ತುಕಾಲಿಯನ್ನು ಮುಖ್ಯ ದ್ವಾರದ ಬಳಿಗೆ ತಳ್ಳಿ ಮನೆ ಬಾಗಿಲು ಹಾಕಿಕೊಂಡ ಬಿಗ್ ಬಾಸ್ ಸ್ಪರ್ಧಿಗಳು
ಬಿಗ್ ಬಾಸ್ ಮನೆಯಲ್ಲಿ ಯಾವಾಗ ಏನು ಆಗುತ್ತದೆ ಎಂಬುದನ್ನು ಊಹಿಸುವುದು ಕಷ್ಟ. ಒಂದೇ ಕ್ಷಣದಲ್ಲಿ ಆಟದ ಸ್ವರೂಪ ಬದಲಾಗಬಹುದು. ತುಕಾಲಿ ಸಂತೋಷ್ ಅವರನ್ನು ಮುಖ್ಯ ದ್ವಾರದ ಕಡೆಗೆ ತಳ್ಳಲಾಗಿದೆ. ಬಳಿಕ ಗಾಜಿನ ಬಾಗಿಲನ್ನು ಮುಚ್ಚಿಕೊಳ್ಳಲಾಗಿದೆ. ಇದರಿಂದ ತುಕಾಲಿ ಸಂತೋಷ್ ಅವರಿಗೆ ಆತಂಕ ಆಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada) ರಿಯಾಲಿಟಿ ಶೋನಲ್ಲಿ ವಾತಾವರಣ ಈಗ ಕೊಂಚ ತಿಳಿಯಾಗಿದೆ. ಮೊದಲಿನಂತೆ ಮಾತಿನ ಚಕಮಕಿ ನಡೆಯುತ್ತಿಲ್ಲ. ಎಲ್ಲರೂ ಹಾಸ್ಯದ ದಾಟಿಯಲ್ಲೇ ಮಾತನಾಡುತ್ತಿದ್ದಾರೆ. ತುಕಾಲಿ ಸಂತೋಷ್ (Tukali Santhosh) ಅವರು ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ಮನೆ ಮಂದಿಯಲ್ಲೇ ಸೇರಿ ಅವರಿಗೆ ಸ್ವಲ್ಪ ಕೀಟಲೆ ಮಾಡಿದ್ದಾರೆ. ತುಕಾಲಿ ಸಂತೋಷ್ ಅವರನ್ನು ಮುಖ್ಯ ದ್ವಾರದ ಕಡೆಗೆ ತಳ್ಳಲಾಗಿದೆ. ಬಳಿಕ ಗಾಜಿನ ಬಾಗಿಲನ್ನು ಮುಚ್ಚಿಕೊಳ್ಳಲಾಗಿದೆ. ಇದರಿಂದ ತುಕಾಲಿ ಸಂತೋಷ್ ಅವರಿಗೆ ಆತಂಕ ಆಗಿದೆ. ಈ ಸಂಚಿಕೆ ಡಿಸೆಂಬರ್ 29ರಂದು ರಾತ್ರಿ 9.30ಕ್ಕೆ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ದಲ್ಲಿ ಉಚಿತವಾಗಿ ಲೈವ್ ನೋಡಬಹುದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos