Bigg Boss Kannada Press Meet Live: ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಕುರಿತು ಕಿಚ್ಚ ಸುದೀಪ್​ ಸುದ್ದಿಗೋಷ್ಠಿ; ಲೈವ್​ ನೋಡಿ..

| Updated By: ರಮೇಶ್ ಬಿ. ಜವಳಗೇರಾ

Updated on: Sep 23, 2024 | 4:11 PM

Kichcha Sudeep Press Meet Live Streaming: ಸೆಪ್ಟೆಂಬರ್​ 29ರಂದು ‘ಬಿಗ್​ ಬಾಸ್ ಕನ್ನಡ ಸೀಸನ್ 11’ ಆರಂಭ ಆಗಲಿದೆ. ಆ ಬಗ್ಗೆ ಮಾಹಿತಿ ನೀಡಲು ಇಂದು (ಸೆ.23) ಕಿಚ್ಚ ಸುದೀಪ್​ ಅವರ ಕಲರ್ಸ್​ ಕನ್ನಡ ವಾಹಿನಿ ಜೊತೆ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಸುದ್ದಿಗೋಷ್ಟಿಯ ಲೈವ್ ವಿಡಿಯೋ ಇಲ್ಲಿದೆ. ಈ ಬಾರಿಯ ವಿಶೇಷತೆಗಳು ಏನು ಎಂಬ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ.

ಸತತ 11ನೇ ಸಾಲಿಗೆ ಕಿಚ್ಚ ಸುದೀಪ್​ ಅವರು ಬಿಗ್​ ಬಾಸ್​ ಕಾರ್ಯಕ್ರಮದ ನಿರೂಪಕನಾಗಿ ಮುಂದುವರಿಯುತ್ತಿದ್ದಾರೆ. ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಸೆ.29ಕ್ಕೆ ‘ಬಿಗ್​ ಬಾಸ್​ ಕನ್ನಡ’ 11ನೇ ಸೀಸನ್​ ಶುರುವಾಗಲಿದೆ. ಪ್ರತಿ ಬಾರಿಯೂ ಹೊಸ ಹೊಸ ಅಂಶಗಳನ್ನು ಪರಿಚಯಿಸಲಾಗುತ್ತದೆ. ಈ ವರ್ಷದ ವಿಶೇಷತೆಗಳ ಬಗ್ಗೆ ಕಿಚ್ಚ ಸುದೀಪ್​ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡುತ್ತಿದ್ದಾರೆ. ಕಿರುತೆರೆ, ಮಾಧ್ಯಮ, ಸಿನಿಮಾ ಮುಂತಾದ ಕ್ಷೇತ್ರಗಳ ಸ್ಪರ್ಧಿಗಳು ‘ಬಿಗ್​ ಬಾಸ್​ ಕನ್ನಡ ಸೀಸನ್ 11’ ಶೋನಲ್ಲಿ ಭಾಗಿಯಾಗಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Sep 23, 2024 04:06 PM