ಬ್ಯಾನರ್ ಗಲಾಟೆ ಪ್ರಕರಣ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು

Updated on: Jan 05, 2026 | 4:58 PM

ಬಳ್ಳಾರಿ ಬ್ಯಾನರ್ ಗಲಾಟೆ ಹಾಗೂ ಫೈರಿಂಗ್ ಪ್ರಕರಣದ ತನಿಖೆ ಚುರುಕುಗೊಂಡಿದೆ. ಬಳ್ಳಾರಿಯ ಅವಂಭಾವಿಯಲ್ಲಿರುವ ರೆಡ್ಡಿ ನಿವಾಸದಲ್ಲಿ ಬಾಂಬ್ ನಿಷ್ಕ್ರಿಯ ದಳ ಇಂಚಿಂಚೂ ಪರಿಶೀಲನೆ ನಡೆಸಿದೆ. ಬುಲೆಟ್ ಪತ್ತೆ ಹಚ್ಚಲು ಬಾಂಬ್ ನಿಷ್ಕ್ರಿಯ ದಳ ಎಂಟ್ರಿ ಕೊಟ್ಟಿದ್ದು, ಬುಲೆಟ್‌ಗಳಿಗಾಗಿ ಹುಡುಕಾಟ ನಡೆಸಿತ್ತು. DSMD ಮಿಷನ್​ಗಳ ಮೂಲಕ ಘಟನಾ ಸ್ಥಳದ ಮೂಲೆ ಮೂಲೆಯನ್ನ ಸರ್ಚ್ ಮಾಡಿದ್ರು. ಬಾಂಬ್ ನಿಷ್ಕ್ರೀಯ ತಂಡಕ್ಕೆ FSL ಟೀಮ್ ಕೂಡಾ ಸಾಥ್ ನೀಡಿದೆ. ಇನ್ನು ಗಲಾಟೆ ವೇಳೆ ಹಾರಿದ್ದ ಗುಂಡು ಗಾಲಿ ಜನಾರ್ದನ ರೆಡ್ಡಿ ನಿವಾಸದಲ್ಲಿರುವ ಕಚೇರಿಯ ಗ್ಲಾಸ್​​​ಗೆ ತಗುಲಿದ್ದು, ಗಾಜು ಪುಡಿ ಪುಡಿಯಾಗಿದೆ. ಇದರಿಂದ ಬಾಂಬ್ ನಿಷ್ಕ್ರಿಯ ದಳ, ಜನಾರ್ದನ ರೆಡ್ಡಿ  ಕಚೇರಿಯೊಳಗೆ ಪರಿಶೀಲನೆ ನಡೆಸಿದೆ.

ಬಳ್ಳಾರಿ, (ಜನವರಿ 05): ಬಳ್ಳಾರಿ ಬ್ಯಾನರ್ ಗಲಾಟೆ ಹಾಗೂ ಫೈರಿಂಗ್ ಪ್ರಕರಣದ (bellary violence) ತನಿಖೆ ಚುರುಕುಗೊಂಡಿದೆ. ಬಳ್ಳಾರಿಯ ಅವಂಭಾವಿಯಲ್ಲಿರುವ ರೆಡ್ಡಿ ನಿವಾಸದಲ್ಲಿ ಬಾಂಬ್ ನಿಷ್ಕ್ರಿಯ ದಳ ಇಂಚಿಂಚೂ ಪರಿಶೀಲನೆ ನಡೆಸಿದೆ. ಬುಲೆಟ್ ಪತ್ತೆ ಹಚ್ಚಲು ಬಾಂಬ್ ನಿಷ್ಕ್ರಿಯ ದಳ ಎಂಟ್ರಿ ಕೊಟ್ಟಿದ್ದು, ಬುಲೆಟ್‌ಗಳಿಗಾಗಿ ಹುಡುಕಾಟ ನಡೆಸಿತ್ತು. DSMD ಮಿಷನ್​ಗಳ ಮೂಲಕ ಘಟನಾ ಸ್ಥಳದ ಮೂಲೆ ಮೂಲೆಯನ್ನ ಸರ್ಚ್ ಮಾಡಿದ್ರು. ಬಾಂಬ್ ನಿಷ್ಕ್ರೀಯ ತಂಡಕ್ಕೆ FSL ಟೀಮ್ ಕೂಡಾ ಸಾಥ್ ನೀಡಿದೆ. ಇನ್ನು ಗಲಾಟೆ ವೇಳೆ ಹಾರಿದ್ದ ಗುಂಡು ಗಾಲಿ ಜನಾರ್ದನ ರೆಡ್ಡಿ ನಿವಾಸದಲ್ಲಿರುವ ಕಚೇರಿಯ ಗ್ಲಾಸ್​​​ಗೆ ತಗುಲಿದ್ದು, ಗಾಜು ಪುಡಿ ಪುಡಿಯಾಗಿದೆ. ಇದರಿಂದ ಬಾಂಬ್ ನಿಷ್ಕ್ರಿಯ ದಳ, ಜನಾರ್ದನ ರೆಡ್ಡಿ  ಕಚೇರಿಯೊಳಗೆ ಪರಿಶೀಲನೆ ನಡೆಸಿದೆ.

ಇದನ್ನೂ ನೋಡಿ: ಬಳ್ಳಾರಿ ಗಲಭೆ: ಪೊಲೀಸ್ ವಶದಲ್ಲಿದ್ದ 9 ಗನ್​​ಮ್ಯಾನ್​​ ಪೈಕಿ ಓರ್ವ ಅರೆಸ್ಟ್