ಚಿನ್ನಾಭರಣ ಕದ್ದಿದ್ದ ನೇಪಾಳಿ ಜೋಡಿ ಮಹಾರಾಷ್ಟ್ರಕ್ಕೆ ಎಸ್ಕೇಪ್!
ಈ ದರೋಡೆಯಲ್ಲಿ ಮನೆಗೆಲಸದವಳು ಕಮಲಾ ಪ್ರಮುಖ ಪಾತ್ರ ವಹಿಸಿದ್ದಳು. ದಿನೇಶ್ ಮತ್ತು ಕಮಲಾ ಸೇರಿದಂತೆ ನಾಲ್ವರ ಗ್ಯಾಂಗ್ ಈ ಕೃತ್ಯವನ್ನು ಎಸಗಿದೆ. ಕಳ್ಳರು ಮಹಾರಾಷ್ಟ್ರ ಮತ್ತು ಗೋವಾದಿಂದ ಇಬ್ಬರನ್ನು ಕರೆಸಿಕೊಂಡು ಕಳ್ಳತನಕ್ಕೆ ಪಕ್ಕಾ ಯೋಜನೆ ರೂಪಿಸಿದ್ದರು. ಕೃತ್ಯದ ನಂತರ, ಅವರು ಕೆ.ಆರ್. ಪುರಂ ರೈಲ್ವೆ ನಿಲ್ದಾಣಕ್ಕೆ ಹೋಗಿ, ನಂತರ ಯಶವಂತಪುರ ಬಸ್ ನಿಲ್ದಾಣದ ಮೂಲಕ ಪರಾರಿಯಾಗಿದ್ದಾರೆ. ಬ್ಯಾಗ್‌ಗಳಲ್ಲಿ ಚಿನ್ನಾಭರಣವನ್ನು ತುಂಬಿಕೊಂಡು ತೆರಳುವಾಗ ಯಶವಂತಪುರದಲ್ಲಿ ಅವರ ಚಲನವಲನಗಳು ಟಿವಿ9ಗೆ ಲಭ್ಯವಾಗಿದೆ.
ಬೆಂಗಳೂರು, ಫೆಬ್ರುವರಿ 07: ಮಾರತ್‌ಹಳ್ಳಿಯ ಯಮಲೂರಿನಲ್ಲಿರುವ ಬಿಲ್ಡರ್ ಶಿವಕುಮಾರ್ ಅವರ ನಿವಾಸದಲ್ಲಿ ಜನವರಿ 25ರಂದು ನಡೆದ 18 ಕೋಟಿ (Nepali couple robbery) ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಮಾಹಿತಿ ಬಹಿರಂಗವಾಗಿದೆ. ಕಳ್ಳತನ ಮಾಡಿದ ನೇಪಾಳಿ ಜೋಡಿ ಮಹಾರಾಷ್ಟ್ರದ ಮೂಲಕ ನೇಪಾಳಕ್ಕೆ ಪರಾರಿಯಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.