AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮಾಲೀಕರಿಂದ ಕದ್ದು ಮಾಂಸದಂಗಡಿಗೆ ಸಾಗಿಸುತ್ತಿದ್ದ ಟ್ರಕ್​ನಿಂದ ಹಾರಿ ಪ್ರಾಣ ಉಳಿಸಿಕೊಂಡ ನಾಯಿಗಳು

Video: ಮಾಲೀಕರಿಂದ ಕದ್ದು ಮಾಂಸದಂಗಡಿಗೆ ಸಾಗಿಸುತ್ತಿದ್ದ ಟ್ರಕ್​ನಿಂದ ಹಾರಿ ಪ್ರಾಣ ಉಳಿಸಿಕೊಂಡ ನಾಯಿಗಳು

ನಯನಾ ರಾಜೀವ್
|

Updated on: Mar 24, 2026 | 12:12 PM

Share

ಚೀನಾದಲ್ಲಿ ಏಳು ನಾಯಿಗಳು ತಮ್ಮ ಮಾಲೀಕರನ್ನು ಅರಸಿ 17 ಕಿ.ಮೀ ನಡೆದಿರುವ ವಿಡಿಯೋ ವೈರಲ್ ಆಗಿದೆ. ಕೆಲವು ದುಷ್ಟರು ಮಾಲೀಕರಿಂದ ನಾಯಿಗಳನ್ನು ಕದ್ದು, ಅಕ್ರಮವಾಗಿ ಟ್ರಕ್​​ನಲ್ಲಿ ಸಾಗಿಸುತ್ತಿದ್ದರು, ಆದರೆ ಅದೃಷ್ಟವಶಾತ್ ಆ ನಾಯಿಗಳು ಟ್ರಕ್​ನಿಂದ ಕೆಳಗೆ ಹಾರಿ ಪ್ರಾಣ ಉಳಿಸಿಕೊಂಡಿವೆ. ಈ ನಾಯಿಗಳನ್ನು ಅವುಗಳ ಮನೆಗಳಿಂದ ಕದ್ದಿದ್ದು, ನಾಯಿ ಮಾಂಸದ ಅಂಗಡಿಗೆ ಮಾರಾಟ ಮಾಡಲು ಉದ್ದೇಶಿಸಲಾಗಿತ್ತು ಎಂದು ಹೇಳಲಾಗಿದೆ.

ಚೀನಾ, ಮಾರ್ಚ್​ 24: ಚೀನಾದಲ್ಲಿ ಏಳು ನಾಯಿಗಳು ತಮ್ಮ ಮಾಲೀಕರನ್ನು ಅರಸಿ 17 ಕಿ.ಮೀ ನಡೆದಿರುವ ವಿಡಿಯೋ ವೈರಲ್ ಆಗಿದೆ. ಕೆಲವು ದುಷ್ಟರು ಮಾಲೀಕರಿಂದ ನಾಯಿಗಳನ್ನು ಕದ್ದು, ಅಕ್ರಮವಾಗಿ ಟ್ರಕ್​​ನಲ್ಲಿ ಸಾಗಿಸುತ್ತಿದ್ದರು, ಆದರೆ ಅದೃಷ್ಟವಶಾತ್ ಆ ನಾಯಿಗಳು ಟ್ರಕ್​ನಿಂದ ಕೆಳಗೆ ಹಾರಿ ಪ್ರಾಣ ಉಳಿಸಿಕೊಂಡಿವೆ. ಈ ನಾಯಿಗಳನ್ನು ಅವುಗಳ ಮನೆಗಳಿಂದ ಕದ್ದಿದ್ದು, ನಾಯಿ ಮಾಂಸದ ಅಂಗಡಿಗೆ ಮಾರಾಟ ಮಾಡಲು ಉದ್ದೇಶಿಸಲಾಗಿತ್ತು ಎಂದು ಹೇಳಲಾಗಿದೆ.

ಜರ್ಮನ್ ಶೆಫರ್ಡ್, ಗೋಲ್ಡನ್ ರಿಟ್ರೈವರ್ ಮತ್ತು ಕಾರ್ಗಿ ಸೇರಿದಂತೆ ಈ ಗುಂಪಿನ ನಾಯಿಗಳು ಚಾಂಗ್‌ಶುವಾಂಗ್ ಎಕ್ಸ್‌ಪ್ರೆಸ್‌ವೇಯಲ್ಲಿ ಒಟ್ಟಿಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ. ನಾಯಿಗಳು ಎರಡು ದಿನಗಳ ಕಾಲ 17 ಕಿ.ಮೀ.ಗೂ ಹೆಚ್ಚು ನಡೆದಿವೆ. ಮಾರ್ಚ್ 19 ರಂದು ಅವರು ಸುರಕ್ಷಿತವಾಗಿ ತಮ್ಮ ಮನೆಗಳಿಗೆ ಮರಳಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us