ಶಿವಮೊಗ್ಗ SSLC ವಿದ್ಯಾರ್ಥಿ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸಂಕೇತ್ ಕೊಲೆ ರಹಸ್ಯ ಬಯಲು!
ಶಿವಮೊಗ್ಗ ಹೊರವಲಯದ ಸೂಳೆಬೈಲಿನಲ್ಲಿ ಮೊನ್ನೆ ಅಂದ್ರೆ ಸೋಮವಾರ ರಾತ್ರಿ ಘೋರವೇ ನಡೆದು ಹೋಗಿತ್ತು. ಸ್ಪೆಷಲ್‌ಕ್ಲಾಸ್‌ಗೆ ಅಂತಾ ಶಾಲೆಗೆ ಹೋಗಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಂಕೇತ್ ಮನೆಗೆ ವಾಪಸ್ ಆಗುವಾಗ್ಲೇ ಕೊಲೆ ಆಗಿದ್ದ. ರಾತ್ರಿ 9.30 ರ ಹೊತ್ತಲ್ಲೇ ಹಲ್ಲೆ ನಡೆಸಿ ಸಂಕೇತ್‌ನನ್ನ ಕೊಂದವರು ಎಸ್ಕೇಪ್ ಆಗಿದ್ರು. ಅದೇ ಮರ್ಡರ್ ಕೇಸ್‌ಗೆ ಇಂದು ಟ್ವಿಸ್ಟ್ ಸಿಕ್ಕಿದೆ. ಜತೆಯಲ್ಲೇ ಓದುತ್ತಿದ್ದವರೇ ದುರುಳರು ಎನ್ನುವುದು ಬಯಲಾಗಿದೆ.
ಶಿವಮೊಗ್ಗ, (ಫೆಬ್ರವರಿ 25): ಶಿವಮೊಗ್ಗ (Shivamogga) ಹೊರವಲಯದಲ್ಲಿರುವ ಸೂಳೆಬೈಲಿನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಸಂಕೇತ್ ಕೊಲೆ ರಾಜ್ಯದ ಜನರನ್ನು ಬೆಚ್ಚಿಬೀಳಿಸಿದೆ. ಸೂಳೆಬೈಲಿನಲ್ಲಿ ಸಂಕೇತ್ ಕೊಲೆ ನಡೆದು ಇಂದಿಗೆ ಮೂರನೇ ದಿನ. ಫೆ. 23. ರ ರಾತ್ರಿ 9.30 ಆಸುಪಾಸಿನಲ್ಲಿ ಆತನ ಕೊಲೆ ನಡೆದಿತ್ತು. ಕೊಲೆ ಕೇಸ್ ನಲ್ಲಿ ಈಗಾಗಲೇ ತುಂಗಾ ನಗರ ಪೊಲೀಸರು 7 ಅಪ್ರಾಪ್ತರನ್ನು ಬಂಧಿಸಿದ್ದಾರೆ. ಈ ಕೊಲೆ ಕೇಸ್ ನಲ್ಲಿ ಅದೇ ಶಾಲೆಯ ನಾಲ್ವರು ಇರುವುದು ಆಘಾತಕಾರಿ ಬೆಳವಣಿಗೆಯಾಗಿದೆ. ಕೊಲೆ ದಿನ ನಡೆದಿದ್ದು ಏನು? ಕೊಲೆ ಮಾಡಿದ್ದು ಯಾರು? ಎನ್ನುವುದನ್ನು ಹತ್ಯೆಯಾದ ಸಂಕೇತ್ ಸಹಪಾಠಿಗಳು ಬಿಚ್ಚಿಟ್ಟಿದ್ದಾರೆ. ಇನ್ನು ಸಂಕೇತ ಜೀವ ಉಳಿಸಿಲು ಶಿಕ್ಷಕ ನಡೆಸಿದ ಹೋರಾಟ ಹೇಗಿತ್ತು ಎನ್ನುವ ಡಿಟೇಲ್ಸ್ ವಿಡಿಯೋನಲ್ಲಿದೆ.
Published on: Feb 25, 2026 09:24 PM
Follow Us

