ಬೀದರ ನರಸಿಂಹ ಝರಣಿ ದೇವಾಲಯ ತಲುಪುವುದು ಸುಲಭವಲ್ಲ ಆದರೆ ತಲುಪಿದ ನಂತರ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ
ಗಮನಾರ್ಹ ಸಂಗತಿಯೆಂದರೆ ಈ ನೀರಿನಲ್ಲಿ ಗಂಧಕಾಂಶ ಇರುವುದರಿಂದ ಭಕ್ತರಲ್ಲಿ ಯಾರಿಗಾದರೂ ಚರ್ಮ ರೋಗಗಳಿದ್ದರೆ ಅವು ವಾಸಿಯಾಗುತ್ತವಂತೆ. ಹಾಗೆಯೇ, ನೀರು ಎಷ್ಟೇ ತಣ್ಣಗಿದ್ದರೂ ಅದರಲ್ಲಿ ನಡೆದು ಹೋಗುವವರಿಗೆ ಶೀತ ಬಾಧಿಸುವುದಿಲ್ಲ.
ಬೀದರ್ ನಗರದ ಹೊರಭಾಗದಲ್ಲಿರುವ ನರಸಿಂಹ ಝರಣಿ ದೇವಾಲಯಕ್ಕೆ ಭೇಟಿ ನೀಡಿ ತಮ್ಮ ವಿವಿಧ ಬೇಡಿಕೆಗಳನ್ನು ನರಸಿಂಹನ ಸನ್ನಿಧಿಯಲ್ಲಿ ಅರುಹಿಕೊಂಡು ಕೃತಾರ್ಥರಾಗುವವರ ಭಕ್ತರ ಸಂಖ್ಯೆ ಅಪಾರ. ಪೌರಾಣಿಕ ಐತಿಹ್ಯ ಹೊಂದಿರುವ ಈ ದೇವಾಲಯ ಉತ್ತರ ಕರ್ನಾಟಕ ಪ್ರಸಿದ್ಧ ಗುಡಿಗಳಲ್ಲಿ ಒಂದೆನಿಸಿಕೊಂಡಿದೆ. ಆದರೆ ವಯಸ್ಕರು, ಮಹಿಳೆಯರು ಮತ್ತು ಮಕ್ಕಳು ಈ ದೇವಾಲಯಕ್ಕೆ ಭೇಟಿ ನೀಡಿ ನರಸಿಂಹನ ದರ್ಶನ ಪಡೆಯುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಇದೊಂದು ಗುಹಾಂತರ ದೇವಾಲಯ. ದೇವಸ್ಥಾನವನ್ನು ತಲುಪಬೇಕಾದರೆ, ಸುಮಾರು 300 ಮೀಟರ್ಗಳಷ್ಟು ಅಂತರವನ್ನು ಎದೆಮಟ್ಟದ ನೀರಿನಲ್ಲಿ ನಡೆಯಬೇಕು. ಗುಹೆಯಂಥ ಪ್ರದೇಶವಾಗಿರುವುದರಿಂದ ನಡೆದು ಹೋಗುವಾಗ ಬೆಳಕಿನ ಅಭಾವ ಎದುರಾಗುತ್ತದೆ, ಮಬ್ಬು ಬೆಳಕಿನಲ್ಲೇ ನಡೆದು ಹೋಗಬೇಕು. ಹಾಗಾಗಿ ನರಸಿಂಹನ ದರ್ಶನ ಪಡೆಯಲಿಚ್ಛಿಸುವವವರು ಮಾನಸಿಕ ತಯಾರಿ ಮಾಡಿಕೊಂಡಿರಬೇಕು.
ದೇವಸ್ಥಾನ ತಲುಪುವಷ್ಟರಲ್ಲಿ ಬಟ್ಟೆಗಳು ನೆನೆದು ಹೋಗುವುದರಿಂದ ಬೇರೆ ಬಟ್ಟೆಗಳನ್ನು ಜೊತೆಗೆ ತೆಗೆದುಕೊಂಡು ಹೋಗಬೇಕು. ಆದರೆ ದೇವಾಸ್ಥಾನ ಕಮಿಟಿಯುವರು ಗುಹೆ ಪ್ರವೇಶಿಸಲು ಹೆದರುವವರಿಗೆ ಹೊರ ಭಾಗದಲ್ಲಿ ಪೂಜೆ ಮತ್ತು ಮಂಗಳಾರತಿಯ ವ್ಯವಸ್ಥೆ ಮಾಡಿದ್ದಾರೆ.
ಒಂದು ಗಮನಾರ್ಹ ಸಂಗತಿಯೆಂದರೆ ಈ ನೀರಿನಲ್ಲಿ ಗಂಧಕಾಂಶ ಇರುವುದರಿಂದ ಭಕ್ತರಲ್ಲಿ ಯಾರಿಗಾದರೂ ಚರ್ಮ ರೋಗಗಳಿದ್ದರೆ ಅವು ವಾಸಿಯಾಗುತ್ತವಂತೆ. ಹಾಗೆಯೇ, ನೀರು ಎಷ್ಟೇ ತಣ್ಣಗಿದ್ದರೂ ಅದರಲ್ಲಿ ನಡೆದು ಹೋಗುವವರಿಗೆ ಶೀತ ಬಾಧಿಸುವುದಿಲ್ಲ.
ದೇವಸ್ಥಾನಕ್ಕಿರುವ ಪೌರಾಣಿಕ ಹಿನ್ನೆಲೆಯನ್ನು ಗಮನಿಸುವುದಾದರೆ ಹಿರಣ್ಯಕಶಪುವಿನ ವಧೆಯ ಬಳಿಕ ನರಸಿಂಹನು ಶಿವ ಭಕ್ತನಾಗಿದ್ದರೂ ಅಸುರನಾಗಿದ್ದ ಜಲಾಸುರನ ವಧೆ ಮಾಡಲು ಬರುತ್ತಾನೆ. ಯುದ್ಧದ ಬಳಿಕ ಜಲಾಸುರ ಸೋಲೊಪ್ಪಿಕೊಂಡು ಸಾವನ್ನಪ್ಪುವ ಮೊದಲು ನರಸಿಂಹನ ಕಾಲು ಹಿಡಿದು ಇಲ್ಲಿಯೇ ವಾಸಮಾಡಿ ಬಂದ ಭಕ್ತರಿಗೆ ಆಶಿರ್ವಾದ ಮಾಡುವಂತೆ ವರ ಕೇಳಿ ಕೊಳ್ಳುತ್ತಾ ನರಸಿಂಹನ ಪಾದದಿಂದ ನೀರಾಗಿ ಹರಿಯಲು ಶುರುಮಾಡುತ್ತಾನೆ.
ಅವನಿಗೆ ಕೊಟ್ಟ ಮಾತಿನಂತೆ ದೇವರು ಇಲ್ಲಿನ ಗುಹೆಯೊಳಗೆ ಐಕ್ಯವಾದರೆಂದು ಪ್ರತೀತಿ. ಹಾಗಾಗೇ, ಗುಹೆಯಲ್ಲಿ ಸದಾ ನೀರು ಹರಿಯುತ್ತಿರುತ್ತದೆ ಎಂದು ಹೇಳುತ್ತಾರೆ.
ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ಸಪ್ನಾ ಸಾವಿನ ವದಂತಿ ಬಳಿಕ ವಿಡಿಯೋ ವೈರಲ್; RIP ಎಂದವರೆಲ್ಲ ಈಗ ಗಪ್ಚುಪ್
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

