಿತು. ಈ ಚಿತ್ರವೂ ಗೂಗ್ಲಿಯಂತೆಯೇ ಬಹಳ ಚೆನ್ನಾಗಿ ಮೂಡಿಬಂದಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಪುನೀತ್ ರಾಜಕುಮಾರ್ ಜೊತೆ ನಟಿಸುವಾಸೆ ಈಡೇರದೆ ಹೋಗಿದ್ದಕ್ಕೆ ಆಶಿಕಾ ಪರಿತಪಿಸುತ್ತಾ ಆತ್ತುಬಿಟ್ಟರು

ಪ್ರಭಾಸ್ ಫ್ಯಾನ್​ ಆತ್ಮಹತ್ಯೆ ಪತ್ರಕ್ಕೆ ಬೆದರಿತಾ ಚಿತ್ರತಂಡ? ‘ರಾಧೆ ಶ್ಯಾಮ್​’​ ಕಡೆಯಿಂದ ಸಿಕ್ತು ಸೂಪರ್​ ಅಪ್​ಡೇಟ್​