ಮುಂಬೈನಲ್ಲಿ ಬೃಹತ್ ಪೈಪ್ ಒಡೆದು ಆಗಸದೆತ್ತರಕ್ಕೆ ಹಾರಿದ ನೀರು; ಶಾಕ್ ಆದ ಜನರು

Updated on: Aug 23, 2024 | 8:21 PM

ಮುಂಬೈಗೆ ಕುಡಿಯುವ ನೀರು ಪೂರೈಸುವ ಪ್ರಮುಖ ಮಾರ್ಗವಾದ ತಾನ್ಸಾ ಪೈಪ್‌ಲೈನ್ ಗೌತಮ್ ನಗರ, ಪೊವೈಯ ಆರೆ ಕಾಲೋನಿಯಲ್ಲಿ ನೀರಿನ ಪೈಪ್ ಒಡೆದಿದೆ. ಪೈಪ್ ಸ್ಫೋಟದಿಂದಾಗಿ ಸಾವಿರಾರು ಲೀಟರ್ ಸಂಸ್ಕರಿಸಿದ ನೀರು ವ್ಯರ್ಥವಾಗುತ್ತಿದೆ. ಆಗಸದೆತ್ತರಕ್ಕೆ ಹಾರುತ್ತಿರುವ ನೀರನ್ನು ಕಂಡು ಸ್ಥಳೀಯರು ಆಶ್ಚರ್ಯಕ್ಕೊಳಗಾಗಿದ್ದಾರೆ.

ಮುಂಬೈಗೆ ಪ್ರಮುಖ ನೀರು ಸರಬರಾಜು ಮಾಡುವ ತಾನ್ಸಾ ಪೈಪ್‌ಲೈನ್ ಇಂದು ಮಧ್ಯಾಹ್ನ ಪೊವಾಯಿಯ ಆರೆ ಕಾಲೋನಿಯಲ್ಲಿ ಒಡೆದುಹೋಗಿದೆ. ಭಾರೀ ಪ್ರಮಾಣದ ಸೋರಿಕೆಯಿಂದಾಗಿ ಶುದ್ಧೀಕರಿಸಿದ ಸಾವಿರಾರು ಕುಡಿಯುವ ನೀರು ವ್ಯರ್ಥವಾಗುತ್ತಿದೆ. ನೀರಿನ ಸೋರಿಕೆಯಿಂದಾಗಿ ಅಂಧೇರಿ ಪೂರ್ವ, ಬಾಂದ್ರಾ ಪೂರ್ವ, ಬೆಹ್ರಂಪಾಡಾ, ಬಾಂದ್ರಾ ರೈಲ್ವೆ ಟರ್ಮಿನಸ್ ಮತ್ತು ವರ್ಲಿ, ಲೋವರ್ ಪರೇಲ್ ಪ್ರದೇಶಗಳಿಗೆ ನೀರು ಪೂರೈಕೆಗೆ ತೊಂದರೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us