AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Talent unlimited: ಕುಟುಂಬದಲ್ಲಿ ಘೋರ ದುರಂತಗಳು ಸಂಭವಿಸಿದರೂ ಧೃತಿಗೆಡದ ಇಂದೋರ್ ನ 15ರ ಬಾಲೆಗೆ ಭಾರತದ ಮುಖ್ಯ ನ್ಯಾಯಾಧೀಶೆಯಾಗುವ ಗುರಿ!

Talent unlimited: ಕುಟುಂಬದಲ್ಲಿ ಘೋರ ದುರಂತಗಳು ಸಂಭವಿಸಿದರೂ ಧೃತಿಗೆಡದ ಇಂದೋರ್ ನ 15ರ ಬಾಲೆಗೆ ಭಾರತದ ಮುಖ್ಯ ನ್ಯಾಯಾಧೀಶೆಯಾಗುವ ಗುರಿ!

TV9 Web
| Edited By: ಅರುಣ್​ ಕುಮಾರ್​ ಬೆಳ್ಳಿ|

Updated on: Apr 12, 2023 | 7:57 AM

Share

ತನಿಷ್ಕಾಳ ಪ್ರತಿಭೆ ಇಂದೋರ್ ಸಂಸತ್ ಸದಸ್ಯರಾಗಿರುವ ಶಂಕರ್ ಲಾಲ್ವಾನಿಯವರ ಗಮನಕ್ಕೆ ಬಂದಾಗ ಅವರು ಅಕೆಗೆ ದೇವಿ ಅಹಿಲ್ಯಾಬಾಯಿ ವಿಶ್ವವಿದ್ಯಾಲಯದಲ್ಲಿ ದಾಖಲಾತಿ ನೀಡುವಂತೆ ಶಿಫಾರಸ್ಸು ಮಾಡಿದರು.

ಇಂದೋರ್ (ಮಧ್ಯಪ್ರದೇಶ): ತನಿಷ್ಕಾ ಸುಜಿತ್ (Tanishka Sujit) ಕೇವಲ 15-ವರ್ಷ ವಯಸ್ಸಿನ ಹುಡುಗಿ. ಆದರೆ ಅವಳು ಈ ತಿಂಗಳು ಕೊನೆಗೆ ಮನಶಾಸ್ತ್ರದಲ್ಲಿ ಬಿಎ (ಆನರ್ಸ್) ಪರೀಕ್ಷೆ ಬರೆಯಲಿದ್ದಾಳೆ ಎಂದರೆ ನಂಬುತ್ತೀರಾ? ತನಿಷ್ಕಾ ಮಧ್ಯಪ್ರದೇಶ ಇಂದೋರ್ ನಲ್ಲಿರುವ ದೇವಿ ಅಹಲ್ಯಾಬಾಯಿ ವಿಶ್ವವಿದ್ಯಾಲಯದ (Devi Ahilyabai University) ವಿದ್ಯಾರ್ಥಿನಿಯಾಗಿದ್ದಾಳೆ. ಕೇವಲ 12 ವಯಸ್ಸಿನಲ್ಲಿ 12ನೇ ತರಗತಿ ಪರೀಕ್ಷೆ (12th exam) ಬರೆದ ಅವಳು ಆ ಬೋರ್ಡ್ ಪರೀಕ್ಷೆಯನ್ನು ಪ್ರಥಮ ಶ್ರೇಣಿಯಲ್ಲಿ ಪಾಸಾದಳು. ಗಮನಿಸಬೇಕಾದ ಸಂಗತಿಯೇನೆಂದರೆ, ಪ್ರಚಂಡ ಪ್ರತಿಭೆಯ ತನಿಷ್ಕಾಗೆ ಇದನ್ನೆಲ್ಲ ಸಾಧಿಸುವುದು ಸುಲಭವಾಗಿರಲಿಲ್ಲ. 2020ರಲ್ಲಿ ಕೋವಿಡ್-19 ಪಿಡುಗು ಅವಳ ಕುಟುಂಬದ ಮೇಲೆ ಬರಸಿಡಿಲಿನಂತೆ ಎರಗಿತ್ತು.

‘ಮೊದಲಿಗೆ, ಮೇ 28, 2020ರಂದು ನನ್ನ ತಂದೆ ತೀರಿಕೊಂಡರು, ಬಳಿಕ ಜೂನ್ 13 ರಂದು ತನಿಷ್ಕಾಳ ಅಜ್ಜ ಅಂದರೆ ನನ್ನ ಮಾವ ಮರಣಿಸಿದರು. ಜುಲೈ 2ರಂದು ನನ್ನ ಪತಿ (ತನಿಷ್ಕಾಳ ತಂದೆ) ನಮ್ಮನ್ನಗಲಿದರು. ನನ್ನ ಮಾವ ಮತ್ತು ನನ್ನ ಪತಿ ಸುಜಿತ್ ಚಂದ್ರನ್ ರನ್ನು ಕೋವಿಡ್-19 ಗೆ ಬಲಿ ತೆಗೆದುಕೊಂಡಿತು. ಸಂಕಷ್ಟಗಳ ಸರಮಾಲೆ ನನ್ನ ಕುಟುಂಬವನ್ನು ಸುತ್ತಿಕೊಂಡಿತ್ತು. ಏನನ್ನೂ ಯೋಚಿಸಿದ ಸ್ಥಿತಿಯಲ್ಲಿ ನಾವಿದ್ದೆವು,’ ಎಂದು ತನಿಷ್ಕಾಳ ಅಮ್ಮ ಅನುಭಾ ಸುಜಿತ್ ಹೇಳುತ್ತಾರೆ.

ಇದನ್ನೂ ಓದಿ:  Giorgia Meloni: ಇಟಲಿಯಲ್ಲಿ ಇಂಗ್ಲಿಷ್, ಇತರ ವಿದೇಶಿ ಭಾಷೆಗಳಿಗೆ ಅವಕಾಶ ಇಲ್ಲ, ತಪ್ಪಿದರೆ 82 ಲಕ್ಷ ರೂ. ದಂಡ 

ಕುಟುಂಬದಲ್ಲಿ ಅಂಥ ಘೋರ ದುರಂತ ಸಂಭವಿಸಿದ್ದರೂ ತನಿಷ್ಕಾಳ ಓದಿನ ಮೇಲೆ ಯಾವುದೇ ಪರಿಣಾಮ ಬೀರದ ಹಾಗೆ ಎಚ್ಚರವಹಿಸಿದ್ದಾಗಿ ತನಿಷ್ಕಾಳ ಅಮ್ಮ ಹೇಳುತ್ತಾರೆ. ತನಿಷ್ಕಾಗೆ ಅವಳ ತಂದೆಯೇ ಮನೆಯಲ್ಲಿ ಪಾಠ ಮಾಡುತ್ತಿದ್ದರು, ಅವಳು ಶಾಲೆಗೆ ದಾಖಲಾಗಿರಲಿಲ್ಲ.

ತನಿಷ್ಕಾಳ ಪ್ರತಿಭೆ ಇಂದೋರ್ ಸಂಸತ್ ಸದಸ್ಯರಾಗಿರುವ ಶಂಕರ್ ಲಾಲ್ವಾನಿಯವರ ಗಮನಕ್ಕೆ ಬಂದಾಗ ಅವರು ಅಕೆಗೆ ದೇವಿ ಅಹಿಲ್ಯಾಬಾಯಿ ವಿಶ್ವವಿದ್ಯಾಲಯದಲ್ಲಿ ದಾಖಲಾತಿ ನೀಡುವಂತೆ ಶಿಫಾರಸ್ಸು ಮಾಡಿದರು.

‘ಅವಳು 12 ಬಾಲಕಿಯಾಗಿದ್ದಾಗ ನಾವು ಅವಳೊಂದಿಗೆ ಸಮಾಲೋಚನೆ ನಡೆಸಿ ಅವಳ ಆಸಕ್ತಿ, ಅಭಿರುಚಿ ತಿಳಿಯುವ ಪ್ರಯತ್ನ ಮಾಡಿದೆವು. ಅವಳಿಗೆ ಮನಶಾಸ್ತ್ರದಲ್ಲಿ ಹೆಚ್ಚು ಆಸಕ್ತಿ ಇರೋದು ನಮ್ಮ ಗಮನಕ್ಕೆ ಬಂತು, ಆಗಲೇ ನಾವು ಅವಳಿಗೆ ಮನಶಾಸ್ತ್ರದಲ್ಲಿ ಪದವಿ ವ್ಯಾಸಂಗ ಮಾಡುವ ಸಲಹೆ ನೀಡಿದೆವು. ಪದವಿಯ ನಂತರ ಅವಳು ವಿದೇಶಗಳಲ್ಲೂ ವ್ಯಾಸಂಗ ಮುಂದುವರಿಸಬಹುದಾಗಿದೆ,’ ಎಂದು ದೇವಿ ಅಹಿಲ್ಯಾಬಾಯಿ ವಿಶ್ವವಿದ್ಯಾಲಯದಲ್ಲಿ ಸಾಮಾಜಿಕ ವಿಜ್ಞಾನಗಳ ವಿಭಾಗದ ಹೆಚ್ಓಡಿ ಅಗಿರುವ ಪ್ರೊಫೆಸರ್ ರೇಖಾ ಆಚಾರ್ಯ ಹೇಳುತ್ತಾರೆ.

ಈ ತಿಂಗಳ ಆರಂಭದಲ್ಲಿ ಭೋಪಾಲ್ ನಗರಕ್ಕೆ ಆಗಮಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತನಿಷ್ಕಾ ಮತ್ತು ಅವಳ ತಾಯಿಯನ್ನು ಭೇಟಿಯಾಗಿದ್ದರು. ಪ್ರಧಾನಿಯವರನ್ನು ಭೇಟಿಯಾಗಿದ್ದು ಬಹುದಿನಗಳ ಕನಸೊಂದು ನನಸಾದ ಅನುಭವ ಎಂದು ತನಿಷ್ಕಾ ಸುಜಿತ್ ಹೇಳುತ್ತಾಳೆ.

ಇದನ್ನೂ ಓದಿ:  Almond Oil Benefits: ಬಾದಾಮಿ ಎಣ್ಣೆ ದುಬಾರಿ, ಆದರೆ ಅನೇಕ ಆರೋಗ್ಯ ಪ್ರಯೋಜನಕ್ಕೆ ಒಳ್ಳೆಯದು

‘ನಾನು ಕಾನೂನು ವ್ಯಾಸಂಗ ಮಾಡಿ ಭಾರತದ ಮುಖ್ಯ ನ್ಯಾಯಾಧೀಶೆಯಾಗಬೇಕೆನ್ನುವ ಗುರಿ ಇಟ್ಟುಕೊಂಡಿದ್ದೇನೆ ಎಂದು ಪ್ರಧಾನಿಯವರಿಗೆ ಹೇಳಿದೆ. ಒಮ್ಮೆ ಸುಪ್ರೀಮ್ ಕೋರ್ಟ್ ಗೆ ಹೋಗಿ ಅಲ್ಲಿನ ಕಾರ್ಯಕಲಾಪಗಳು ಹೇಗೆ ನಡೆಯುತ್ತವೆ ಅನ್ನೋದನ್ನು ಖುದ್ದಾಗಿ ವೀಕ್ಷಿಸುವ ಸಲಹೆಯನ್ನು ಅವರು ನೀಡಿದರು. ಅವರು ನನ್ನೊಂದಿಗೆ ಬಹಳ ಆತ್ಮೀಯತೆಯಿಂದ ಮಾತಾಡಿದರು, ಕನಸೊಂದು ನನಸಾದ ಭಾವನೆ ನನ್ನಲ್ಲಿ ಮೂಡಿತ್ತು. ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನಕ್ಕೆ ಅತಿಹೆಚ್ಚು ಮಹತ್ವ ಇರುವುದರಿಂದ ಅದರ ಕಡೆಯೂ ಗಮನ ಹರಿಸುವಂತೆ ಪ್ರಧಾನಿಯವರು ಹೇಳಿದರು,’ ಎಂದು ತನಿಷ್ಕಾ ಸುಜಿತ್ ಹೇಳುತ್ತಾಳೆ.

ಪದವಿ ವ್ಯಾಸಂಗದ ಬಳಿಕ ತನಿಷ್ಕಾ ಯುಎಸ್ ಗೆ ಹೋಗಿ ಅಲ್ಲಿ ಕಾನೂನು ಅಭ್ಯಾಸ ಮಾಡುವ ಗುರಿಯಿಟ್ಟುಕೊಂಡಿದ್ದಾಳೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More