ಅಮೇರಿಕಾದ ಫೋರ್ಡ್ ಕಂಪನಿ ಭಾರತದಲ್ಲಿ ರೂ.15 ಸಾವಿರ ಕೋಟಿ ನಷ್ಟ ಅನುಭವಿಸಿ ತವರಿಗೆ ಮರಳಲು ನಿರ್ಧರಿಸಿದೆ

ಅಮೇರಿಕಾದ ಫೋರ್ಡ್ ಕಂಪನಿ ಭಾರತದಲ್ಲಿ ರೂ.15 ಸಾವಿರ ಕೋಟಿ ನಷ್ಟ ಅನುಭವಿಸಿ ತವರಿಗೆ ಮರಳಲು ನಿರ್ಧರಿಸಿದೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 11, 2021 | 4:24 PM

ಲಭ್ಯವಿರುವ ಮೂಲಗಳ ಪ್ರಕಾರ ಕಳೆದೊಂದು ದಶಕದ ಆವಧಿಯಲ್ಲಿ ಫೋರ್ಡ್ ಕಂಪನಿಯು ಭಾರತದಲ್ಲಿನ ವೆಂಚರ್ ನಿಂದ ಸುಮಾರು ರೂ. 15,000 ಕೋಟಿಗಳ ಹಾನಿಯನ್ನು ಅನುಭವಿಸಿದೆ.

ಅಮೇರಿಕಾದ ಫೋರ್ಡ್ ಮೋಟಾರ್ ಕಂಪನಿಯು ಭಾರತದಲ್ಲಿರುವ ತನ್ನ ಉತ್ಪಾದನಾ ಘಟಕಗಳನ್ನು ಮುಚ್ಚುವ ನಿರ್ಧಾರ ತೆಗೆದುಕೊಂಡಿದ್ದು ಸದರಿ ಘಟಕಗಳಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ನೌಕರರ ಭವಿಷ್ಯ ಡೋಲಾಯಮಾನ ಸ್ಥಿತಿಯಲ್ಲಿದೆ. ಕಾರು ಉತ್ಪಾದನೆಯನ್ನು ಮಾತ್ರ ನಿಲ್ಲಿಸಿ ತನ್ನ ಫೋರ್ಡ್ ಬಿಸಿನೆಸ್ ಸಲ್ಯೂಶನ್ಸ್ ಸಂಸ್ಥೆಯನ್ನು ಮುಂದುವರಿಸುವುದಾಗಿ ಕಂಪನಿ ಹೇಳಿದೆ. ಉತ್ಪಾದನಾ ಘಟಕಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಈ ಸಂಸ್ಥೆಯಲ್ಲಿ ಕೆಲಸಕ್ಕೆ ತೆಗೆದುಕೊಳ್ಳುವುದಾಗಿಯೂ ಕಂಪನಿಯ ಮಾಲೀಕರು ಹೇಳಿದ್ದಾರೆ. ಟೆಕ್ನಿಕಲ್ ಹಿನ್ನೆಲೆಯ ನೌಕರರನ್ನು ತನ್ನ ಬಿಸಿನೆಸ್ ಸಲ್ಯೂಶನ್ಸ್ ಸಂಸ್ಥೆಯಲ್ಲಿ ಯಾವ ಬಗೆಯ ಕೆಲಸ ಮಾಡುವುದಕ್ಕಾಗುತ್ತೆ ಎನ್ನುವ ಗೊಂದಲವೂ ಇದೆ.

ನಮಗೆ ಲಭ್ಯವಿರುವ ಮೂಲಗಳ ಪ್ರಕಾರ ಕಳೆದೊಂದು ದಶಕದ ಆವಧಿಯಲ್ಲಿ ಫೋರ್ಡ್ ಕಂಪನಿಯು ಭಾರತದಲ್ಲಿನ ವೆಂಚರ್ ನಿಂದ ಸುಮಾರು ರೂ. 15,000 ಕೋಟಿಗಳ ಹಾನಿಯನ್ನು ಅನುಭವಿಸಿದೆ.

ಫೋರ್ಡ್ ಸಂಸ್ಥೆಯು ಬಿಡುಗಡೆ ಮಾಡಿರುವ ಹೇಳಿಕೆ ಪ್ರಕಾರ, ಕಂಪನಿಯು ಭಾರತದಲ್ಲಿ ಕಾರು ಉತ್ಪಾದಿಸುವುದನ್ನು ಕೂಡಲೇ ಸ್ಥಗಿತಗೊಳಿಸಲಿದೆ. ಸನಂದ್ ನಲ್ಲಿ ಕಾರು ಅಸೆಂಬ್ಲಿ ಘಟಕದಲ್ಲಿ ಈ ವರ್ಷದ ಅಂತ್ಯದವರೆಗೆ ಕೆಲಸ ನಡೆಯಲಿದೆ ಮತ್ತು ಚೆನೈನಲ್ಲಿರುವ ವಾಹನ ಹಾಗೂ ಎಂಜಿನ್ ಉತ್ಪಾದನಾ ಪ್ಲಾಂಟ್ ಮುಂದಿನ ವರ್ಚ ಮಧ್ಯಭಾಗದವರೆಗೆ ಕಾರ್ಯ ನಿರ್ವಹಿಸಲಿದೆ.

ಅದರರ್ಥ ಕಂಪನಿಯು ಈಗಾಗಲೇ ತಯಾರಾಗಿರುವ ಮತ್ತು ತಯಾರಿಕೆ ಹಂತದಲ್ಲಿರುವ ಕಾರಗಳನ್ನು ಡೀಲರ್ಗಳಿಗೆ ರವಾನಿಸಿದ ನಂತರ ಹೊಸ ಕಾರುಗಳನ್ನು ತಯಾರಿಸುವುದಿಲ್ಲ. ಆದರೆ ಕಾರುಗಳ ಸರ್ವಿಸಿಂಗ್ ಬಗ್ಗೆ ಕಂಪನಿಯು ಏನನ್ನೂ ಹೇಳಿಲ್ಲ. ನಮಗೆಲ್ಲ ಗೊತ್ತಿರುವ ಹಾಗೆ, ಎಲ್ಲ ವಾಹನ ತಯಾರಕಾ ಕಂಪನಿಗಳು ತಮ್ಮ ಸರ್ವಿಸಿಂಗ್ ಕೇಂದ್ರಗಳನ್ನು ಹೊಂದಿರುತ್ತವೆ. ಕಂಪನಿಯೇ ಮುಚ್ಚಿಹೋದ ನಂತರ ಈ ಸೆಂಟರ್ ಗಳನ್ನು ಯಾರು ನಡೆಸಬೇಕು? ಬೇರೆಯವರು ಅದಕ್ಕೆ ಮುಂದಾದರೂ ಬಿಡಿಭಾಗಗಳನ್ನು ಅಮೇರಿಕದಿಂದ ತರಿಸಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ:  ಹಾಸನದಲ್ಲಿ ಗಣೇಶ ವಿಸರ್ಜನೆ ವೇಳೆ ಪೊಲೀಸರನ್ನೇ ತಳ್ಳಾಡಿದ ಯುವಕರ ಗುಂಪು; ವಿಡಿಯೋ ವೈರಲ್