AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಕ್ಕದಲ್ಲೇ ಮಾಂಜ್ರಾ ನದಿ ಇದ್ದರೂ ಬೀದರ್​​ನ ಇಸ್ಲಾಂಪುರ ತಾಂಡಾದಲ್ಲಿ ನೀರಿಗಾಗಿ ತಪ್ಪದ ಪರದಾಟ

ಪಕ್ಕದಲ್ಲೇ ಮಾಂಜ್ರಾ ನದಿ ಇದ್ದರೂ ಬೀದರ್​​ನ ಇಸ್ಲಾಂಪುರ ತಾಂಡಾದಲ್ಲಿ ನೀರಿಗಾಗಿ ತಪ್ಪದ ಪರದಾಟ

ಸುರೇಶ್ ನಾಯಕ್
| Edited By: |

Updated on: Aug 28, 2026 | 3:16 PM

Share

ಬೀದರ್ ಜಿಲ್ಲೆಯ ಇಸ್ಲಾಂಪುರ ತಾಂಡಾ ಕಳೆದ ಒಂದು ತಿಂಗಳಿಂದ ತೀವ್ರ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ಮಾಂಜ್ರಾ ನದಿ ಅರ್ಧ ಕಿ.ಮೀ. ದೂರದಲ್ಲಿದ್ದರೂ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಜಲಜೀವನ್ ಮಿಷನ್ ಯೋಜನೆಯೂ ವಿಫಲವಾಗಿದ್ದು, ಬೋರ್‌ವೆಲ್ ಕೆಟ್ಟಿದ್ದರೂ ಪಿಡಿಓ ರಿಪೇರಿಗೆ ಸ್ಪಂದಿಸಿಲ್ಲ. ಇದರಿಂದ ತಾಂಡಾದ 200ಕ್ಕೂ ಹೆಚ್ಚು ನಿವಾಸಿಗಳು ಪ್ರತಿದಿನ ತೊಂದರೆ ಅನುಭವಿಸುತ್ತಿದ್ದಾರೆ.

ಬೀದರ್​​, ಆಗಸ್ಟ್​​ 28: ಜಿಲ್ಲೆಯ ಇಸ್ಲಾಂಪುರ ತಾಂಡಾ ಕಳೆದ ಒಂದು ತಿಂಗಳಿಂದ ತೀವ್ರ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ಮಳೆಗಾಲದಲ್ಲೂ ಈ ತಾಂಡಾದ 30 ಮನೆಗಳ 200ಕ್ಕೂ ಹೆಚ್ಚು ನಿವಾಸಿಗಳು, ಬಹುತೇಕ ಕೂಲಿ ಕಾರ್ಮಿಕರು, ನೀರಿಗಾಗಿ ಪ್ರತಿದಿನ ಪರದಾಡುತ್ತಿದ್ದಾರೆ. ಅಚ್ಚರಿಯೆಂದರೆ, ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿ ಮಾಂಜ್ರಾ ನದಿ ಹರಿಯುತ್ತಿದ್ದರೂ, ತಾಂಡಾದಲ್ಲಿ ನೀರಿಲ್ಲ. ಜಲಜೀವನ್ ಮಿಷನ್ ಯೋಜನೆಯಡಿ ಮನೆಗಳಿಗೆ ನಲ್ಲಿಗಳ ವ್ಯವಸ್ಥೆ ಮಾಡಿದ್ದರೂ, ಬೆರಳೆಣಿಕೆಯ ಮನೆಗಳಿಗೆ ಮಾತ್ರ ನೀರು ಸಿಗುತ್ತದೆ. ಕುಡಿಯುವ ನೀರಿಗಾಗಿ ಕೊರೆಯಲಾದ ಬೋರ್‌ವೆಲ್ ಕೂಡ ಒಂದು ತಿಂಗಳಿಂದ ಕೆಟ್ಟು ನಿಂತಿದೆ. ಈ ಬಗ್ಗೆ ಪಿಡಿಒಗೆ ಹಲವು ಬಾರಿ ಮನವಿ ಮಾಡಿದರೂ, ಅವರು ಬೋರ್‌ವೆಲ್ ರಿಪೇರಿ ಮಾಡಲು ಸ್ಪಂದಿಸಿಲ್ಲ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಸುರೇಶ್ ನಾಯಕ್
ಸುರೇಶ್ ನಾಯಕ್

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ...

Read More