RCB Vs CSK: ನಿನ್ನೆಯಂತೆ ಇವತ್ತೂ ಕ್ರಿಕೆಟ್ ಪ್ರೇಮಿಗಳನ್ನು ದೋಚುತ್ತಿರುವ ಕಾಳಸಂತೆಕೋರರು, ₹1,000 ಟಿಕೆಟ್ ಗೆ ₹10,000!

|

Updated on: May 18, 2024 | 5:45 PM

ಕಲಬುರಗಿಯ ವ್ಯಕ್ತಿಯೊಬ್ಬರು ಮಗನನ್ನು ಹೆಗಲ ಮೇಲೆ ಹೊತ್ತುಕೊಂಡು ಕುಟುಂಬದ ಇತರ ಸದಸ್ಯರೊಂದಿಗೆ ಮ್ಯಾಚ್ ನೋಡೋಣ ಅಂತ ಬಂದಿದ್ದಾರೆ, ಅದರೆ ₹1,000 ಟಿಕೆಟ್ ಬ್ಲ್ಯಾಕ್ ನಲ್ಲಿ ₹ 10,000 ಮಾರಾಟ ಆಗುತ್ತಿರುವುದು ನೋಡಿ ವಾಪಸ್ಸು ಮನೆಗೆ ಹೋಗಲು ನಿರ್ಧರಿಸಿದರು.

ಬೆಂಗಳೂರು: ಆರ್ ಸಿಬಿ ಮತ್ತು ಸಿಎಸ್ ಕೆ ನಡುವೆ ಇಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ನಡೆಯಲಿರುವ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಟಿಕೆಟ್ ಗಳು ಬ್ಲ್ಯಾಕ್ ನಲ್ಲಿ (black) ಮಾರಾಟವಾಗುತ್ತಿರುವ ಬಗ್ಗೆ ನಾವು ನಿನ್ನೆಯೂ ವರದಿ ಮಾಡಿದ್ದೆವು. ನಿನ್ನೆ ಟಿಕೆಟ್ ಕೊಳ್ಳಲು ಬಂದ ಸಾವಿರಾರು ಜನ ಟಿಕೆಟ್ ಸಿಗದ ಕಾರಣ ವಾಪಸ್ಸು ಹೋದರು, ಇನ್ನು ಇವತ್ತು ಎಲ್ಲಿಂದ ಸಿಕ್ಕಾವು? ನಿನ್ನೆ ₹ 3,000 ಟಿಕೆಟ್ ₹20,000 ರೂ.ಗಳಿಗೆ ಮಾರಾಟವಾಗುತ್ತಿರುವ ಬಗ್ಗೆ ಕ್ರಿಕೆಟ್ ಪ್ರೇಮಿಗಳು ಹೇಳಿದ್ದರು. ಇವತ್ತು ಸಹ ಅದೇ ಪಾಡು. ಕಲಬುರಗಿಯ (Kalaburagi) ವ್ಯಕ್ತಿಯೊಬ್ಬರು ಮಗನನ್ನು ಹೆಗಲ ಮೇಲೆ ಹೊತ್ತುಕೊಂಡು ಕುಟುಂಬದ ಇತರ ಸದಸ್ಯರೊಂದಿಗೆ ಮ್ಯಾಚ್ ನೋಡೋಣ ಅಂತ ಬಂದಿದ್ದಾರೆ, ಅದರೆ ₹1,000 ಟಿಕೆಟ್ ಬ್ಲ್ಯಾಕ್ ನಲ್ಲಿ ₹ 10,000 ಮಾರಾಟ ಆಗುತ್ತಿರುವುದು ನೋಡಿ ವಾಪಸ್ಸು ಮನೆಗೆ ಹೋಗಲು ನಿರ್ಧರಿಸಿದರು. ಈ ಆರ್ ಸಿಬಿ ಅಭಿಮಾನಿ ಗುಲ್ಬರ್ಗಾದವರಾದರೂ ಬೆಂಗಳೂರಲ್ಲಿ ವಾಸವಾಗಿದ್ದಾರಂತೆ. ಸ್ಟೇಡಿಯಂ ಹೊರಗೆ ನಿಂತಿರುವ ಬಹಳಷ್ಟು ಜನಕ್ಕೆ ಟಿಕೆಟ್ ಸಿಕ್ಕಿಲ್ಲ ಅದರೂ ಏನಾದರೂ ಪವಾಡ ನಡೆದು ಟಿಕೆಟ್ ದಕ್ಕೀತು ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೆಂಗಳೂರಿನಲ್ಲಿಂದು RCB vs CSK ಪಂದ್ಯ: ಈ ರಸ್ತೆಗಳಲ್ಲಿ ಪಾರ್ಕಿಂಗ್​ ನಿಷೇಧ, ಎಲ್ಲೆಲ್ಲಿ ಅವಕಾಶ? ಇಲ್ಲಿದೆ ಮಾಹಿತಿ