AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯ ಬಿಜೆಪಿ ನಿಯೋಗ ಅಮಿತ್ ಶಾ ಭೇಟಿ ಮಾಡಿದ್ಯಾಕೆ? ಗುಟ್ಟು ಬಿಚ್ಚಿಟ್ಟ ವಿಜಯೇಂದ್ರ

ರಾಜ್ಯ ಬಿಜೆಪಿ ನಿಯೋಗ ಅಮಿತ್ ಶಾ ಭೇಟಿ ಮಾಡಿದ್ಯಾಕೆ? ಗುಟ್ಟು ಬಿಚ್ಚಿಟ್ಟ ವಿಜಯೇಂದ್ರ

ರಮೇಶ್ ಬಿ. ಜವಳಗೇರಾ
|

Updated on:Sep 08, 2025 | 10:33 PM

Share

ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ನಿಯೋಗವು ಇಂದು (ಸೆಪ್ಟೆಂಬರ್ 08) ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದೆ. ನವದೆಹಲಿಯ ಕೃಷ್ಣ ಮೆನನ್ ಮಾರ್ಗದಲ್ಲಿರುವ ನಿವಾಸ‌ದಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿ ಧರ್ಮಸ್ಥಳ ಪ್ರಕರಣದ ವರದಿ ಸಲ್ಲಿಸಿದೆ. ರಾಜ್ಯ ಬಿಜೆಪಿ ಬಿಜೆಪಿ ಕೈಗೊಂಡ ಹೋರಾಟ, ಸಮಾವೇಶದ ಬಗ್ಗೆಯೂ ಸಹ ವರದಿ ನೀಡಿದೆ. ಜೊತೆಗೆ ಕೊಪ್ಪಳದಲ್ಲಿ ಯುವಕ ಗವಿಸಿದ್ದಪ್ಪ ಕೊಲೆ ಪ್ರಕರಣ, ಮದ್ದೂರಿನಲ್ಲಿ ಗಣೇಶನ ಮೇಲೆ ಕಲ್ಲುತೂರಾಟ ಸೇರಿದಂತೆ ಸದ್ಯ ರಾಜಕಾರಣದ ಬಗ್ಗೆ ಅಮಿತ್ ಶಾ ಗಮನಕ್ಕೆ ತಂದಿದ್ದಾರೆ.

ನವದೆಹಲಿ, (ಸೆಪ್ಟೆಂಬರ್ 08): ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ  (BY Vijayendra) ನೇತೃತ್ವದ ನಿಯೋಗವು ಇಂದು (ಸೆಪ್ಟೆಂಬರ್ 08) ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರನ್ನು ಭೇಟಿ ಮಾಡಿದೆ. ನವದೆಹಲಿಯ (New Delhi) ಕೃಷ್ಣ ಮೆನನ್ ಮಾರ್ಗದಲ್ಲಿರುವ ನಿವಾಸ‌ದಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿ ಧರ್ಮಸ್ಥಳ ಪ್ರಕರಣದ ವರದಿ ಸಲ್ಲಿಸಿದೆ. ರಾಜ್ಯ ಬಿಜೆಪಿ ಬಿಜೆಪಿ ಕೈಗೊಂಡ ಹೋರಾಟ, ಸಮಾವೇಶದ ಬಗ್ಗೆಯೂ ಸಹ ವರದಿ ನೀಡಿದೆ. ಜೊತೆಗೆ ಕೊಪ್ಪಳದಲ್ಲಿ ಯುವಕ ಗವಿಸಿದ್ದಪ್ಪ ಕೊಲೆ ಪ್ರಕರಣ, ಮದ್ದೂರಿನಲ್ಲಿ ಗಣೇಶನ ಮೇಲೆ ಕಲ್ಲುತೂರಾಟ ಸೇರಿದಂತೆ ಸದ್ಯ ರಾಜಕಾರಣದ ಬಗ್ಗೆ ಅಮಿತ್ ಶಾ ಗಮನಕ್ಕೆ ತಂದಿದ್ದಾರೆ.

ಅಮಿತ್ ಶಾ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ, ರಾಜ್ಯ ಬಿಜೆಪಿ ನಿಯೋಗ ಅಮಿತ್ ಶಾ ಭೇಟಿ ಮಾಡಿದ್ದು, ಹಿಂದೂ ವಿರೋಧಿ ಸರ್ಕಾರದ ಬಗ್ಗೆ ಅವರ ಗಮನಕ್ಕೆ ತರಲಾಗಿದೆ. ಧರ್ಮಸ್ಥಳ , ಕೊಪ್ಪಳದ ಗವಿಸಿದ್ದಪ್ಪ ಕೊಲೆ ಪ್ರಕರಣ ಸೇರಿದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ಚರ್ಚಿಸಿದ್ದೇವೆ. ಹಾಗೇ ಹಿಂದೂಗಳ ಮೇಲೆ ಹಲ್ಲೆ ಕುರಿತು ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

ಕೇಸ್ ವಾಪಸ್ ಪಡೆಯುತ್ತಿರುವ ಬಗ್ಗೆಯೂ ಚರ್ಚಿಸಿದ್ದೇವೆ. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸ್ತಿದೆ. ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿದ್ದೆ. ಪೊಲೀಸರಿಗೆ ಅಧಿಕಾರ ನೀಡದ ಬಗ್ಗೆ ಗಮನಕ್ಕೆ ತಂದಿದ್ದೇವೆ. ಇನ್ನು ಕರ್ನಾಟಕದಲ್ಲಿ ವಿಪಕ್ಷವಾಗಿ ನಮ್ಮ ಕರ್ತವ್ಯ ಮಾಡಿದ್ದು, ಅದರ ಸಂಪೂರ್ಣ ವರದಿಯನ್ನು ಅಮಿತ್ ಶಾ ಅವರಿಗೆ ಸಲ್ಲಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಇನ್ನು ಅಮಿತ್ ಶಾ ಭೇಟಿ ಮಾಡಿದ ವಿಜಯೇಂದ್ರ ನೇತೃತ್ವದ ನಿಯೋಗದಲ್ಲಿ ವಿಪಕ್ಷ ನಾಯಕರಾದ ಅಶೋಕ್, ಛಲವಾದಿ ನಾರಾಯಣಸ್ವಾಮಿ,  ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜಾ, ಎಸ್.ಆರ್.ವಿಶ್ವನಾಥ್​ ಇದ್ದರು.

Published on: Sep 08, 2025 10:33 PM