ವೇಗ ಅತೀ ವೇಗ… ಅತ್ಯಂತ ವೇಗದಲ್ಲಿ ಚೆಂಡೆಸದ 23 ವರ್ಷದ ಯುವ ವೇಗಿ
Ashok Sharma: 23 ವರ್ಷದ ಈ ಯುವ ವೇಗಿ ಈಗ ಐಪಿಎಲ್ ಇತಿಹಾಸದಲ್ಲಿ ಅತಿ ವೇಗವಾಗಿ ಬೌಲಿಂಗ್ ಮಾಡಿದ ಮೂರನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಉಮ್ರಾನ್ ಮಲಿಕ್ (157 kmph) ಮೊದಲ ಸ್ಥಾನದಲ್ಲಿದ್ದರೆ, ಮಯಾಂಕ್ ಯಾದವ್ (156.7 kmph) ಎರಡನೇ ಸ್ಥಾನದಲ್ಲಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಆವೃತ್ತಿಯಲ್ಲಿ ಭಾರತೀಯ ಯುವ ವೇಗಿಗಳ ಅಬ್ಬರ ಮುಂದುವರಿದಿದೆ. ಏಪ್ರಿಲ್ 4ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧದ ಪಂದ್ಯದಲ್ಲಿ, ಗುಜರಾತ್ ಟೈಟಾನ್ಸ್ ತಂಡದ ಉದಯೋನ್ಮುಖ ವೇಗಿ ಅಶೋಕ್ ಶರ್ಮಾ ಈ ಸೀಸನ್ನ ಅತಿ ವೇಗದ ಎಸೆತವನ್ನು ಎಸೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಈ ಪಂದ್ಯದ 16ನೇ ಓವರ್‌ನಲ್ಲಿ ಬೌಲಿಂಗ್‌ಗೆ ಬಂದ 23 ವರ್ಷದ ಅಶೋಕ್ ಶರ್ಮಾ, ತಮ್ಮ ಓವರ್‌ನ ಅಂತಿಮ ಎಸೆತವನ್ನು ರಾಜಸ್ಥಾನ್ ರಾಯಲ್ಸ್‌ನ ಬ್ಯಾಟರ್ ಧ್ರುವ್ ಜುರೆಲ್ ಅವರಿಗೆ ಎಸೆದರು. ಸ್ಪೀಡೋಮೀಟರ್‌ನಲ್ಲಿ ಈ ಎಸೆತದ ವೇಗ ಗಂಟೆಗೆ 154.2 ಕಿ.ಮೀ (154.2 kmph) ಎಂದು ದಾಖಲಾಯಿತು. ಈ ಮೂಲಕ ಅವರು ಈ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಅನ್ರಿಕ್ ನೋಕಿಯಾ (150.9 kmph) ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು.
2026ರ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಅಶೋಕ್ ಶರ್ಮಾ ಅವರನ್ನು 90 ಲಕ್ಷ ರೂಪಾಯಿಗಳಿಗೆ ಖರೀದಿಸಿತ್ತು. ಆರಂಭದಲ್ಲಿ ಕೇವಲ ಬ್ಯಾಕ್-ಅಪ್ ಬೌಲರ್ ಎನ್ನಲಾಗಿದ್ದ ಅಶೋಕ್, ಈಗ ತಂಡದ ಪ್ರಮುಖ ಅಸ್ತ್ರವಾಗಿ ಹೊರಹೊಮ್ಮುತ್ತಿದ್ದಾರೆ. ಅವರ ನಿಖರವಾದ ಲೈನ್ ಮತ್ತು ಲೆಂಗ್ತ್ ಜೊತೆಗೆ ಗಂಟೆಗೆ 150 ಕಿ.ಮೀ ಗಿಂತ ಹೆಚ್ಚಿನ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವು ಎದುರಾಳಿ ಬ್ಯಾಟರ್‌ಗಳಿಗೆ ನಡುಕ ಹುಟ್ಟಿಸುತ್ತಿದೆ.
ಭಾರತೀಯ ವೇಗಿಗಳ ಪಟ್ಟಿಯಲ್ಲಿ ಸ್ಥಾನ:
23 ವರ್ಷದ ಈ ಯುವ ವೇಗಿ ಈಗ ಐಪಿಎಲ್ ಇತಿಹಾಸದಲ್ಲಿ ಅತಿ ವೇಗವಾಗಿ ಬೌಲಿಂಗ್ ಮಾಡಿದ ಮೂರನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಉಮ್ರಾನ್ ಮಲಿಕ್ (157 kmph) ಮೊದಲ ಸ್ಥಾನದಲ್ಲಿದ್ದರೆ, ಮಯಾಂಕ್ ಯಾದವ್ (156.7 kmph) ಎರಡನೇ ಸ್ಥಾನದಲ್ಲಿದ್ದಾರೆ.

