ಹೇಗಿದೆ ನೋಡಿ ಬಿಗ್ ಬಾಸ್ ಹೊಸ ಮನೆ; ಈ ವಿಡಿಯೋ ಮೂಲಕ ಪ್ರತಿ ಮೂಲೆಯ ದರ್ಶನ
ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಕಾಲಿಡುವುದಕ್ಕೂ ಮೊದಲೇ ವೀಕ್ಷಕರಿಗೆ ದೊಡ್ಮನೆಯನ್ನು ತೋರಿಸಲಾಗುತ್ತಿದೆ. ಈ ಬಾರಿ ವಿಮಾನಯಾನದ ಥೀಮ್ನಲ್ಲಿ ಬಿಗ್ ಬಾಸ್ ಮನೆ ನಿರ್ಮಾಣ ಆಗಿದೆ. ಹೊಸ ಸೀಸನ್ಗೆ ತಕ್ಕಂತೆ ಹೊಸ ರೀತಿಯಲ್ಲಿ ಮನೆಯ ವಿನ್ಯಾಸ ಮಾಡಲಾಗಿದೆ. ಮನೆ ಒಳಗಿನ ಪ್ರತಿ ಮೂಲೆಯ ದರ್ಶನ ಈ ವಿಡಿಯೋದಲ್ಲಿ ಆಗಿದೆ.
ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಕಾಲಿಡುವುದಕ್ಕೂ ಮೊದಲೇ ವೀಕ್ಷಕರಿಗೆ ದೊಡ್ಮನೆಯನ್ನು ತೋರಿಸಲಾಗುತ್ತಿದೆ. ಈ ಬಾರಿ ವಿಮಾನಯಾನದ ಥೀಮ್ನಲ್ಲಿ ಬಿಗ್ ಬಾಸ್ ಮನೆ ನಿರ್ಮಾಣ ಆಗಿದೆ. ಹೊಸ ಸೀಸನ್ಗೆ ತಕ್ಕಂತೆ ಹೊಸ ರೀತಿಯಲ್ಲಿ ಮನೆಯನ್ನು ವಿನ್ಯಾಸಗೊಳಿಸಲಾಗಿದೆ. ಗಾರ್ಡನ್ ಏರಿಯಾ, ಕಿಚನ್, ಬೆಡ್ ರೂಮ್, ಲಿವಿಂಗ್ ಏರಿಯಾ, ಟಾಸ್ಕ್ ನಡೆಯುವ ಸ್ಥಳ, ಕನ್ಫೆಷನ್ ರೂಮ್, ಬಾಲ್ಕನಿ ಸೇರಿದಂತೆ ಬಿಗ್ ಬಾಸ್ ಮನೆ ಒಳಗಿನ ಪ್ರತಿ ಮೂಲೆಯ ದರ್ಶನವನ್ನು ಈ ವಿಡಿಯೋದಲ್ಲಿ ಮಾಡಿಸಲಾಗಿದೆ. ಕಿಚ್ಚ ಸುದೀಪ್ ಅವರು ಇಂದು (ಸೆಪ್ಟೆಂಬರ್ 6) ಸಂಜೆ 7 ಗಂಟೆಗೆ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. ಇಷ್ಟು ವರ್ಷಗಳ ಕಾಲ ಯಶಸ್ವಿಯಾಗಿ 12 ಸೀಸನ್ಗಳು ಮುಗಿದಿವೆ. 13ನೇ ಸೀಸನ್ ನೋಡಲು ವೀಕ್ಷಕರು ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

