AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲುಷಿತ ಕಾವೇರಿ ನೀರಿನ ಪೂರೈಕೆ: ಬೆಂಗಳೂರಿನ ಕತ್ರಿಗುಪ್ಪೆ ನಿವಾಸಿಗಳ ಆಕ್ರೋಶ

ಕಲುಷಿತ ಕಾವೇರಿ ನೀರಿನ ಪೂರೈಕೆ: ಬೆಂಗಳೂರಿನ ಕತ್ರಿಗುಪ್ಪೆ ನಿವಾಸಿಗಳ ಆಕ್ರೋಶ

ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.
| Edited By: |

Updated on: Jul 21, 2026 | 11:41 AM

Share

Bengaluru: ಬೆಂಗಳೂರಿನ ಕತ್ರಿಗುಪ್ಪೆ ವಾರ್ಡ್‌ನಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಕಾವೇರಿ ನೀರು ಕಲುಷಿತಗೊಂಡು ಪೂರೈಕೆಯಾಗುತ್ತಿದೆ. ನೂರಕ್ಕೂ ಹೆಚ್ಚು ಮನೆಗಳು ದುರ್ನಾತ ಬೀರುವ ಕಪ್ಪು ಬಣ್ಣದ ನೀರನ್ನು ಪಡೆಯುತ್ತಿದ್ದು, ಇದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕದಲ್ಲಿದ್ದಾರೆ. ಜಲಮಂಡಳಿಗೆ ದೂರು ನೀಡಿದರೂ ಅಧಿಕಾರಿಗಳಿಂದ ಸರಿಯಾದ ಸ್ಪಂದನೆ ದೊರೆತಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಜುಲೈ 21: ನಗರದ ದಕ್ಷಿಣ ನಗರ ಪಾಲಿಕೆಯ ಕತ್ರಿಗುಪ್ಪೆ ವಾರ್ಡ್‌ನಲ್ಲಿ ಕಾವೇರಿ ನೀರು ಕಲುಷಿತಗೊಂಡು ಪೂರೈಕೆಯಾಗುತ್ತಿದ್ದು, ನೂರಕ್ಕೂ ಹೆಚ್ಚು ಮನೆಗಳ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಪದೇ ಪದೇ ಪುನರಾವರ್ತಿತವಾಗುತ್ತಿರುವ ಈ ಸಮಸ್ಯೆಯಿಂದ ಕಾವೇರಿ ನೀರನ್ನು ನಂಬಿಕೊಂಡಿದ್ದ ಜನರಿಗೆ ದೊಡ್ಡ ಆಘಾತ ಉಂಟಾಗಿದೆ. ಕಲುಷಿತ ನೀರು ಮಣ್ಣು ಮಿಶ್ರಿತವಾಗಿದ್ದು, ಕೆಟ್ಟ ವಾಸನೆ ಹಾಗೂ ಕಪ್ಪು ಬಣ್ಣದಿಂದ ಕೂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕುಡಿಯಲು ಅಥವಾ ಇತರೆ ಗೃಹಬಳಕೆಗೆ ನೀರನ್ನು ಉಪಯೋಗಿಸಲು ಭಯವಾಗುತ್ತಿದೆ ಎಂದು ಜನ ಅಳಲು ತೋಡಿಕೊಂಡಿದ್ದಾರೆ. ಕೊಳಚೆ ನೀರು ಕಾವೇರಿ ನೀರಿನೊಂದಿಗೆ ಮಿಶ್ರಣವಾಗುತ್ತಿರುವುದು ಈ ಸಮಸ್ಯೆಗೆ ಮುಖ್ಯ ಕಾರಣ ಎನ್ನಲಾಗಿದೆ. ಹಿಂದೆ ಪೆಟ್ರೋಲ್, ಆಯಿಲ್ ಮಿಶ್ರಣವಾಗಿದ್ದರೆ, ಈಗ ಸ್ಯಾನಿಟರಿ ಲೈನ್‌ನ ನೀರು ಸೇರಿಕೊಳ್ಳುತ್ತಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ. ಜಲಮಂಡಳಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಸರಿಯಾದ ಸ್ಪಂದನೆ ಸಿಕ್ಕಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳು ಹಾಗೂ ವೃದ್ಧರ ಆರೋಗ್ಯದ ಬಗ್ಗೆ ತೀವ್ರ ಚಿಂತೆಗೀಡಾಗಿದ್ದು, ಕೂಡಲೇ ಅಧಿಕಾರಿಗಳು ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us