AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನ ಹೇಗಿತ್ತು ನೋಡಿ

ಬೆಂಗಳೂರಿನಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನ ಹೇಗಿತ್ತು ನೋಡಿ

ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Apr 28, 2026 | 9:25 PM

Share

ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ಅಣಕು ಪ್ರದರ್ಶನವನ್ನು ಹಮ್ಮಿಕೊಳ್ಳಲಾಯಿತು. ಅಗ್ನಿಶಾಮಕ, ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣಾ ತಂಡಗಳು ದುರಂತ ಸನ್ನಿವೇಶಗಳಲ್ಲಿ ಪೀಡಿತರನ್ನು ರಕ್ಷಿಸುವ ವಿಧಾನಗಳನ್ನು ಪ್ರದರ್ಶಿಸಿದವು. ಗಾಯಾಳುಗಳನ್ನು ಎತ್ತರದಿಂದ ಸುರಕ್ಷಿತವಾಗಿ ಕೆಳಗಿಳಿಸಲು ರೋಪ್ ತಂತ್ರಗಳು, ಪ್ರಥಮ ಚಿಕಿತ್ಸೆ ಮತ್ತು ಆಸ್ಪತ್ರೆಗೆ ಸಾಗಿಸುವ ಪ್ರಕ್ರಿಯೆಗಳನ್ನು ಅಭ್ಯಾಸ ಮಾಡಲಾಯಿತು. ಈ ಡ್ರಿಲ್ ವಿಪತ್ತು ನಿರ್ವಹಣೆಗೆ ತಂಡಗಳ ಸನ್ನದ್ಧತೆಯನ್ನು ಪರಿಶೀಲಿಸಿತು.

ಬೆಂಗಳೂರು, ಏಪ್ರಿಲ್​​ 28: ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಬೆಂಗಳೂರಿನಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಜಿ ಕಚೇರಿ ಮೈದಾನದಲ್ಲಿ ಮಾಕ್​ಡ್ರಿಲ್ ನಡೆಸಲಾಗಿದೆ. ಅಣಕು ಪ್ರದರ್ಶನದಲ್ಲಿ ಅಗ್ನಿಶಾಮಕ ದಳ, ಗೃಹರಕ್ಷಕ ದಳ, ಸಿವಿಲ್ ಡಿಫೆನ್ಸ್​​ ಭಾಗಿಯಾಗಿದ್ದವು. ತುರ್ತು ಸಂದರ್ಭ ಅಥವಾ ಏರ್​ಸ್ಟ್ರೈಕ್ ಆದಾಗ ಪರಿಸ್ಥಿತಿ ಎದುರಿಸಲು ಯಾವ ರೀತಿ ಸನ್ನದ್ಧರಾಗಬೇಕೆಂದು ಮಾಹಿತಿ ನೀಡಲಾಯಿತು. ಏರ್​ಸ್ಟ್ರೈಕ್ ಸಂದರ್ಭದಲ್ಲಿ ಸೈರನ್ ಮೊಳಗಿದ ತಕ್ಷಣ ಮತ್ತು ರೆಡ್​ಅಲರ್ಟ್ ಸೈರನ್ ಮೊಳಗಿದ ಕೂಡಲೇ ಸುರಕ್ಷಿತ ಜಾಗಕ್ಕೆ ಜನರನ್ನು ಹೇಗೆ ಸ್ಥಳಾಂತರ ಮಾಡಬೇಕೆಂದು ತಿಳಿಸಿಕೊಡಲಾಯಿತು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us