AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿರೋಧದ ಮಧ್ಯೆಯೂ ಬೆಂಗಳೂರು ಅರಮನೆ ಭೂ ಬಳಕೆ, ನಿಯಂತ್ರಣ ವಿಧೇಯಕ ಅಂಗೀಕಾರ

ವಿರೋಧದ ಮಧ್ಯೆಯೂ ಬೆಂಗಳೂರು ಅರಮನೆ ಭೂ ಬಳಕೆ, ನಿಯಂತ್ರಣ ವಿಧೇಯಕ ಅಂಗೀಕಾರ

ಕಿರಣ್​ ಹನಿಯಡ್ಕ
| Updated By: ಗಂಗಾಧರ​ ಬ. ಸಾಬೋಜಿ

Updated on: Mar 06, 2025 | 8:25 PM

ವಿಧಾನಸಭೆಯಲ್ಲಿ ಬೆಂಗಳೂರು ಅರಮನೆಯ ಭೂ ಬಳಕೆ ಮತ್ತು ನಿಯಂತ್ರಣ ಕುರಿತ ವಿಧೇಯಕ ಅಂಗೀಕಾರವಾಗಿದೆ. ರಸ್ತೆ ಅಗಲೀಕರಣಕ್ಕಾಗಿ ಅರಮನೆ ಭೂಮಿಯನ್ನು ಬಳಸುವುದಕ್ಕೆ ಅವಕಾಶ ಮಾಡಿಕೊಡುವ ಈ ವಿಧೇಯಕ ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಟಿಡಿಆರ್ ವರ್ಗಾವಣೆ ವಿಚಾರವೂ ಚರ್ಚೆಗೆ ಬಂದಿದೆ. ವಿಪಕ್ಷದ ಆರೋಪಗಳ ನಡುವೆಯೂ ವಿಧೇಯಕ ಅಂಗೀಕಾರವಾಗಿದೆ.

ಬೆಂಗಳೂರು, ಮಾರ್ಚ್​ 06: ಬೆಂಗಳೂರು ಅರಮನೆ (Bengaluru Palace) ಭೂ ಬಳಕೆ ವಿಚಾರವಾಗಿ ಸರ್ಕಾರದ ಮಧ್ಯೆದ ಜಟಾಪಟಿ ಕೊನೆಗೂ ಅಂತ್ಯವಾದಂತ್ತಾಗಿದೆ. ವಿರೋಧದ ಮಧ್ಯೆಯೂ ಇಂದು ವಿಧಾನಸಭೆಯಲ್ಲಿ ಅರಮನೆ ಭೂ ಬಳಕೆ, ನಿಯಂತ್ರಣ ವಿಧೇಯಕವೂ ಅಂಗೀಕಾರವಾಗಿದೆ. ವಿಧೇಯಕ ಕುರಿತಾಗಿ ಸದನದಲ್ಲಿ ಆಡಳಿತ ಪಕ್ಷ, ವಿಪಕ್ಷದ ನಡುವೆ ಜಟಾಪಟಿ ನಡೆಯಿತು. ರಾಜಕೀಯ ದ್ವೇಷಕ್ಕಾಗಿ ವಿಧೇಯಕ ತಂದಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವಿ ವಿಜಯೇಂದ್ರ ಆರೋಪಿಸಿದ್ದಾರೆ. ಸರ್ಕಾರಕ್ಕೆ ಚಾಮುಂಡೇಶ್ವರಿ ಶಾಪ ತಟ್ಟುತ್ತದೆ ಎಂದು ವಿಪಕ್ಷ ಉಪನಾಯಕ ಬೆಲ್ಲದ್ ಗುಡುಗಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.