ರಾಜ್ಯಸಭಾ ಸದಸ್ಯನಾಗಿರುವುದರಿಂದ ವಕ್ಫ್ ಭೂವಿವಾದದ ಬಗ್ಗೆ ಕಾಮೆಂಟ್ ಮಾಡಲಾಗದು: ಮಲ್ಲಿಕಾರ್ಜುನ ಖರ್ಗೆ

|

Updated on: Nov 09, 2024 | 11:25 AM

ಈವಿಎಮ್​ಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎತ್ತಿರುವ ತಕರಾರಿಗೆ ಪ್ರತಿಕ್ರಿಯೆ ನೀಡಿದ ಮಲ್ಲಿಕಾರ್ಜುನ ಖರ್ಗೆ, ಈವಿಎಮ್​ಗಳ ಬಗ್ಗೆ ಎದ್ದಿರುವ ಆಕ್ಷೇಪಣೆಗಳನ್ನು ಖ್ಯಾತ ವಕೀಲರಾಗಿರುವ ಕಪಿಲ್ ಸಿಬಲ್ ಮತ್ತು ಡಾ ಅಭಿಷೇಕ್ ಮನು ಸಿಂಘ್ವಿ ಅವರನ್ನೊಳಗೊಂಡ ಕಮಿಟಿ ನೋಡಿಕೊಳ್ಳುತ್ತದೆ, ತಾನೇನೂ ಹೇಳಲ್ಲ ಎಂದರು.

ಬೆಂಗಳೂರು: ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಕ್ಫ್ ವಿವಾದದ ಬಗ್ಗೆ ಕಾಮೆಂಟ್ ಮಾಡಲು ನಿರಾಕರಿಸಿದರು. ವಕ್ಫ್ ಸಂಬಂಧಿಸಿದ ವಿಷಯಗಳನ್ನು ನೋಡಿಕೊಳ್ಳಲು ಜಂಟಿ ಸಂಸದೀಯ ಸಮಿತಿ ಇದೆ, ಸಮಿತಿಯ ಚೇರ್ಮನ್ ಮತ್ತು ಸದಸ್ಯರು ಗಮನಹರಿಸುತ್ತಾರೆ, ತಾನು ರಾಜ್ಯಸಭಾ ಸದಸ್ಯನಾಗಿರುವುದರಿಂದ ವಕ್ಫ್ ಭೂವಿವಾದಗಳ ಬಗ್ಗೆ ಕಾಮೆಂಟ್ ಮಾಡಲಾಗದು ಎಂದು ಖರ್ಗೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಶಿಗ್ಗಾವಿ ಉಪ ಚುನಾವಣೆಗೆ ಪಠಾಣ್ ಹೆಸರನ್ನು ಮಲ್ಲಿಕಾರ್ಜುನ ಖರ್ಗೆ ಸೂಚಿಸಿದ್ದಾರೆ: ಸಿದ್ದರಾಮಯ್ಯ