ನೇಣು ಬಿಗಿದ ಸ್ಥಿತಿಯಲ್ಲಿ ಕೆಎಎಸ್ ಅಧಿಕಾರಿಯೊಬ್ಬರ ಪತ್ನಿಯ ದೇಹ ಪತ್ತೆ, ಡಿಸಿಪಿ ಸೈದುಲು ಅದಾವತ್ ಹೇಳೋದೇನು?

|

Updated on: May 11, 2024 | 6:11 PM

ಡೆತ್ ನೋಟ್ ಅವರೇ ಬರೆದಿದ್ದಾರಾ ಅಥವಾ ಬೇರೆಯವರು ಬರೆದಿರೋದಾ ಅನ್ನೋದು ತನಿಖೆಯ ನಂತರ ಗೊತ್ತಾಗಲಿದೆ ಎಂದು ಅಧಿಕಾರಿ ಹೇಳಿದರು. ಮೃತ ಮಹಿಳೆಯ ದೇಹವನ್ನು ಪೋಸ್ಟ್ ಮಾರ್ಟಂಗೆ ತೆಗೆದುಕೊಂಡು ಹೋಗಲಾಗಿದ್ದು, ವರದಿ ಬಂದ ಬಳಿಕ ಅವರ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಅಂತ ಗೊತ್ತಾಗಲಿದೆ ಎಂದು ಸೈದುಲು ಅದಾವತ್ ಹೇಳಿದರು.

ಬೆಂಗಳೂರು: ನಗರದ ಉತ್ತರ ವಿಭಾಗದ ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ (Sanjaynagar police station limits) ಕೆಎಎಸ್ ಅಧಿಕಾರಿಯೊಬ್ಬರ ಪತ್ನಿಯೊಬ್ಬರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಡಿಸಿಪಿ ಸೈದುಲು ಅದಾವತ್ ಹೇಳಿದರು. ಪೊಲೀಸ್ ಅಧಿಕಾರಿ ಹೇಳುವ ಪ್ರಕಾರ ಮೃತ ಮಹಿಳೆಯ ದೇಹ ಫ್ಯಾನ್ ಗೆ ಸೀರೆಯಿಂದ ನೇತಾಡುತಿತ್ತು. ಇಂದು ಮಧ್ಯಾಹ್ನ 1.30 ಕ್ಕೆ ಮೃತ ಮಹಿಳೆಯ ಸಹೋದರ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರಂತೆ. ಅವರ ದೇಹ ಪತ್ತೆಯಾದ ಕೊಠಡಿಯಲ್ಲಿ ಡೆತ್ ನೋಟ್ ಸಿಕ್ಕಿದ್ದು ಅದರಲ್ಲಿ ಅವರು ತನ್ನ ಸಾವಿಗೆ ಯಾರೂ ಕಾರಣರಲ್ಲ, ಮಾನಸಿಕ ಒತ್ತಡ ಮತ್ತು ಹತಾಷೆಯಿಂದ ಬಳಲುತ್ತಿರುವ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವೆನೆಂದು ಬರೆಯಲಾಗಿದೆಯಂತೆ. ಡೆತ್ ನೋಟ್ ಅವರೇ ಬರೆದಿದ್ದಾರಾ ಅಥವಾ ಬೇರೆಯವರು ಬರೆದಿರೋದಾ ಅನ್ನೋದು ತನಿಖೆಯ ನಂತರ ಗೊತ್ತಾಗಲಿದೆ ಎಂದು ಅಧಿಕಾರಿ ಹೇಳಿದರು. ಮೃತ ಮಹಿಳೆಯ ದೇಹವನ್ನು ಪೋಸ್ಟ್ ಮಾರ್ಟಂಗೆ ತೆಗೆದುಕೊಂಡು ಹೋಗಲಾಗಿದ್ದು, ವರದಿ ಬಂದ ಬಳಿಕ ಅವರ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಅಂತ ಗೊತ್ತಾಗಲಿದೆ ಎಂದು ಸೈದುಲು ಅದಾವತ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೆಂಗಳೂರು: ದಾರಿ ಬಿಡಿ ಎಂದು ಹಾರ್ನ್​ ಮಾಡಿದಕ್ಕೆ ವಿದ್ಯಾರ್ಥಿಗೆ ಥಳಿತ; ಆರೋಪಿಗಳು ಅರೆಸ್ಟ್​