‘ಲವ್ ಯೂ ಗಿಲ್ಲಿ’ ಚಿತ್ರ ಸೆಟ್ಟೇರುವುದು ತಡ ಆಗಿದ್ದು ಏಕೆ? ಉತ್ತರಿಸಿದ ನಿರ್ದೇಶಕ

Edited By:

Updated on: Aug 13, 2026 | 8:59 PM

ಗಿಲ್ಲಿ ನಟ ಅವರು ಬಿಗ್ ಬಾಸ್ ಮನೆಗೆ ಹೋಗುವುದಕ್ಕೂ ಮೊದಲೇ ಒಂದು ಸಿನಿಮಾ ಒಪ್ಪಿಕೊಂಡಿದ್ದರು. ಆ ಚಿತ್ರಕ್ಕೆ ‘ಲವ್ ಯೂ ಗಿಲ್ಲಿ’ ಎಂದು ಶೀರ್ಷಿಕೆ ಇಡಲಾಗಿತ್ತು. ಆದರೆ ಆ ಚಿತ್ರ ಶುರು ಆಗುವುದು ತಡವಾಯಿತು. ಆ ಬಗ್ಗೆ ನಿರ್ದೇಶಕ ಆರ್ಯ ಅವರು ಟಿವಿ9 ಜೊತೆ ಮಾತನಾಡಿದ್ದಾರೆ.

ಗಿಲ್ಲಿ ನಟ (Gilli Nata) ಅವರು ಬಿಗ್ ಬಾಸ್ ಮನೆಗೆ ಹೋಗುವುದಕ್ಕೂ ಮೊದಲೇ ಒಂದು ಸಿನಿಮಾ ಒಪ್ಪಿಕೊಂಡಿದ್ದರು. ಆ ಚಿತ್ರಕ್ಕೆ ‘ಲವ್ ಯೂ ಗಿಲ್ಲಿ’ ಎಂದು ಶೀರ್ಷಿಕೆ ಇಡಲಾಗಿತ್ತು. ಆದರೆ ಆ ಚಿತ್ರ ಶುರು ಆಗುವುದಕ್ಕೂ ಮುನ್ನ ಅವರು ‘ಪಳಾರ್’ ಸಿನಿಮಾದ ಕೆಲಸ ಶುರು ಮಾಡಿದರು. ಹಾಗಾಗಿ ‘ಲವ್ ಯೂ ಗಿಲ್ಲಿ’ ಚಿತ್ರ ಸೆಟ್ಟೇರುವುದು ತಡವಾಯಿತು. ಆ ಬಗ್ಗೆ ನಿರ್ದೇಶಕ ಆರ್ಯ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಈ ಸಿನಿಮಾದ ಮಾತುಕಥೆ ಆರಂಭ ಆಗಿದ್ದು ಯಾವಾಗ? ಕಥೆಯನ್ನು ರಚಿಸಿದ್ದು ಹೇಗೆ? ಮೊದಲು ಸೆಟ್ಟೇರಬೇಕಿದ್ದ ಈ ಸಿನಿಮಾ ತಡ ಆಗಿದ್ದಕ್ಕೆ ಕಾರಣ ಏನು? ಈ ಎಲ್ಲ ವಿಷಯಗಳ ಬಗ್ಗೆ ನಿರ್ದೇಶಕ ಆರ್ಯ ಅವರು ಮಾತನಾಡಿದ್ದಾರೆ. ನಾಯಕನಾಗಿ ಗಿಲ್ಲಿ ನಟ ಅವರ 2ನೇ ಚಿತ್ರವಾಗಿ ‘ಲವ್ ಯೂ ಗಿಲ್ಲಿ’ ಸಿನಿಮಾ ಮೂಡಿಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More