ನಾಲ್ಕು ಅಧಿವೇಶನಗಳಿಂದ ಕೇಳುತ್ತಿರುವ ಪ್ರಶ್ನೆಗೆ ಉತ್ತರವಿಲ್ಲ ಎಂದ ಹರೀಶ್, ನೆರವಿಗೆ ಬಂದ ಯತ್ನಾಳ್

Updated on: Mar 14, 2025 | 1:55 PM

ತಮ್ಮ ಪಕ್ಷ ಮತ್ತು ಬಣದ ಸದಸ್ಯನ ನೆರವಿಗೆ ಧಾವಿಸುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹರೀಶ್ 4 ಅಧಿವೇಶನಗಳಿಂದ ಕೇಳುತ್ತಿರುವ ಪ್ರಶ್ನೆಗೆ ಉತ್ತರವಿಲ್ಲವೆಂದರೆ ಹೇಗೆ ಎಂದು ಆಕ್ಷೇಪಣೆ ಸಲ್ಲಿಸುತ್ತ, ಉತ್ತರ ಸಿಗದ ಪ್ರಶ್ನೆಗಳ ಪರಿಶೀಲನೆ ನಡೆಸಲು ಉಪ ಸಭಾಧ್ಯಕ್ಷರ ನೇತೃತ್ವದಲ್ಲಿ ಸ್ಪೀಕರ್ ಅವರು ಸಮಿತಿ ರಚಿಸಿರುವುದನ್ನು ಸ್ವಾಗತಿಸಿದರು.

ಬೆಂಗಳೂರು, 14 ಮಾರ್ಚ್: ವಿಧಾನಮಂಡಲದ ಇಂದಿನ ಕಲಾಪದಲ್ಲಿ ಬಿಜೆಪಿ ಶಾಸಕ ಬಿಪಿ ಹರೀಶ್ ಮತ್ತು ಸಭಾಧ್ಯಕ್ಷ ಯುಟಿ ಖಾದರ್ (UT Khader) ಪ್ರಶ್ನೆ ಕೇಳುವುದಕ್ಕೆ ಸಂಬಂಧಿಸಿದಂತೆ ಮಾತಿನ ಜಟಾಪಟಿ ನಡೆಯಿತು. ನೀವು ಹೆಸರೇ ಬರೆಸಿಲ್ಲ, ಹೇಗೆ ಪ್ರಶ್ನೆ ಕೆಳುತ್ತೀರಿ ಅಂತ ಸಭಾಧ್ಯಕ್ಷರು ಹೇಳಿದಾಗ ಹರೀಶ್, ನಾಲ್ಕು ಅಧಿವೇಶನಗಳಿಂದ ಪ್ರಶ್ನೆ ಕೇಳುತ್ತಿದ್ದೇನೆ ಉತ್ತರ ಸಿಕ್ಕಿಲ್ಲ, ನೀವು ಆಡಳಿತ ಪಕ್ಷದ ಜೊತೆ ಸೇರಿದ್ದೀರಿ ಎಂದು ನೇರವಾಗಿ ಅರೋಪಿಸುತ್ತಾರೆ. ಅವರ ಮಾತಿಗೆ ವಿಚಲಿತರಾಗದ ಖಾದರ್ ಇನ್ನು ಮುಂದೆ ಸದಸ್ಯರ ಪ್ರಶ್ನೆಗಳಿಗೆ ಉತ್ತರ ಸಿಗದಿದ್ದರೆ ಅದಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಅನ್ನುತ್ತಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಎಲ್ಲರಿಗೂ ಕ್ಲಬ್ ಇರಬೇಕಾದರೆ ಶಾಸಕರಿಗ್ಯಾಕೆ ಬೇಡ, ಅವರಿಗೂ ಒಂದನ್ನು ಮಾಡುತ್ತೇವೆ: ಯುಟಿ ಖಾದರ್, ಸ್ಪೀಕರ್