ಚಂದ್ರನ ಒಂದು ಭಾಗದಲ್ಲಿ ನೀರಿನ ಅಂಶವಿರುವುದನ್ನು ಪತ್ತೆ ಮಾಡಿರುವ ಚಂದ್ರಯಾನ-2 ಮಿಶನ್ ನ ಆರ್ಬಿಟರ್

ಕರೆಂಟ್ ಸೈನ್ಸ್ ನಿಯತಕಾಲಿಕದಲ್ಲಿ ಪ್ರಕಟವಾದ ಸಂಶೋಧನಾ ಲೇಖನಗಳು, ಎಲ್ಲಾ ಅಕ್ಷಾಂಶಗಳಲ್ಲಿ ಮತ್ತು ಮೇಲ್ಮೈ ಪ್ರಕಾರಗಳಲ್ಲಿ ಹೈಡ್ರೇಶನ್ ಹೀರಿಕೊಳ್ಳುವಿಕೆಯನ್ನು ವಿವಿಧ ಹಂತಗಳಲ್ಲಿ ಗಮನಿಸಲಾಗಿದೆ ಎಂದು ಹೇಳುತ್ತವೆ.

ಕಳೆದ ವರ್ಷ ಚಂದ್ರಯಾನ-2 ಮಿಶನ್ ರೋವರ್ ವಿಫಲಗೊಂಡಿದ್ದು ನಿಮಗೆ ನೆನಪಿರಬಹುದು. ಆದರೆ ಅದರ ಆರ್ಬಿಟರ್ ಚಂದ್ರನ ಪರಿಧಿ ಸುತ್ತ ತಿರುಗುವುದನ್ನು ನಿಲ್ಲಿಸದೆ ತಾನು ಪತ್ತೆಹಚ್ಚಿರುವ ಮತ್ತು ಹಚ್ಚುತ್ತಿರುವ ಹೊಸ ಆಯಾಮಗಳ ಬಗ್ಗೆ ಮಾಹಿತಿಯನ್ನು ಸತತವಾಗಿ ರವಾನಿಸುತ್ತಿದೆ. ಈಗ ಅದರ ಮೂಲಕ ಪತ್ತೆಯಾಗಿರುವ ಅಂಶವೆಂದರೆ ಚಂದ್ರನ ಒಂದು ಭಾಗದಲ್ಲಿ ನೀರಿದೆ! ಚಂದ್ರನ ಮೇಲ್ಮೈಯಲ್ಲಿ ಅದು ಹೈಡ್ರಾಕ್ಸಿಲ್ ಮತ್ತು ನೀರಿನ ಕಣಗಳನ್ನು ಪತ್ತೆ ಮಾಡಿದೆ.
ಉಪಗ್ರಹದ ಖನಿಜ ಸಂಯೋಜನೆಯನ್ನು ಅರ್ಥಮಾಡಿಕೊಳ್ಳಲು ಚಂದ್ರನ ವಿದ್ಯುತ್ಕಾಂತೀಯ ವರ್ಣಪಟಲದಿಂದ ಮಾಹಿತಿಯನ್ನು ಸಂಗ್ರಹಿಸುವ ಸಾಧನವಾಗಿರುವ ಚಂದ್ರಯಾನ -2 ಆರ್ಬಿಟರ್ ನ ಇಮೇಜಿಂಗ್ ಇನ್ಫ್ರಾರೆಡ್ ಸ್ಪೆಕ್ಟ್ರೋಮೀಟರ್ (ಐಐಆರ್ಎಸ್) ಕಲೆ ಹಾಕಿದ ಡಾಟಾವನ್ನು ಸಂಶೋಧಕರು ಬಳಸಿದರು. ಅವರು ಜಲಸಂಚಯನಕ್ಕಾಗಿ ಚಂದ್ರಯಾನ -2 ಐಐಆರ್‌ಎಸ್ ಸೆನ್ಸರ್‌ನಲ್ಲಿನ ಮೂರು ಪಟ್ಟಿಗಳಿಂದ ಡೇಟಾವನ್ನು ವಿಶ್ಲೇಷಿಸಿದರು. ಇದು ‘ಒಎಚ್ (ಹೈಡ್ರಾಕ್ಸಿಲ್) ಮತ್ತು ಎಚ್ 2 ಒ (ನೀರು) ಅಂಶಗಳನ್ನು ಯಾವುದೇ ಸಂದೇಹವಿಲ್ಲದೆ ಪತ್ತೆಹಚ್ಚಲು ಕಾರಣವಾಯಿತು’ ಎನ್ನಲಾಗಿದೆ.

ಕರೆಂಟ್ ಸೈನ್ಸ್ ನಿಯತಕಾಲಿಕದಲ್ಲಿ ಪ್ರಕಟವಾದ ಸಂಶೋಧನಾ ಲೇಖನಗಳು, ಎಲ್ಲಾ ಅಕ್ಷಾಂಶಗಳಲ್ಲಿ ಮತ್ತು ಮೇಲ್ಮೈ ಪ್ರಕಾರಗಳಲ್ಲಿ ಹೈಡ್ರೇಶನ್ ಹೀರಿಕೊಳ್ಳುವಿಕೆಯನ್ನು ವಿವಿಧ ಹಂತಗಳಲ್ಲಿ ಗಮನಿಸಲಾಗಿದೆ ಎಂದು ಹೇಳುತ್ತವೆ. ಐಐಆರ್ಎಸ್ ನಿಂದ ಆರಂಭಿಕ ದತ್ತಾಂಶ ವಿಶ್ಲೇಷಣೆಯು ಚಂದ್ರನ ಮೇಲೆ 29 ಡಿಗ್ರಿ ಉತ್ತರ ಮತ್ತು 62 ಡಿಗ್ರಿ ಉತ್ತರ ಅಕ್ಷಾಂಶದ ನಡುವೆ ವ್ಯಾಪಕವಾದ ಚಂದ್ರನ ಜಲಸಂಚಯನ ಮತ್ತು OH ಮತ್ತು H2O ಅಂಶವನ್ನು ಸ್ಪಷ್ಟವಾಗಿ ಪತ್ತೆಹಚ್ಚಿರುವುದನ್ನು ನಿಖರವಾಗಿ ತೋರಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಇದನ್ನೂ ಓದಿ:  ನಾಯಿಯ ನಿಯತ್ತು ಎಂಬ ಮಾತಿಗೆ ಸಾಕ್ಷಿ ಈ ವಿಡಿಯೋ; ಮುದ್ದಾದ ಶ್ವಾನ ತನ್ನ ಮನೆ ಮಕ್ಕಳ ಕಡೆಗೆ ತೋರಿಸುವ ಕಾಳಜಿ ಹೇಗಿದೆ ನೋಡಿ

Click on your DTH Provider to Add TV9 Kannada