Donkey Marriage: ಮಳೆಗಾಗಿ ಕತ್ತೆಗೆ ಮದುವೆ ಮಾಡಿದ ಗ್ರಾಮಸ್ಥರು, ಇಲ್ಲಿದೆ ವಿಡಿಯೋ

Donkey Marriage: ಮಳೆಗಾಗಿ ಕತ್ತೆಗೆ ಮದುವೆ ಮಾಡಿದ ಗ್ರಾಮಸ್ಥರು, ಇಲ್ಲಿದೆ ವಿಡಿಯೋ

ಬಸವರಾಜ ಮುದನೂರ್, ಚಿತ್ರದುರ್ಗ
| Updated By: Digi Tech Desk

Updated on:Aug 12, 2024 | 11:35 AM

Chitradurga News: ಕರ್ನಾಟಕ ರಾಜ್ಯದ ಕೆಲವೊಂದು ಕಡೆ ಭಾರೀ ಮಳೆಯಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ನೆನ್ನೆ ಮತ್ತು ಇವತ್ತು ಬೆಳಿಗ್ಗೆ ಸುರಿದ ಭಾರೀ ಮಳೆ ಬೆಂಗಳೂರಿನ ಜನ ತತ್ತರಿಸಿದ್ದಾರೆ. ಇದರ ನಡುವೆ ಮಳೆ ಇಲ್ಲ ಎಂದು ಚಿತ್ರದುರ್ಗದ ಜನ ಕತ್ತೆಗೆ ಮದುವೆ ಮಾಡಿದ್ದಾರೆ. ಈ ಬಗ್ಗೆ ಇಲ್ಲಿದೆ ವಿಡಿಯೋ

ರಾಜ್ಯದಲ್ಲಿ ಭಾರೀ ಮಳೆಯಾಗಿದ್ದು. ಮಳೆಯಿಂದ ಕೆಲವೊಂದು ಕಡೆ ಭಾರೀ ಅವಾಂತರಗಳು ಸೃಷ್ಟಿಯಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ನೆನ್ನೆ (ಆ.11) ಹಾಗೂ ಇಂದು ಬೆಳಿಗ್ಗೆ ಸುರಿದ ಮಳೆ ಎಲ್ಲವೂ ಮುಳುಗಡೆಯಾಗಿದೆ. ಮಳೆಯ ಬಂದು ಜನ, ವಾಹನ ಸವಾರರು ಪರಾಡುವಂತಾಗಿದೆ. ಆದರೆ ಚಿತ್ರದುರ್ಗದ ಈ ಗ್ರಾಮದಲ್ಲಿ ಮಳೆಯೇ ಬಂದಿಲ್ಲ. ಮಳೆಗಾಗಿ ಜನರು ಕತ್ತೆಗೆ ಮದುವೆ ಮಾಡಿದ್ದಾರೆ. ಚಿತ್ರದುರ್ಗ ದೊಡ್ಡಉಳ್ಳಾರ್ತಿ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಕತ್ತೆ ಮದುವೆ ಮಾಡಿದ್ದಾರೆ. ಜಿಲ್ಲೆ ಚಳ್ಳಕೆರೆ ತಾಲೂಕಿನ ದೊಡ್ಡಉಳ್ಳಾರ್ತಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಳೆ ಬರದೇ ಚಳ್ಳಕೆರೆ ತಾಲೂಕಿನಲ್ಲಿ ಬರದ ಛಾಯೆ ಉಂಟಾಗಿದ್ದು, ಮಳೆಗಾಗಿ ಗ್ರಾಮಸ್ಥರು ಕತ್ತೆಗೆ ಮದುವೆ ಮಾಡಿದ್ದಾರೆ. ಶಾಸ್ತ್ರೋಕ್ತವಾಗಿ ಕತ್ತೆ ಮದುವೆ ಮಾಡಿ ಮಳೆಗಾಗಿ ಪ್ರಾರ್ಥನೆ ಮಾಡಲಾಗಿದೆ. ಇದು ಇಲ್ಲಿ ಪುರಾತನ ಆಚರಣೆ ಎಂದು ಹೇಳಲಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 12, 2024 11:05 AM