ಬಾಂಗ್ಲಾದೇಶದಲ್ಲಿ ಹಿಂದೂಗಳ ಪರ ಪ್ರತಿಭಟನೆ ನಡೆಸಿದ್ದು ಇಸ್ಕಾನ್ ಮುಖ್ಯಸ್ಥರ ಪ್ರಮಾದವಾಗಿದೆ: ಸಿಟಿ ರವಿ

|

Updated on: Nov 26, 2024 | 6:34 PM

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಬಾಂಗ್ಲಾದೇಶದಲ್ಲಿ ಶೆಕಡ 38ರಷ್ಟಿದ್ದ ಹಿಂದೂಗಳ ಸಂಖ್ಯೆಯು ಈಗ ಶೇಕಡ 8ಕ್ಕೆ ಇಳಿದಿದೆ ಎಂದು ರವಿ ಹೇಳಿದರು. ಇವತ್ತು ನಡೆದ ಸಭೆಯ ಬಗ್ಗೆ ಮಾತಾಡಿದ ಅವರು ವಿಧಾನಸಭಾ ಅಧಿವೇಶನ ಆರಂಭವಾಗಲಿದೆ, ಯಾವೆಲ್ಲ ವಿಷಯಳನ್ನು ಸದನದಲ್ಲಿ ಪ್ರಸ್ತಾಪಿಸಬೇಕೆನ್ನುವುದರ ಬಗ್ಗೆ ಚರ್ಚೆ ನಡೆಯಿತು ಎಂದು ಹೇಳಿದರು.

ಬೆಂಗಳೂರು: ವಿಧಾನಸೌಧದಲ್ಲಿ ಹಿರಿಯ ಬಿಜೆಪಿ ನಾಯಕರ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಡನೆ ಮಾತಾಡಿದ ಸಿಟಿ ರವಿ, ನೆರೆರಾಷ್ಟ್ರ ಬಾಂಗ್ಲಾದೇಶ ಪ್ರಸಕ್ತ ವಿದ್ಯಮಾನಗಳು ಕಳವಳಕಾರಿಯಗಿವೆ, ಮತಾಂಧ ಮುಸಲ್ಮಾನರ ಒತ್ತಡಕ್ಕೆ ಮಣಿದು ಅಲ್ಲಿನ ಸರ್ಕಾರ ಇಸ್ಕಾನ್ ಸಂಸ್ಥೆಯ ಮುಖ್ಯಸ್ಥ ಚಿನ್ಮಯ ಪ್ರಭು ಅವರನ್ನು ದೇಶದ್ರೋಹಿ ಚಟುವಟಿಕೆ ನಡೆಸುತ್ತಿದ್ದ ಅರೋಪದಲ್ಲಿ ಬಂಧಿಸಿದೆ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಧ್ವನಿಯೆತ್ತಿ ಪ್ರತಿಭಟನೆ ನಡೆಸಿದ್ದೇ ಪ್ರಭು ಅವರ ಪ್ರಮಾದವಾಗಿದೆ, ಇಸ್ಕಾನ್ ಒಂದು ಜಾಗತಿಕ ಸಂಸ್ಥೆ ಮತ್ತು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಅದೆಂದೂ ಭಾಗಿಯಾಗಿಲ್ಲ, ಕೋವಿಡ್ ಸಮಯದಲ್ಲಿ ಜಾತಿ ಧರ್ಮಗಳೆನ್ನದೆ ಎಲ್ಲರಿಗೂ ನೆರವಾಗಿರುವ ಶ್ರೇಯಸ್ಸು ಇಸ್ಕಾನ್ ಸಂಸ್ಥೆಯದ್ದು, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಿಂಸಾಚಾರವನ್ನು ಭಾರತ ಸರ್ಕಾರವು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾಪಿಸಬೇಕಿದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಸಿದ್ದರಾಮಯ್ಯರನ್ನ ಒಂದು ನಟೋರಿಯಸ್ ಗ್ಯಾಂಗ್​ ಖೆಡ್ಡಾಗೆ ಕೆಡವಿದೆ: ಹೊಸ ಬಾಂಬ್​ ಸಿಡಿಸಿದ ಸಿಟಿ ರವಿ ​