ಚೆಸ್ ಗ್ರ್ಯಾಂಡ್​ಮಾಸ್ಟರ್ ವಿ ಆನಂದ್ ಎದುರು ರಾಜಕೀಯ ಚದುರಂಗದಾಟದ ಮಾಸ್ಟರ್ ಸಿದ್ದರಾಮಯ್ಯ ಆಟ ನಡೆಯಲಿಲ್ಲ!

|

Updated on: Jan 18, 2024 | 2:02 PM

ಆಯೋಜಕರು ನೀಡಿರುವ ಮಾಹಿತಿ ಪ್ರಕಾರ, ಜನವರಿ 26ರವರೆಗೆ ನಡೆಯಲಿರುವ ಟೂರ್ನಮೆಂಟ್ ನಲ್ಲಿ 50 ಗ್ರ್ಯಾಂಡ್ ಮಾಸ್ಟರ್ ಗಳು ಸೇರಿದಂತೆ 18 ದೇಶಗಳ ಸುಮಾರು 1,500 ಆಟಗಾರರು ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಬಿ ನಾಗೇಂದ್ರ ಹಾಜರಿದ್ದರು

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (Siddaramaiah) ರಾಜಕೀಯ ಚದುರಂಗದಾಟ ಚೆನ್ನಾಗಿ ಗೊತ್ತು, ಆದರೆ ಅಸಲಿ ಚದುರಂಗದಾಟ? ಅವರಿಗೆ ಗೊತ್ತಿಲ್ಲ ಅಂತ ಐದು ಬಾರಿ ವಿಶ್ವ ಚೆಸ್ ಚಾಂಪಿಯನ್ ಶಿಪ್ ಗೆದ್ದಿರುವ ಮತ್ತು ಭಾರತದ ಮೊಟ್ಟಮೊದಲ ಗ್ರ್ಯಾಂಡ್ ಮಾಸ್ಟರ್ (grandmaster) ವಿಶ್ವನಾಥನ್ ಅನಂದ್ (Viswanathan Anand) ಅವರಿಗೆ ಚೆನ್ನಾಗಿ ಗೊತ್ತು. ಚೆಸ್ ಬೋರ್ಡ್ ಮುಂದೆ ಮುಖ್ಯಮಂತ್ರಿ ಇವತ್ತು ಮೊದಲ ಬಾರಿಗೆ ಕುಳಿತಿರಬಹುದು ಅನಿಸುತ್ತೆ, ಅವರಿಗೆ ನಡೆಗಳು ಗೊತ್ತಿರಲಿಲ್ಲ! ಅವರ ರಾಜಕೀಯ ಕಾರ್ಯದರ್ಶಿ ಕೆ ಗೋವಿಂದರಾಜ್ ಮತ್ತು ಖುದ್ದು ಆನಂದ್ ನಡೆ ಹೇಳಿಕೊಟ್ಟರು. ವಿಷಯವೇನೆಂದರೆ, ನಗರದ ಕಂಠೀರವ ಕ್ರೀಡಾಂಗಣದಲ್ಲಿ ಇಂದಿನಿಂದ ಪ್ರಥಮ ಬೆಂಗಳೂರು ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಮುಕ್ತ ಚೆಸ್ ಪಂದ್ಯಾವಳಿ ಆರಂಭವಾಗಿದ್ದು ಟೂರ್ನಿ ಉದ್ಘಾಟಿಸಿದ ಸಿದ್ದರಾಮಯ್ಯ ಒಂದೆರಡು ನಿಮಿಷ ವಿ ಆನಂದ್ ಮುಂದೆ ಕೂತರು. ಆಯೋಜಕರು ನೀಡಿರುವ ಮಾಹಿತಿ ಪ್ರಕಾರ, ಜನವರಿ 26ರವರೆಗೆ ನಡೆಯಲಿರುವ ಟೂರ್ನಮೆಂಟ್ ನಲ್ಲಿ 50 ಗ್ರ್ಯಾಂಡ್ ಮಾಸ್ಟರ್ ಗಳು ಸೇರಿದಂತೆ 18 ದೇಶಗಳ ಸುಮಾರು 1,500 ಆಟಗಾರರು ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಬಿ ನಾಗೇಂದ್ರ ಹಾಜರಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ