AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಂಗ್ಲಾದೇಶ: ವೈರಲ್ ಆಗಿರುವ ‘ಡೊನಾಲ್ಡ್​ ಟ್ರಂಪ್’ ಎಮ್ಮೆಯನ್ನು ಬಲಿಕೊಡಲು ಮುಂದಾದ ಮಾಲೀಕ

ಬಾಂಗ್ಲಾದೇಶದಲ್ಲಿ 'ಡೊನಾಲ್ಡ್ ಟ್ರಂಪ್' ಹೆಸರಿನ ಎಮ್ಮೆ ವೈರಲ್ ಆಗಿದೆ. ಅಪರೂಪದ ಆಲ್ಬಿನೋ ತಳಿಯ ಈ ಎಮ್ಮೆ, ತನ್ನ ವಿಶಿಷ್ಟ ಹೊಂಬಣ್ಣದ ಕೇಶವಿನ್ಯಾಸದಿಂದಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಪಡೆದಿದೆ. 700 ಕೆಜಿ ತೂಕದ ಈ ಪ್ರಾಣಿ ಸೆಲ್ಫಿ ಆಕರ್ಷಣೆಯಾಗಿತ್ತು. ಈದ್ ಅಲ್-ಅಧಾ ಹಬ್ಬದಂದು ಇದನ್ನು ಬಲಿ ಕೊಡಲು ನಿರ್ಧರಿಸಲಾಗಿದೆ, ಮಾಲೀಕ ಭಾವುಕರಾಗಿದ್ದಾರೆ.

ಬಾಂಗ್ಲಾದೇಶ: ವೈರಲ್ ಆಗಿರುವ ‘ಡೊನಾಲ್ಡ್​ ಟ್ರಂಪ್’ ಎಮ್ಮೆಯನ್ನು ಬಲಿಕೊಡಲು ಮುಂದಾದ ಮಾಲೀಕ
ಎಮ್ಮೆImage Credit source: Reuters
ನಯನಾ ರಾಜೀವ್
|

Updated on: May 23, 2026 | 9:49 AM

Share

ಢಾಕಾ, ಮೇ 23: ಬಾಂಗ್ಲಾದೇಶ(Bangladesh)ದ ರಾಜಧಾನಿ ಢಾಕಾ ಬಳಿಯ ನಾರಾಯಣಗಂಜ್‌ನ ಜಮೀನೊಂದರಲ್ಲಿ ಸಾಕಲಾಗಿರುವ,  ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿರುವ ಅಪರೂಪದ ಡೊನಾಲ್ಡ್ ಟ್ರಂಪ್(Donald Trump) ಕೇಶ ವಿನ್ಯಾಸವನ್ನು ಹೋಲುವ ಎಮ್ಮೆಯನ್ನು ಮುಂಬರುವ ಈದ್ ಅಲ್-ಅಧಾ ಹಬ್ಬದಂದು ಬಲಿಕೊಡಲಾಗುತ್ತದೆ. ಈಗಾಗಲೇ ಅದನ್ನು ಮಾರಾಟ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

‘ಡೊನಾಲ್ಡ್ ಟ್ರಂಪ್’ ಎಂಬ ಹೆಸರು ಬಂದಿದ್ದು ಹೇಗೆ? ಸುಮಾರು 700 ಕೆಜಿ ತೂಕದ, ನಾಲ್ಕು ವರ್ಷದ ಈ ಎಮ್ಮೆ ಮೆಲನಿನ್ ಕೊರತೆಯಿಂದಾಗಿ ಬಿಳಿ ಚರ್ಮವನ್ನು ಹೊಂದಿರುವ ಅತ್ಯಂತ ಅಪರೂಪದ ‘ಆಲ್ಬಿನೋ’ ತಳಿಗೆ ಸೇರಿದ್ದಾಗಿದೆ. ಇದರ ಹಣೆಯ ಮೇಲೆ ಬೀಳುವ ಹೊಂಬಣ್ಣದ ಕೂದಲಿನ ಗೊಂಚಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಿಗ್ನೇಚರ್ ಕೇಶವಿನ್ಯಾಸವನ್ನು ಹೋಲುತ್ತದೆ. ಈ ವಿಶಿಷ್ಟ ಕೂದಲನ್ನು ಗಮನಿಸಿದ ಮಾಲೀಕ ಜಿಯಾವುದ್ದೀನ್ ಮೃಧಾ ಅವರ ಕಿರಿಯ ಸಹೋದರ, ಇದಕ್ಕೆ ಡೊನಾಲ್ಡ್ ಟ್ರಂಪ್ ಎಂಬ ಅಡ್ಡಹೆಸರನ್ನು ಇಟ್ಟಿದ್ದರು.

ಸೆಲ್ಫಿಗಾಗಿ ಮುಗಿಬಿದ್ದ ಜನಸಮೂಹ ಕಳೆದ ಕೆಲವು ವಾರಗಳಿಂದ ಈ ಅಪರೂಪದ ಎಮ್ಮೆಯೊಂದಿಗೆ ಸೆಲ್ಫಿ ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳಲು ದೂರದ ಜಿಲ್ಲೆಗಳಿಂದ ಪ್ರತಿದಿನ ನೂರಾರು ಜನರು ಜಮೀನಿಗೆ ಭೇಟಿ ನೀಡುತ್ತಿದ್ದರು. ಅದರಲ್ಲೂ ಈ ವಿಶಿಷ್ಟ ಪ್ರಾಣಿಯನ್ನು ನೋಡಲು ಮಕ್ಕಳು ಜಮೀನಿಗೆ ಹೋಗುವ ದಾರಿಯಲ್ಲಿ ಕಿಕ್ಕಿರಿದು ತುಂಬಿರುತ್ತಿದ್ದರು. ಅತ್ಯಂತ ಸೌಮ್ಯ ಮತ್ತು ಶಾಂತ ಸ್ವಭಾವದ ಈ ಎಮ್ಮೆಯ ಆರೋಗ್ಯಕ್ಕಾಗಿ ದಿನಕ್ಕೆ ನಾಲ್ಕು ಬಾರಿ ಸ್ನಾನ ಹಾಗೂ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ನಿರಂತರ ಜನಸಂದಣಿಯ ಒತ್ತಡದಿಂದಾಗಿ ಅದು ತೂಕ ಇಳಿಸಿಕೊಂಡಿದ್ದರಿಂದ, ಕೊನೆಯ ದಿನಗಳಲ್ಲಿ ಸಾರ್ವಜನಿಕ ವೀಕ್ಷಣೆಗೆ ನಿರ್ಬಂಧ ಹೇರಲಾಗಿತ್ತು.

ಮತ್ತಷ್ಟು ಓದಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ

ಜೂನ್ ತಿಂಗಳ ಕೊನೆಯಲ್ಲಿ ಬಾಂಗ್ಲಾದೇಶದಲ್ಲಿ ಈದ್ ಅಲ್-ಅಧಾ ಹಬ್ಬ ನಡೆಯಲಿದ್ದು, ಮುಸ್ಲಿಂ ಬಹುಸಂಖ್ಯಾತ ದೇಶದಲ್ಲಿ ಲಕ್ಷಾಂತರ ಪ್ರಾಣಿಗಳನ್ನು ಬಲಿ ನೀಡಲಾಗುತ್ತದೆ. ನಾನು ನನ್ನ ಪ್ರೀತಿಯ ಡೊನಾಲ್ಡ್ ಟ್ರಂಪ್ ಎಮ್ಮೆಯನ್ನು ತುಂಬಾ ಮಿಸ್ ಮಾಡಿಕೊಳ್ಳಲಿದ್ದೇನೆ, ಆದರೆ ಪ್ರೀತಿಯ ವಸ್ತುವನ್ನು ತ್ಯಾಗ ಮಾಡುವುದೇ ಈದ್ ಹಬ್ಬದ ಮೂಲ ಆಶಯವಾಗಿದೆ ಎಂದು ಮಾಲೀಕ ಜಿಯಾವುದ್ದೀನ್ ಮೃಧಾ ಭಾವುಕರಾಗಿ ನುಡಿದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಬಾಂಗ್ಲಾದೇಶದಲ್ಲಿ ಇಂತಹ ವಿಶಿಷ್ಟ ಮತ್ತು ದೈತ್ಯ ಪ್ರಾಣಿಗಳು ಹಬ್ಬದ ಸಮಯದಲ್ಲಿ ವೈರಲ್ ಆಗುವುದು ಹಾಗೂ ಸೆಲೆಬ್ರಿಟಿಗಳ ಹೆಸರು ಪಡೆಯುವುದು ದೊಡ್ಡ ಟ್ರೆಂಡ್ ಆಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More