ಮಂಗಳೂರು: ಬಜರಂಗ ದಳ ಕಾರ್ಯಕರ್ತರು ಪಬ್​ನಲ್ಲಿ ಪಾರ್ಟಿ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿಗಳನ್ನು ಓಡಿಸಿದರು

ಮಂಗಳೂರು: ಬಜರಂಗ ದಳ ಕಾರ್ಯಕರ್ತರು ಪಬ್​ನಲ್ಲಿ ಪಾರ್ಟಿ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿಗಳನ್ನು ಓಡಿಸಿದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 26, 2022 | 11:24 AM

ಮಂಗಳವಾರ ಬೆಳಗ್ಗೆ ಮಂಗಳೂರು ಪೊಲೀಸ್ ಕಮೀಶನರ್ ಎನ್ ಶಶಿಕುಮಾರ್ ಪಬ್ ಗೆ ಭೇಟಿ ನೀಡಿ ವಿಚಾರಣೆ ನಡೆಸಿದರು.

ಮಂಗಳೂರಿನ ಪಬ್ (pub) ಒಂದರಲ್ಲಿ ಪಾರ್ಟಿ ಮಾಡುತ್ತಿದ್ದ ನಗರದ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿಗಳಿಗೆ ಬಜರಂಗ ದಳದ (Bajrang Dal) ಕಾರ್ಯಕರ್ತರು ಅಡ್ಡಿಪಡಿಸಿ ಅಲ್ಲಿಂದ ಓಡಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ಬಳಿಕ ಪೊಲೀಸರಿಗೆ ವಿಷಯ ಗೊತ್ತಾಗಿ ಅವರು ಪಬ್ ಗೆ ಬಂದು ಬಜರಂಗ ದಳದ ಕಾರ್ಯಕರ್ತರನ್ನು ಸಾಗಹಾಕಿದ್ದಾರೆ. ಮಂಗಳವಾರ ಬೆಳಗ್ಗೆ ಮಂಗಳೂರು ಪೊಲೀಸ್ ಕಮೀಶನರ್ ಎನ್ ಶಶಿಕುಮಾರ್ (N Shashikumar) ಪಬ್ ಗೆ ಭೇಟಿ ನೀಡಿ ವಿಚಾರಣೆ ನಡೆಸಿದರು.