ಸಿದ್ದರಾಮಯ್ಯ ಸರ್ಕಾರದ ಬೆಲೆಯೇರಿಕೆಯನ್ನು ಸಮರ್ಥಿಸಿಕೊಂಡ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ

Updated on: Apr 09, 2025 | 7:33 PM

ರಾಜ್ಯ ಬಿಜೆಪಿ ನಾಯಕರ ಜನಾಕ್ರೋಶ ಯಾತ್ರೆಯನ್ನು ಸುಬ್ಬಾರೆಡ್ಡಿ ಗೇಲಿ ಮಾಡಿದರು. ಅವರಿಗೆ ಮಾಡಲ ಬೇರೆ ಕೆಲಸವಿಲ್ಲ, ಬಹಳಷ್ಟು ಬಿಜೆಪಿ ನಾಯಕರಿಗೆ ಪ್ರತಿದಿನ ಟಿವಿಯಲ್ಲಿ ಕಾಣಿಸಿಕೊಳ್ಳಬೇಕೆಂಬ ಹಪಾಹಪಿಯಿದೆ, ಹಾಗಾಗಿ ಅವರು ಒಂದಿಲ್ಲೊಂದು ಕಾರಣಕ್ಕೆ ಪ್ರತಿಭಟನೆ ಮಾಡುತ್ತಿರುತ್ತಾರೆ, ಅವರ ಪಾಡಿಗೆ ಅವರು ಮಾಡಲಿ ಬಿಡಿ ಎಂದು ಕಾಂಗ್ರೆಸ್ ಶಾಸಕ ಹೇಳಿದರು.

ಚಿಕ್ಕಬಳ್ಳಾಪುರ, ಏಪ್ರಿಲ್ 9: ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ (SN Subba Reddy) ಹಾಲು ಮತ್ತು ವಿದ್ಯುತ್ ದರ ಏರಿಕೆಯನ್ನು ಸಮರ್ಥಿಸಿಕೊಂಡರು. ನಗರದಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಅವರು ತಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ 60 ಸಾವಿರ ಕೋಟಿ ರೂ.ಗಳನ್ನು ತೆಗೆದಿರಿಸಿದೆ. ಅಷ್ಟು ದೊಡ್ಡ ಮೊತ್ತವನ್ನು ಬದಿಗಿರಿಸಿದ ಬಳಿಕ ಆಯವ್ಯವನ್ನು ಸರಿದೂಗಿಸಲು ಕೆಲ ವಸ್ತುಗಳ ಬೆಲೆ ಜಾಸ್ತಿ ಮಾಡಲೇಬೇಕಾಗುತ್ತದೆ. ಕೇಂದ್ರ ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆ ನೀಡದಿದ್ದರೂ ಗ್ಯಾಸ್ ಸಿಲಿಂಡರ್ ಬೆಲೆ 50 ರೂ. ಜಾಸ್ತಿ ಮಾಡಿಲ್ಲವೇ? ಹಾಲಿನ ದರ ಏರಿಕೆಯಿಂದ ಸರ್ಕಾರಕ್ಕೇನೂ ಪ್ರಯೋಜನವಿಲ್ಲ, ಏರಿಕೆಯಾದ ಹಣ ರೈತರಿಗೆ ಹೋಗುತ್ತದೆ ಎಂದು ರೆಡ್ಡಿ ಹೇಳಿದರು.

ಇದನ್ನೂ ಓದಿ:  ಕೇಂದ್ರದ ಮಾನದಂಡಗಳ ಕಾರಣ ಗ್ಯಾರಂಟಿ ಯೋಜನೆ ನಿಲ್ಲಿಸಬೇಕಾಯಿತು ಅಂತ ರಾಜ್ಯ ಸರ್ಕಾರ ಹೇಳಬಾರದು: ಪ್ರಲ್ಹಾದ್ ಜೋಶಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ  ಕ್ಲಿಕ್ ಮಾಡಿ