RCB ಟೀಮ್ ಖರೀದಿ ಮಾಡ್ತಾರಾ ಡಿಕೆ ಶಿವಕುಮಾರ್? ಡಿಸಿಎಂ ಹೇಳಿದ್ದಿಷ್ಟು..!
. IPL ಚಾಂಪಿಯನ್ ತಂಡವನ್ನ ದಾಖಲೆಯ ಮೊತ್ತಕ್ಕೆ ಮಾರಾಟ ಮಾಡುವ ಸುದ್ದಿಗಳು ಹರಿದಾಡುತ್ತಿದೆ. ಇನ್ನು RCB ಟೀಮ್ ಖರೀದಿ ಮಾಡ್ತಾರಾ ಎಂದು ಡಿ.ಕೆ ಶಿವಕುಮಾರ್ ಗೆ ವರದಿಗಾರರು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನಾನು ರಾಯಲ್ ಚಾಲೆಂಜ್ ವಿಸ್ಕಿಯನ್ನು ಕುಡಿಯಲ್ಲ. ನಾನು ಹುಚ್ಚನೂ ಅಲ್ಲ. ನನಗೇಕೆ RCB ಟೀಮ್ ಬೇಕು? RCB ಟೀಮ್ ಅನ್ನು ನಾನು ಖರೀದಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನವದೆಹಲಿ, (ಜೂನ್ 11): IPL ಸೀಸನ್ 18ರಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಕಪ್ ಗೆದ್ದ ಖುಷಿಯ ಸಂಭ್ರಮಾಚರಣೆಯಲ್ಲಿ ಚಿನ್ನಾಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿ ಸಂಭವಿಸಿದ್ದು, 11 ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ ಆರ್ ಸಿಬಿಗೆ ಒಂದು ಕಪ್ಪು ಚುಕ್ಕೆಯಾಗಿದೆ. ಇದರ ಮಧ್ಯೆ RCB ಫ್ರಾಂಚೈಸಿ ಮಾರಾಟದ ವಿಷಯ ಮುನ್ನೆಲೆಗೆ ಬಂದಿದೆ. IPL ಚಾಂಪಿಯನ್ ತಂಡವನ್ನ ದಾಖಲೆಯ ಮೊತ್ತಕ್ಕೆ ಮಾರಾಟ ಮಾಡುವ ಸುದ್ದಿಗಳು ಹರಿದಾಡುತ್ತಿದೆ. ಇನ್ನು RCB ಟೀಮ್ ಖರೀದಿ ಮಾಡ್ತಾರಾ ಎಂದು ಡಿ.ಕೆ ಶಿವಕುಮಾರ್ ಗೆ ವರದಿಗಾರರು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನಾನು ರಾಯಲ್ ಚಾಲೆಂಜ್ ವಿಸ್ಕಿಯನ್ನು ಕುಡಿಯಲ್ಲ. ನಾನು ಹುಚ್ಚನೂ ಅಲ್ಲ. ನನಗೇಕೆ RCB ಟೀಮ್ ಬೇಕು? RCB ಟೀಮ್ ಅನ್ನು ನಾನು ಖರೀದಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾನು KSCA (ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ) ಸದಸ್ಯ ಮಾತ್ರ. ಈ ಹಿಂದೆ ನನಗೆ ಕೆಎಸ್‌ಸಿಎ ಮ್ಯಾನೇಜ್‌ಮೆಂಟ್‌ಗೆ ಸೇರುವ ಆಫರ್ ಬಂದಿತ್ತು. ಆದರೆ ನನಗೆ ಸಮಯವಿಲ್ಲ. ನನ್ನ ಎಜುಕೇಷನ್ ಇನ್ಸ್‌ಟಿಟ್ಯೂಷನ್ ಅನ್ನು ನೋಡಿಕೊಳ್ಳಲು ನಮ್ಮ ಕುಟುಂಬದ ಬೇರೆ ಸದಸ್ಯರಿಗೆ ಬಿಟ್ಟಿದ್ದೇನೆ. ನನಗೆ ಸಮಯವಿಲ್ಲದ ಕಾರಣ ತಾನು ಆರ್‌ಸಿಬಿ ಟೀಮ್ ಖರೀದಿಸುತ್ತಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಫೈಲ್ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!

‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ

ಇರಾನ್ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!

ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
