ದಾವಣಗೆರೆಯಲ್ಲಿ ಕಾಂಗ್ರೆಸ್ ಮತ್ತೊಂದು ಶಾಕ್: ಅಖಾಡಕ್ಕಿಳಿದ ಮತ್ತೋರ್ವ ಪ್ರಭಾವಿ ಮುಸ್ಲಿಂ ನಾಯಕ

Edited By:

Updated on: Mar 27, 2026 | 2:16 PM

ಮುಸ್ಲಿಂ ಸಮುದಾಯ ರಾಜ್ಯ ನಾಯಕ ಸಿಎಂ ಇಬ್ರಾಹಿಂ ಸಹ ದಾಣಗೆರೆ ಅಖಾಡಕ್ಕಿಳಿಯಲಿದ್ದು, ಪಕ್ಷೇತರ ಅಭ್ಯರ್ಥಿ ಅಭ್ಯರ್ಥಿ ಖಾಲಿದ್ ಆದಿಲ್ ಪಾಷಾ ಪರ ಪ್ರಚಾರ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದರಿಂದ ಕಾಂಗ್ರೆಸ್​​ಗೆ ಮತ್ತಷ್ಟು ಆತಂಕ ಎದುರಾಗಿದೆ. ಯಾಕಂದ್ರೆ, ಸಿಎಂ ಇಬ್ರಾಹಿಂದ ಸಹ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರು, ಜಮೀರ್ ಅಹಮ್ಮದ್ ಖಾನ್ ಹೇಗೋ ಹಾಗೇ ಇಬ್ರಾಹಿಂ ಸಹ ತಮ್ಮ ಸಮುದಾಯದಲ್ಲಿ ಹಿಡಿತ ಹೊಂದಿದ್ದಾರೆ. ಹೀಗಾಗಿ ಇಬ್ರಾಹಿಂ ಪಕ್ಷೇತರ ಅಭ್ಯರ್ಥಿ ಪರ ಪ್ರಚಾರ ಮಾಡಿ ಗೆಲ್ಲಿಸುವ ಶಕ್ತಿ ಇಲ್ಲವಾದರೂ ಮುಸ್ಲಿಂ ಮತಗಳನ್ನ ಸೆಳೆದ ಕಾಂಗ್ರೆಸ್ ಸೋಲಿಗೆ ಕಾರಣವಾಗಬಹುದು. ಹೀಗಾಗಿ ಸಿಎಂ ಇಬ್ರಾಹಿಂದ ನಡೆ ತೀವ್ರ ಕುತೂಹಲ ಮೂಡಿಸಿದೆ.​​​​

ದಾವಣಗೆರೆ, (ಮಾರ್ಚ್ 27): ದಾವಣಗೆರೆ (Davanagere) ಬೆಣ್ಣೆ ದೋಸೆಯಂತೆ ಸಲೀಸಾಗಿ ಉಪಚುನಾವಣೆ (Davanagere South By Poll) ಗೆದ್ದು ಬೀಗಲು ಮುಂದಾಗಿದ್ದ ಕಾಂಗ್ರೆಸ್​ಗೆ ದಾವಣಗೆರೆ ದಕ್ಷಿಣ ಕ್ಷೇತ್ರ ಬಿಸಿತುಪ್ಪವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರ್​ ಗೆ ಮುಸ್ಲಿಂ (Muslim)  ಮತಗಳು ಕೈತಪ್ಪುವ ಆತಂಕ ಶುರುವಾಗಿದೆ. ಯಾಕಂದ್ರೆ, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರೋ ಸಾದಿಕ್ ಪೈಲ್ವಾನ್, ನಾಮಪತ್ರ ವಾಪಸ್ ಪಡೆಯದೆ, ತಮ್ಮ ಸ್ಪರ್ಧೆಯ ನಿಲುವು ಅಚಲ ಎಂದು ಸಂದೇಶ ಸಾರಿದ್ದಾರೆ. ಅಲ್ಲದೇ ಪೈಲ್ವಾನ್ ಸೇರಿದಂತೆ ಬರೋಬ್ಬರಿ 14 ಮುಸ್ಲಿಂ ಅಭ್ಯರ್ಥಿಗಳು ದಾವಣಗೆರೆ ದಕ್ಷಿಣ ಕಣದಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್​​ಗೆ ಆತಂಕವಾಗಿರುವುದು ಸಾಮಾನ್ಯ. ನಿನ್ನೆ (ಮಾರ್ಚ್ 26) ಕಾಂಗ್ರೆಸ್​ನ ನಾಯಕರು ಖುದ್ದು ಸಾದಿಕ್ ಮನೆಗೆ ಬಂದು ಸಂಧಾನಕ್ಕೆ ಯತ್ನಿಸಿದ್ದಾರೆ. ಈ ವೇಳೆ ಸಾದಿಕ್ ಬೆಂಬಲಿಗರು ಗೋ ಬ್ಯಾಕ್ ಘೋಷಣೆ ಕೂಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮುಸ್ಲಿಂ ಸಮುದಾಯ ರಾಜ್ಯ ನಾಯಕ ಸಿಎಂ ಇಬ್ರಾಹಿಂ ಸಹ ದಾಣಗೆರೆ ಅಖಾಡಕ್ಕಿಳಿಯಲಿದ್ದು, ಪಕ್ಷೇತರ ಅಭ್ಯರ್ಥಿ ಅಭ್ಯರ್ಥಿ ಖಾಲಿದ್ ಆದಿಲ್ ಪಾಷಾ ಪರ ಪ್ರಚಾರ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದರಿಂದ ಕಾಂಗ್ರೆಸ್​​ಗೆ ಮತ್ತಷ್ಟು ಆತಂಕ ಎದುರಾಗಿದೆ.

ಯಾಕಂದ್ರೆ, ಸಿಎಂ ಇಬ್ರಾಹಿಂದ ಸಹ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರು, ಜಮೀರ್ ಅಹಮ್ಮದ್ ಖಾನ್ ಹೇಗೋ ಹಾಗೇ ಇಬ್ರಾಹಿಂ ಸಹ ತಮ್ಮ ಸಮುದಾಯದಲ್ಲಿ ಹಿಡಿತ ಹೊಂದಿದ್ದಾರೆ. ಹೀಗಾಗಿ ಇಬ್ರಾಹಿಂ ಪಕ್ಷೇತರ ಅಭ್ಯರ್ಥಿ ಪರ ಪ್ರಚಾರ ಮಾಡಿ ಗೆಲ್ಲಿಸುವ ಶಕ್ತಿ ಇಲ್ಲವಾದರೂ ಮುಸ್ಲಿಂ ಮತಗಳನ್ನ ಸೆಳೆದ ಕಾಂಗ್ರೆಸ್ ಸೋಲಿಗೆ ಕಾರಣವಾಗಬಹುದು. ಹೀಗಾಗಿ ಸಿಎಂ ಇಬ್ರಾಹಿಂದ ನಡೆ ತೀವ್ರ ಕುತೂಹಲ ಮೂಡಿಸಿದೆ.​​​​

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More