ಡಿಕೆಶಿ ಸರ್, ಕಾಫಿ ಕುಡಿದಿದ್ದಕ್ಕೆ ದುಡ್ಡು ಕೊಡಬೇಡಿ ನಾವು ಕೊಡ್ತೀವಿ ಎಂದ ಮಹಿಳೆ!
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು. ವಸತಿ, ಮಾರುಕಟ್ಟೆ ಸ್ಥಳಾಂತರದ ಬಗ್ಗೆ ಮನವಿ ಆಲಿಸಿದ ಸಿಎಂ, ಬಾಲ ಕಾರ್ಮಿಕ ಪದ್ಧತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ತಕ್ಷಣ ಕ್ರಮಕ್ಕೆ ಆದೇಶಿಸಿದರು. ಈ ಭೇಟಿ ಕಾರ್ಮಿಕರಲ್ಲಿ ಭರವಸೆ ಮೂಡಿಸಿತು.
ಬೆಂಗಳೂರು, ಸೆಪ್ಟೆಂಬರ್ 08: ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿದ್ದ ಸಿಎಂ ಡಿ.ಕೆ. ಶಿವಕುಮಾರ್, ಶುಂಠಿ ಮಾರಾಟ ಮಾಡುವ ಮಹಿಳಾ ವ್ಯಾಪಾರಿಗಳ ಸಮಸ್ಯೆ ಆಲಿಸಿದರು. ಈ ವೇಳೆ ಮಹಿಳೆಯರು ನೀಡಿದ ಕಾಫಿ ಕುಡಿದ ಸಿಎಂ ಹಣ ಕೊಡಲು ಮುಂದಾದಾಗ, “ಡಿಕೆಶಿ ಸರ್, ನೀವು ಕಾಫಿ ಕುಡಿದಿದ್ದಕ್ಕೆ ದುಡ್ಡು ಕೊಡಬೇಡಿ, ನಾವೇ ಕೊಡ್ತೀವಿ” ಎಂದು ಮಹಿಳೆಯರು ಪ್ರೀತಿಯಿಂದ ವಿನಂತಿಸಿಕೊಂಡಿದ್ದು ವಿಶೇಷವಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
