AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌಂದರ್ಯಾ ಶೆಟ್ಟಿ ಮನಒಲಿಸಲು ಸಖತ್ ರೊಮ್ಯಾಂಟಿಕ್ ಆದ ಗಗನ್-ಯಶಸ್

ಸೌಂದರ್ಯಾ ಶೆಟ್ಟಿ ಮನಒಲಿಸಲು ಸಖತ್ ರೊಮ್ಯಾಂಟಿಕ್ ಆದ ಗಗನ್-ಯಶಸ್

ರಾಜೇಶ್ ದುಗ್ಗುಮನೆ
|

Updated on:Oct 29, 2026 | 9:01 AM

Share

ಬಿಗ್ ಬಾಸ್ ಕನ್ನಡ ಮನೆಯಲ್ಲಿ ರಂಜನೆಗೆ ಕೊರತೆಯಿಲ್ಲದಂತೆ ದಿನಕ್ಕೊಂದು ಕುತೂಹಲಕಾರಿ ಘಟನೆಗಳು ನಡೆಯುತ್ತಿವೆ. ಮನೆಯಲ್ಲಿ ನಡೆದ ವಿಶೇಷ ಟಾಸ್ಕ್‌ನಲ್ಲಿ 'ಶೆಟ್ಟಿ ಡಾನ್' ಸೌಂದರ್ಯಾ ಶೆಟ್ಟಿ ಅವರ ಮನ ಒಲಿಸಲು ಸ್ಪರ್ಧಿ ಗಗನ್ ರೊಮ್ಯಾಂಟಿಕ್ ಅವತಾರವೆತ್ತಿದ್ದಾರೆ. ತನಗೆ ಸಿಕ್ಕ ಪ್ರಶಸ್ತಿಯನ್ನೇ ಕೊಡುಗೆಯಾಗಿ ನೀಡಿ ಗಮನ ಸೆಳೆದಿದ್ದರೆ, ಮತ್ತೊಂದೆಡೆ ಯಶಸ್ ಕೂಡ ಕಠಿಣ ಸ್ಪರ್ಧೆ ಒಡ್ಡುತ್ತಿದ್ದಾರೆ.

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಮನರಂಜನೆ ಹಾಗೂ ರೋಚಕ ಸನ್ನಿವೇಶಗಳಿಗೆ ಯಾವುದೇ ಕೊರತೆಯಿಲ್ಲ. ಸದ್ಯ ಬಿಗ್ ಬಾಸ್ ಮನೆಯಲ್ಲಿ ನಡೆದಿರುವ ವಿಶೇಷ ಟಾಸ್ಕ್ ಒಂದರಲ್ಲಿ, ‘ಶೆಟ್ಟಿ ಡಾನ್’ ಎಂದೇ ಕರೆಯಲ್ಪಡುವ ಸೌಂದರ್ಯಾ ಶೆಟ್ಟಿ ಅವರ ಮನ ಒಲಿಸಲು ಸ್ಪರ್ಧಿಗಳು ಹರ ಸಹಾಸ ಪಡೆಉತ್ತಿರುವ ದೃಶ್ಯಗಳು ಪ್ರೇಕ್ಷಕರ ಗಮನ ಸೆಳೆದಿವೆ. ಮನೆಯಲ್ಲಿ ನಡೆದ ಈ ಟಾಸ್ಕ್ ವೇಳೆ ಸ್ಪರ್ಧಿ ಗಗನ್ ಅವರು ಸೌಂದರ್ಯಾ ಶೆಟ್ಟಿ ಅವರಿಗೆ ಉಡುಗೊರೆ ನೀಡಿ, ತಮ್ಮ ವಿಶೇಷ ಶೈಲಿಯಲ್ಲಿ ಮನವೊಲಿಸುವ ಪ್ರಯತ್ನ ಮಾಡಿದರು.ಅವರು ತಮಗೆ ಬಂದ ಉತ್ತಮ ಪದಕವನ್ನೇ ನೀಡಿದರು. ಸೌಂದರ್ಯಾ ಶೆಟ್ಟಿ ಅವರ ಗಮನ ಸೆಳೆಯಲು ಕೇವಲ ಗಗನ್ ಮಾತ್ರವಲ್ಲದೆ, ಯಶಸ್ ಕೂಡ ಸಾಕಷ್ಟು ಶ್ರಮ ಹಾಕುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Oct 29, 2026 09:01 AM

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More