AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೆನ್ಷನ್ ಹಣಕ್ಕಾಗಿ 90 ವರ್ಷದ ಅತ್ತೆಯನ್ನು ಎತ್ತಿಕೊಂಡು 9 ಕಿ.ಮೀ ನಡೆದ ಬುಡಕಟ್ಟು ಮಹಿಳೆ

ಪೆನ್ಷನ್ ಹಣಕ್ಕಾಗಿ 90 ವರ್ಷದ ಅತ್ತೆಯನ್ನು ಎತ್ತಿಕೊಂಡು 9 ಕಿ.ಮೀ ನಡೆದ ಬುಡಕಟ್ಟು ಮಹಿಳೆ

ಸುಷ್ಮಾ ಚಕ್ರೆ
|

Updated on: May 24, 2026 | 3:47 PM

Share

ಛತ್ತೀಸ್‌ಗಢದ ಮಹಿಳೆಯೊಬ್ಬರು ಪಿಂಚಣಿಗಾಗಿ 90 ವರ್ಷದ ಅತ್ತೆಯನ್ನು ಕಾಡಿನಲ್ಲಿ 9 ಕಿ.ಮೀ. ಹೊತ್ತುಕೊಂಡು ಹೋಗಿದ್ದಾರೆ. ಸುಖ್ಮಾನಿಯಾ ಬಾಯಿ ಎಂಬ ಮಹಿಳೆ ಬ್ಯಾಂಕಿನಿಂದ ಪಿಂಚಣಿ ಹಣ ಪಡೆಯಲು ತನ್ನ ಅತ್ತೆಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಸುಮಾರು 9 ಕಿಲೋಮೀಟರ್ ನಡೆದಿದ್ದಾರೆ. ಆಕೆ ಇದೇ ರೀತಿ ಕೆಲವು ತಿಂಗಳಿನಿಂದ ತನ್ನ ಅತ್ತೆಯನ್ನು ಎತ್ತಿಕೊಂಡು ಬ್ಯಾಂಕ್​ಗೆ ನಡೆಯುತ್ತಿದ್ದಾರೆ. ಪಿಂಚಣಿ ನಿಯಮಗಳ ಪ್ರಕಾರ ಬ್ಯಾಂಕ್ ಫಲಾನುಭವಿಗೆ ಪಿಂಚಣಿ ಪಾವತಿಸುವ ಮೊದಲು ಫಲಾನುಭವಿಗಳು ಗುರುತಿನ ಪರಿಶೀಲನೆಗಾಗಿ ಬ್ಯಾಂಕಿನಲ್ಲಿ ದೈಹಿಕವಾಗಿ ಹಾಜರಿರಬೇಕು. 

ನವದೆಹಲಿ, ಮೇ 24: ಛತ್ತೀಸ್‌ಗಢದಲ್ಲಿ ಹೃದಯವಿದ್ರಾವಕ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಈ ವಿಡಿಯೋ ಹಳ್ಳಿಗಳ ಮೂಲಸೌಕರ್ಯಗಳ ಬಗ್ಗೆ ದೊಡ್ಡ ಪ್ರಶ್ನೆಯನ್ನು ಎತ್ತಿದೆ. ಮಹಿಳೆಯೊಬ್ಬರು ತಮ್ಮ 90 ವರ್ಷದ ಅತ್ತೆಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಕಾಡಿನ ಹಾದಿಯಲ್ಲಿ 9 ಕಿ.ಮೀ ದೂರ ಕಾಡಿನಲ್ಲಿ ನಡೆದಿದ್ದಾರೆ. ಇದು ಹಳೆಯ ವಿಕ್ರಮ-ಬೇತಾಳದ ಕತೆಗಳನ್ನು ಹೋಲುತ್ತದೆ.

ಸುರ್ಗುಜಾ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದ್ದು, ಸುಖ್ಮಾನಿಯಾ ಬಾಯಿ ಎಂಬ ಮಹಿಳೆ ಬ್ಯಾಂಕಿನಿಂದ ಪಿಂಚಣಿ ಹಣ ಪಡೆಯಲು ತನ್ನ ಅತ್ತೆಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಸುಮಾರು 9 ಕಿಲೋಮೀಟರ್ ನಡೆದಿದ್ದಾರೆ. ಆಕೆ ಇದೇ ರೀತಿ ಕೆಲವು ತಿಂಗಳಿನಿಂದ ತನ್ನ ಅತ್ತೆಯನ್ನು ಎತ್ತಿಕೊಂಡು ಬ್ಯಾಂಕ್​ಗೆ ನಡೆಯುತ್ತಿದ್ದಾರೆ. ಪಿಂಚಣಿ ನಿಯಮಗಳ ಪ್ರಕಾರ ಬ್ಯಾಂಕ್ ಫಲಾನುಭವಿಗೆ ಪಿಂಚಣಿ ಪಾವತಿಸುವ ಮೊದಲು ಫಲಾನುಭವಿಗಳು ಗುರುತಿನ ಪರಿಶೀಲನೆಗಾಗಿ ಬ್ಯಾಂಕಿನಲ್ಲಿ ದೈಹಿಕವಾಗಿ ಹಾಜರಿರಬೇಕು. ಆದರೆ, ಸುಖ್ಮಾನಿಯಾ ಅವರ ಅತ್ತೆಗೆ ಬೆಟ್ಟ-ಗುಡ್ಡಗಳನ್ನು ಹತ್ತಿ ನಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರು ಆಕೆಯನ್ನು ಎತ್ತಿಕೊಂಡು ಕಾಡಿನಲ್ಲಿ ನಡೆದು ಹೋಗುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More