Karnataka Budget Session; ಕೇಂದ್ರ ಅನುದಾನ ವಿಷಯದಲ್ಲಿ ಬಸನಗೌಡ ಯತ್ನಾಳ್ ಸದನಕ್ಕೆ ಸುಳ್ಳು ಹೇಳಿದ್ದಾರೆ: ಸಿದ್ದರಾಮಯ್ಯ

Updated on: Mar 17, 2025 | 1:24 PM

ಕ್ಯಾಪಿಟಲ್ ಇನ್ವೆಸ್ಟ್​ಮೆಂಟ್ ಯೋಜನೆ ಅಡಿ ಕೇಂದ್ರ ಸರ್ಕಾರ ವಿವಿಧ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುದಾನ ನೀಡಿರುವುದು ನಿಜ, ಆದರೆ ಬಸನಗೌಡ ಯತ್ನಾಳ್ ಹೇಳುವಂತೆ ₹10,000 ಕೋಟಿ ಅಲ್ಲ, ಕೇವಲ ₹ 1030 ಕೋಟಿ ಮಾತ್ರ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದು ಕೇವಲ ಕರ್ನಾಟಕ್ಕೆ ಮಾತ್ರ ಅಲ್ಲ ಎಲ್ಲ ರಾಜ್ಯಗಳಿಗೆ ಸಿಕ್ಕಿರುವ ಅನುದಾಗಿದೆ ಎಂದರು.

ಬೆಂಗಳೂರು, ಮಾರ್ಚ್ 17: ಸದನದಲ್ಲಿಂದು ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕೇಂದ್ರ ಸರ್ಕಾರ ಕರ್ನಾಟಕದ ವಿವಿಧ ನೀರಾವರಿ ಯೋಜನೆಗಳಿಗೆ ಅನುದಾನ ನೀಡಿರುವ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸದನಕ್ಕೆ ದೊಡ್ಡ ಸುಳ್ಳು ಹೇಳಿದ್ದಾರೆ ಎಂದರು. ಅವರು ಸದನಕ್ಕೆ ಮಾಹಿತಿ ಕೊರತೆಯಿಂದಾಗಿ ಸುಳ್ಳನ್ನೋ ಹೇಳಿದರೋ, ಉದ್ದೇಶಪೂರ್ವಕವಾಗಿಯೋ ಅಥವಾ ಟೀಕಿಸಲು ಹಾಗೆ ಹೇಳಿದರೋ ಗೊತ್ತಿಲ್ಲ, ಆದರೆ ನಿಜಾಂಶ ಅವರು ಹೇಳಿದ್ದಕ್ಕಿಂತ ಭಿನ್ನವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಯಡಿಯೂರಪ್ಪ ₹ 2,500 ಕೋಟಿ ಕೊಟ್ಟು ಮುಖ್ಯಮಂತ್ರಿಯಾಗಿದ್ದು ಅಂತ ನಾನು ಹೇಳಿಲ್ಲ: ಬಸನಗೌಡ ಯತ್ನಾಳ್