TV9 ಬಿಗ್ ಇಂಪ್ಯಾಕ್ಟ್: ಹಸಿದ ಹೊಟ್ಟೆಗೆ ಸಿಕ್ತು ಅನ್ನ, ಆದಿವಾಸಿಗಳು ಫುಲ್ ಖುಷ್
ಅದೆಷ್ಟೋ ಆದಿವಾಸಿಗಳು ಕರ್ನಾಟಕದಲ್ಲೂ ಸಹ ಬದುಕಿದ್ದು ಸತ್ತಂತೆ ಜೀವನ ಸಾಗಿಸುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಚಾಮರಾಜನಗರದ ಕಾಡಿನಲ್ಲಿ ವಾಸಿಸುತ್ತಿರುವ ಆನೆ ದಿಂಬ ಹಾಡಿಯ ಜನರಿಗೆ ಮೂಲಸೌಲಭ್ಯಗಳು, ರೇಷನ್ ಕಾರ್ಡ್ ಸೇರಿದಂತೆ ಇನ್ನಿತರ ಸರ್ಕಾರದ ಯೋಜನೆಗಳೇ ಸಿಗುತ್ತಿಲ್ಲ. ಕಳೆದ 10 ವರ್ಷಗಳಿಂದ ಹಾಡಿಯ ವಾಸಿಗಳು ರೇಷನ್ ಕಾರ್ಡ್ ಗಾಗಿ ಕಚೇರಿಯಿಂದ ಕಚೇರಿ ಅಲೆದು ರೋಸಿ ಹೋಗಿದ್ದರು. ಆದರೂ ರೇಷನ್ ಕಾರ್ಡ್ ಸಿಕ್ಕಿಲಲ್. ಹೀಗಾಗಿ ಈ ಬಗ್ಗೆ ನಿಮ್ಮ ಟಿವಿ9, ಆದಿವಾಸಿ ಸೋಲಿಗರು ಶೀರ್ಷಿಕೆ ಅಡಿ ಸುದ್ದಿ ಬಿತ್ತರಿಸಿತ್ತು. ಈ ಸುದ್ದಿ ಬೆನ್ನಲ್ಲೇ ಆದಿವಾಸಿಗಳ ಹೊಟ್ಟೆಗೆ ಅನ್ನ ಸಿಕ್ಕಿದೆ.
ಮುಖ್ಯಾಂಶಗಳು
- TV9 ಬಿಗ್ ಇಂಪ್ಯಾಕ್ಟ್: ಹಸಿದಿದ್ದ ಆದಿವಾಸಿಗಳ ಹೊಟ್ಟೆಗೆ ಸಿಕ್ತು ಅನ್ನ
- 10 ವರ್ಷಗಳಿಂದ ಅಲೆದಿದ್ದರೂ ಸಿಕ್ಕಿರಲಿಲ್ಲ ಹಾಡಿಯ ವಾಸಿಗಳಿಗೆ ರೇಷನ್ ಕಾರ್ಡ್
- ಈ ಬಗ್ಗೆ ಟಿವಿ9 ವರದಿ ಬಳಿಕೆ ಎಚ್ಚೆತ್ತುಕೊಂಡ ಚಾಮರಾನಗರ ಜಿಲ್ಲಾಡಳಿತ
ಚಾಮರಾಜನಗರ, (ಜೂನ್ 24): ಅದೆಷ್ಟೋ ಆದಿವಾಸಿಗಳು ಕರ್ನಾಟಕದಲ್ಲೂ ಸಹ ಬದುಕಿದ್ದು ಸತ್ತಂತೆ ಜೀವನ ಸಾಗಿಸುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಚಾಮರಾಜನಗರದ ಕಾಡಿನಲ್ಲಿ ವಾಸಿಸುತ್ತಿರುವ ಆನೆ ದಿಂಬ ಹಾಡಿಯ ಜನರಿಗೆ ಮೂಲಸೌಲಭ್ಯಗಳು, ರೇಷನ್ ಕಾರ್ಡ್ ಸೇರಿದಂತೆ ಇನ್ನಿತರ ಸರ್ಕಾರದ ಯೋಜನೆಗಳೇ ಸಿಗುತ್ತಿಲ್ಲ. ಕಳೆದ 10 ವರ್ಷಗಳಿಂದ ಹಾಡಿಯ ವಾಸಿಗಳು ರೇಷನ್ ಕಾರ್ಡ್ ಗಾಗಿ ಕಚೇರಿಯಿಂದ ಕಚೇರಿ ಅಲೆದು ರೋಸಿ ಹೋಗಿದ್ದರು. ಆದರೂ ರೇಷನ್ ಕಾರ್ಡ್ ಸಿಕ್ಕಿಲಲ್. ಹೀಗಾಗಿ ಈ ಬಗ್ಗೆ ನಿಮ್ಮ ಟಿವಿ9, ಆದಿವಾಸಿ ಸೋಲಿಗರು ಶೀರ್ಷಿಕೆ ಅಡಿ ಸುದ್ದಿ ಬಿತ್ತರಿಸಿತ್ತು. ಈ ಸುದ್ದಿ ಬೆನ್ನಲ್ಲೇ ಆದಿವಾಸಿಗಳ ಹೊಟ್ಟೆಗೆ ಅನ್ನ ಸಿಕ್ಕಿದೆ. ಹೌದು…ಟಿವಿ9 ವರದಿ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವರದಿ ಕೇಳಿದ್ದಾರೆ. ಅಲ್ಲದೇ ಅಧಿಕಾರಿ ವರ್ಗ, ಆನೆದಿಂಬ ಹಾಡಿಗೆ ದೌಡಾಯಿಸಿದ್ದು, ರೇಷನ್ ಕಾರ್ಡ್ ನೀಡದಿದ್ದಕ್ಕೆ ಟ್ರೈಬಲ್ ಆಫೀಸರ್ ಬಿಂದ್ಯಾಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ರೇಷನ್ ಕಾರ್ಡ್ ನೀಡುವ ಭರವಸೆ ನೀಡಲಾಗಿದ್ದು, ಸದ್ಯಕ್ಕೆ ಜಿಲ್ಲಾಡಳಿತ, 10 ಕುಟುಂಬಕ್ಕೆ ತಾತ್ಕಾಲಿಕ ದಿನಸಿ ವ್ಯವಸ್ಥೆ ಮಾಡಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

