ತ್ಯಾಜ್ಯದಲ್ಲಿ ಸಿಕ್ಕ ಪ್ರಿಸ್ಕ್ರಿಪ್ಷನ್ ಚೀಟಿ ಆಧಾರದ ಮೇಲೆ ಕ್ಲಿನಿಕ್ ಪತ್ತೆ ಮಾಡಿ 15 ಸಾವಿರ ರೂ. ದಂಡ
ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ. ದಂಡ ವಿಧಿಸಲಾಗಿದೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆ ಅಧಿಕಾರಿಗಳು ತ್ಯಾಜ್ಯ ವಿಲೇವಾರಿ ವಿರುದ್ಧ ಕಾರ್ಯಚರಣೆ ನಡೆಸಿದ್ದು, ಈ ವೇಳೆ ಬಿಟಿಎಂ ಲೇಔಟ್ ವಿಭಾಗದ ಈಜಿಪುರ–ಮಂಗಮ್ಮನಪಾಳ್ಯ ಮುಖ್ಯರಸ್ತೆಯಲ್ಲಿ ತ್ಯಾಜ್ಯ ಪತ್ತೆಯಾಗಿದೆ.ಔಷಧಿಗಳ ಪೊಟ್ಟಣ, ವೈದ್ಯಕೀಯ ತ್ಯಾಜ್ಯ ಹಾಗೂ ಮಿಶ್ರ ಕಸವನ್ನು ರಸ್ತೆಬದಿ ಎಸೆಯಲಾಗಿದ್ದು, ಸ್ಥಳದಲ್ಲಿ ಸಿಕ್ಕ ಪ್ರಿಸ್ಕ್ರಿಪ್ಷನ್ ಚೀಟಿ, ದಾಖಲೆಗಳಿಂದ ಅಲ್-ಶಿಫಾ ಪಾಲಿಕ್ಲಿನಿಕ್ಗೆ ಸೇರಿದ ತ್ಯಾಜ್ಯ ಎನ್ನುವುದು ಪತ್ತೆಯಾಗಿದೆ
ಬೆಂಗಳುರು, (ಅಕ್ಟೋಬರ್ 13): ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ. ದಂಡ ವಿಧಿಸಲಾಗಿದೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆ ಅಧಿಕಾರಿಗಳು ತ್ಯಾಜ್ಯ ವಿಲೇವಾರಿ ವಿರುದ್ಧ ಕಾರ್ಯಚರಣೆ ನಡೆಸಿದ್ದು, ಈ ವೇಳೆ ಬಿಟಿಎಂ ಲೇಔಟ್ ವಿಭಾಗದ ಈಜಿಪುರ–ಮಂಗಮ್ಮನಪಾಳ್ಯ ಮುಖ್ಯರಸ್ತೆಯಲ್ಲಿ ತ್ಯಾಜ್ಯ ಪತ್ತೆಯಾಗಿದೆ.ಔಷಧಿಗಳ ಪೊಟ್ಟಣ, ವೈದ್ಯಕೀಯ ತ್ಯಾಜ್ಯ ಹಾಗೂ ಮಿಶ್ರ ಕಸವನ್ನು ರಸ್ತೆಬದಿ ಎಸೆಯಲಾಗಿದ್ದು, ಸ್ಥಳದಲ್ಲಿ ಸಿಕ್ಕ ಪ್ರಿಸ್ಕ್ರಿಪ್ಷನ್ ಚೀಟಿ, ದಾಖಲೆಗಳಿಂದ ಅಲ್-ಶಿಫಾ ಪಾಲಿಕ್ಲಿನಿಕ್ಗೆ ಸೇರಿದ ತ್ಯಾಜ್ಯ ಎನ್ನುವುದು ಪತ್ತೆಯಾಗಿದೆ. ಹೀಗಾಗಿ ಆಯುಕ್ತ ಕೆ. ಎನ್. ರಮೇಶ್ ಅವರು ಸ್ಥಳದಲ್ಲೇ ಕ್ಲಿನಿಕ್‌ಗೆ 15,000 ದಂಡ ಹಾಕಿದ್ದಾರೆ. ಅಲ್ಲದೇ ವೈದ್ಯಕೀಯ ತ್ಯಾಜ್ಯವನ್ನು ಅಧಿಕೃತ ಏಜೆನ್ಸಿಗಳ ಮೂಲಕವೇ ವಿಲೇವಾರಿ ಮಾಡಲು ಸೂಚನೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
